ಕಲಘಟಗಿ:- ನಿತ್ಯದಲ್ಲಿ ರೋಗಿಗಳ ಸೇವೆಯೆ ನಮ್ಮ ಧ್ಯೆಯ ಅವರ ಪ್ರಾಣ ಕಾಪಾಡಿದರೆ ನಮ್ಮ ಜೀವನ ಸಾರ್ಥಕವೆಂದು ಸೇವೆ ಸಲ್ಲಿಸುತ್ತಿರುವ ವೈದ್ಯರ ಮೇಲೆ ಅತ್ಯಾಚಾರವೆಸಗಿಸಿ ಹತ್ಯೆ ಮಾಡಿದವರನ್ನು ಗಲ್ಲಿಗೆರಸಬೇಕು ಎಂದು ಹಿರಿಯ ವೈದ್ಯರಾದ ಡಾ. ವಾಯ್ .ಬಿ ಡಂಬಳ ಮಾತನಾಡಿದರು
ಪಟ್ಟಣದಲ್ಲಿ ಆಯೋಜಿಸಿದ್ದ ಕೊಲ್ಕೊತಾದಲ್ಲಿ ವೈದ್ಯೆ ಮೌಮಿತಾ ದೇಬನಾಥ ಮೇಲೆ ಅತ್ಯಾಚಾರವೆಸಗಿದ್ದನ್ನು ವಿರೋದಿಸಿ ವೈದ್ಯರು ಕ್ಯಾಂಡಲ ಬೆಳಗಿಸಿ ಪ್ರತಿಭಟನೆ ನಡೆಸಿದ ಸಂಧರ್ಬದಲ್ಲಿ ನಿತ್ಯದಲ್ಲಿ ಅನೇಕ ವೈದ್ಯರು ತಮ್ಮ ಪ್ರಾಣವನ್ನು ಲೆಖ್ಖಿಸದೆ ರೋಗಿಗಳನ್ನು ಕಾಪಾಡುತ್ತಾರೆ ಸಾಮಾನ್ಯ ಜನರು ದೇವರಗಿಂತ ಹೆಚ್ಚಾಗಿ ವೈದ್ಯರನ್ನು ಪ್ರೀತಿಸುತ್ತಾರೆ ಅಂತಹದರಲ್ಲಿ ಇ ರೀತಿ ಅವಮಾನೀಯ ಕೃತ್ಯ ಎಸಗಿದವರು ಕೇವಲ ಶಿಕ್ಷೆಗೆ ಮಾತ್ರ ಅರ್ಹರರು ಎಂದರು.
ಡಾ ವಿ.ಡಿ ಉಣಕಲ್ಲಕರ ಮಾತನಾಡಿ ವೈದ್ಯರ ಮೇಲೆ ಹಲ್ಲೆನಡೆದಿರುವುದು ಖಂಡನೀಯ ಸರಕಾರ ಇದರ ಬಗ್ಗೆ ಗಂಭಿರ ಚಿಂತನೆ ನಡೆಯಿಸಿ ವೈದರ ರಕ್ಷಣೆಗಾಗಿ ಕಾನೂನು ಜಾರಿಗೆ ತರಬೇಕು ಎಂದು ಸರಕಾರಕ್ಕೆ ಮನವಿ ಮಾಡಿಕೊಂಡರು.ತಾಲೂಕಿನ ಎಲ್ಲ ವೈದ್ಯರು ಹಾಗೂ ಔಷದಿ ಅಂಗಡಿ ಮಾಲಿಕರು ತಮ್ಮ ಆಸ್ಪತ್ರೆ ಹಾಗೂ ಮುಗ್ಗಟ್ಟುಗಳನ್ನು ಬಂದ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಪ್ರತಿಭಟನೆಯು ಬಮ್ಮಿಗಟ್ಟಿ ಕ್ರಾಸ್ ನಿಂದ ಆಂಜನೇಯ ಸರ್ಕಲ್ ಮೂಲಕ ಸಾಗಿ ಗ್ರೇಡ ೨ ತಹಶಿಲ್ದಾರ ಬಸವರಾಜ ಹೊಂಕಣ್ಣವರ ಇವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ವೈದ್ಯರಾದ ವಿ.ಸಿ. ಮಲ್ಲಿಗವಾಡ,ಮುತ್ತುರಾಜ ಪಾಟೀಲ,ಬಿ.ಎಂ ಹಿರೇಮಠ,ಸಂಜಯ ಕರಡಿ,ಜಿ.ಕೆ ಕುಂಬಾರ ಸಂಜಯ ಕಟ್ಟಿ,ವಿಶ್ವನಾಥ ಕರ್ಲವಾಡ,ಮಾಲಿ ಪಾಟೀಲ,ಎಸ್.ಎನ್ನ ಹೊಸಳ್ಳಿ, ಶೋಭಾ ಕುಡಚಿ,ಗೌತಮ ಪಾಟೀಲ,ಸಮತಾ ಮಲ್ಲಾಪೂರ. ನಾಗರಾಜ ಹಾವೇರಿ,ಸತೀಶ ಮಲ್ಲಾಪೂರ ಮಹೇಶ ತಿಪ್ಪಣ್ಣವರ ಶ್ವೇತಾ ಕುಬಿಹಾಳ ಪಲ್ಲವಿ ಪಾಟೀಲ,ಜಿಲಾನಿ ,ಸಾಗರ ಧಾನಿ, ಸಾಗರ ಕಾಮಧೇನು ಔಷದಿ ಅಂಗಡಿ ಮಾಲಿಕರಾದ ರಾಜೇಂದ್ರ ಪಟ್ಟಣಶೆಟ್ಟಿ, ಯಲ್ಲಪ್ಪ ಉಳ್ಳಾಗಡ್ಡಿ ಪ್ರವೀಣ ಬಳಗೇರ,ಕಾರ್ತೀಕ ಮುಂಡರಗಿ,ಮಲ್ಲಿಕಾರ್ಜುನ ಮಗುಳಿ,ಗಂಗಾಧರ ಹುಬ್ಬಳ್ಳಿಮಠ,ಆದರ್ಶ ಪಾಟೀಲ,ಸಂಗಮೇಶ ತೋಟಗಂಟಿ ಭಾಗವಹಿಸಿದ್ದರು.ಚಿತ್ರ ಇದೆ ೧೭ಕೆ.ಎಲ್.ಜಿ೧ ಕಲಘಟಗಿ ಪಟ್ಟಣದ ವೈದರು ಕೊಲ್ಕೊತಾದಲ್ಲಿ ವೈದ್ಯೆ ಮೌಮಿತಾ ದೇಬನಾಥ ಮೇಲೆ ಅತ್ಯಾಚಾರವೆಸಗಿದ್ದನ್ನು ವಿರೋದಿಸಿ ಪ್ರತಿಭಟನೆ ಮೂಕಲ ಗ್ರೇಡ ೨ ತಹಶಿಲ್ದಾರ ಬಸವರಾಜ ಹೊಂಕಣ್ಣವರ ಮನವಿ ಸಲ್ಲಿಸಿದರು.