Ad imageAd image

ಮುಗುಳುಕೋಡಮಠಕ್ಕೆ ಡಾ! ಶ್ರೀ ಮುರುಘರಾಜೇಂದ್ರ್ ಮಹಾಸ್ವಾಮಿಗಳು ಭೇಟಿ

Bharath Vaibhav
ಮುಗುಳುಕೋಡಮಠಕ್ಕೆ ಡಾ! ಶ್ರೀ ಮುರುಘರಾಜೇಂದ್ರ್ ಮಹಾಸ್ವಾಮಿಗಳು ಭೇಟಿ
WhatsApp Group Join Now
Telegram Group Join Now

ಬಸವನ ಬಾಗೇವಾಡಿ: ನಗರದಲ್ಲಿ ಡಾ! ಶ್ರೀ ಮುರುಘರಾಜೇಂದ್ರ್ ಮಹಾಸ್ವಾಮಿಗಳು ಮುಗಳಕೋಡ ಹಾಗೂ ಜಿಡಗಾಮಠ ಇವರು ಬಸವನ ಬಾಗೇವಾಡಿ ನಗರದಲ್ಲಿರುವ ಮುಗುಳುಕೋಡಮಠಕ್ಕೆ ಭೇಟಿ ನೀಡಿದರು.

ಇವರನ್ನು ಯ ಲ್ಲಾಲಿಂಗ ಮಠದ ಗುರುಗಳು ಹಾಗೂ ಮಠದ ಭಕ್ತರು ಪೂಜ್ಯರನ್ನು ಭಕ್ತಿಪೂರ್ವಕವಾಗಿ ಸಕಲ ಗೌರವಗಳೊಂದಿಗೆ ಬರಮಾಡಿಕೊಂಡರು.ಭಕ್ತರು ಪುಷ್ಪಾರ್ಚನೆ ಮಾಡಿದರು ಡೊಳ್ಳು ಬಾರಿಸುತ್ತಾ ಜಯಘೋಷಣೆ ಕೋಗುತ್ತಾ ಹೃದಯಪೂರ್ವಕವಾಗಿ ಬರಮಾಡಿಕೊಂಡರು.

ಶ್ರೀ ಮುರುಘ ರಾಜೇಂದ್ರ ಮಹಾಸ್ವಾಮಿಗಳು ಮಠವನ್ನೆಲ್ಲ ತಿರುಗಾಡಿ ಮಠದ ಆವರಣ ಅಭಿವೃದ್ಧಿಯನ್ನು ಗಮನಿಸಿದರು. ಯಲ್ಲಾ ಲಿಂಗಮಠವೂ ಸಾಕಷ್ಟು ಅಭಿವೃದ್ಧಿಯನ್ನು ಹೊಂದಿದ್ದು ಸಂತೋಷಪಟ್ಟರು. ನಂತರ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಈಗ ಇರುವ ಯಲ್ಲಾ ಲಿಂಗ ಗುರುಗಳು ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಯಲ್ಲಾಲಿಂಗ ಪೂಜ್ಯರು ಹಾಗೂ ಸದ್ಭಕ್ತರು ಪೂಜ್ಯರ ಪಾದ ಪೂಜೆ ನೆರವೇರಿಸಿದರು. ಸಕಲ ಸದ್ಭಕ್ತರು ಜಯ ಘೋಷನೆ ಕೂಗಿದರು.

ಶ್ರೀ ಮುರುಗರಾಜೇಂದ್ರ ಪೂಜ್ಯರು ಆಶೀರ್ವಚನ ನೀಡಿದರು. ಶ್ರೀ ಮಠವು ನಮ್ಮ ನೂರಾರು ಮಠಗಳಲ್ಲಿ ಅತ್ಯಂತ ಅಭಿವೃದ್ಧಿಯನ್ನು ಹೊಂದಿದೆ. ಎಲ್ಲಾಭಕ್ತರು ಪೂಜ್ಯರ ಆಶೀರ್ವಾದ ಪಡೆದರು ನಂತರ ಶ್ರೀ ಮುರುಗರಾಜೇಂದ್ರ ಪೂಜ್ಯರು ಬಸವನ ಬಾಗೇವಾಡಿಗೆ ಆಗಮಿಸಿದ್ದು ಯಲ್ಲಾ ಲಿಂಗ ಮಠದ ಪೂಜ್ಯರು ನಮ್ಮೆಲ್ಲರ ಸುದೈವ ಎಂದರು. ಕಾರ್ಯಕ್ರಮದಲ್ಲಿ ಪೂಜ್ಯರು ಊರಿನ ಮುಖಂಡರು ಹಲವಾರು ಭಕ್ತರು ಉಪಸ್ಥಿತರಿದ್ದರು.

ವರದಿ: ಕೃಷ್ಣ ಎಚ್ ರಾಠೋಡ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!