ಭಾಲ್ಕಿ : ಪಟ್ಟಣದ ಭೀಮಣ್ಣಾ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯಕ್ಕೆ (ಬಿಕೆಐಟಿ) ಬಿಗಿನ್‌ಅಪ್ ರಿರ‍್ಚ ಇಂಟಲಿಜೆನ್ಸ್ ಪ್ರೈವೇಟ್ ಲಿ. ಸಂಸ್ಥೆಯ ವತಿಯಿಂದ ಕೊಡುಮಾಡುವ ಎಕ್ಷಲೆನ್ಸ್ ಇನ್ ಎಜುಕೇಶನಲ್ ಸ್ಟ್ಯಾಂಡರ್ಡ್ ಅಡಾಪ್ಟೆಬಿಲಿಟಿ ಆಂಡ್ಯ ಇಂಪ್ಲಿಮೆಂಟೇಶನ್ ಅವರ‍್ಡ (ಶೈಕ್ಷಣಿಕ ಸಾಧನಾ ಪ್ರಶಸ್ತಿ) ನೀಡಲಾಗಿದೆ ಎಂದು ಬಿಕೆಐಟಿ ಪ್ರಾಂಶುಪಾಲ ಡಾ. ಉದಯಕುಮಾರ ಕಲ್ಯಾಣೆ ತಿಳಿಸಿದರು.
ಪಟ್ಟಣದ ಬಿಕೆಐಟಿ ಸಭಾಂಗಣದಲ್ಲಿ ಸೋಮವಾರ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ರಾಷ್ಟçಮಟ್ಟದ ಸಂಸ್ಥೆಯ ವತಿಯಿಂದ ಇಂತಹ ಪ್ರತಿಷ್ಠಿತ ಪ್ರಶಸ್ತಿ ಸಿಕ್ಕಿರಿವುದು ಹೆಮ್ಮೆಯ ವಿಷಯವಾಗಿದೆ. ಬಿಗಿನ್‌ಅಪ್ ರಿರ‍್ಚ ಇಂಟಿಲಿಜೆನ್ಸ್ ಸಂಸ್ಥೆಯವರು ಕೂಲಂಕುಶವಾಗಿ ಪರಿಶೀಲನೆ ನಡೆಸಿದ ನಂತರವೇ ಇಂತಹ ಪ್ರಶಸ್ತಿ ನೀಡುತ್ತಾರೆ. ರ‍್ನಾಟಕದಲ್ಲಿಯೇ ಬಿಕೆಐಟಿ ಗೆ ಈ ಪ್ರಶಸ್ತಿ ನೀಡಿರುವುದು ಈ ಕಾಲೇಜಿನ ಶೈಕ್ಷಣಿಕ ಕ್ಷಮತೆಗೆ ಕಾರಣ ವಾಗಿದೆ. ಸಂಸ್ಥೆಯ ಅಧ್ಯಕ್ಷ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮತ್ತು ಕರ‍್ಯರ‍್ಶಿ ಸಂಸದ ಸಾಗರ ಖಂಡ್ರೆಯವರು ಬಿಕೆಐಟಿ ಕಾಲೇಜನ್ನು ಐ ಐ ಟಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಇಚ್ಛೆ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಕಾಲೇಜಿನ ಉತ್ಕೃಷ್ಟತಾ ಕೇಂದ್ರದ ಮುಖಾಂತರ ಮೊದಲನೆ ಸೆಮಿಸ್ಟರ್‌ನಿಂದಲೇ ಕೈಗಾರಿಕಾ ನೈಪುಣ್ಯತೆ ಮತ್ತು ಕೌಶಲ್ಯ ತರಬೇತಿ ನೀಡಲಾಗುತ್ತಿದೆ ಎಂದಿದ್ದಾರೆ.
ವರದಿ: ಸಂತೋಷ ಬಿಜಿ ಪಾಟೀಲ




