ಅಥಣಿ: ತಾಲೂಕಿನ ಐಗಳಿ ಗ್ರಾಮದ ಗರ್ಭಿಣಿ ಮಹಿಳೆ ಶಾರದಾ ಮಾದರ ಹಾಗೂ ಅವರ ಕುಟುಂಬಸ್ಥರು ಗುರುವಾರಂದು ಅಥಣಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಹೆರಿಗೆ ಮಾಡಿಸುವ ಸಲವಾಗಿ ಆಗಮಿಸಿದ್ದಿರು ಡಾ ವಿಜಯ ಕೊರೆಣ್ಣವರ ಅವರು ಮಹಿಳೆಯನ್ನು ಪರೀಕ್ಷೆಸಿ ಸ್ಕ್ಯಾನಿಂಗ್ ಮಾಡಲು ತಿಳಿಸಿದ್ದರು ಸ್ಕ್ಯಾನಿಂಗ್ ಮಾಡಿದ ನಂತರ ಮಹಿಳೆಯ ಗರ್ಭದಲ್ಲಿ ನೀರು ಕಡಿಮೆ ಹಾಗೂ ಮಗುವಿಗೆ ಹುರಿ ಸುತ್ತಿರುವುದು ಕಂಡು ಬಂದಿತ್ತು ಇದನ್ನು ಗಮನಸಿದ ವೈದ್ಯ ಡಾ ವಿಜಯ ಅವರು ಖಾಸಗಿ ಆಸ್ಪತ್ರೆಗೆ ತೆರಳಲು ತಿಳಿಸಿದ್ದರು.
ಆದರೆ ಬಡತನದಲ್ಲಿ ಇದ್ದ ಕುಟುಂಬಕ್ಕೆ ಸಾವಿರಾರು ರೂ ಆಸ್ಪತ್ರೆ ಬಿಲ್ಲು ಕಟ್ಟಲು ನಮ್ಮ ಬಳಿ ಹಣ ಇಲ್ಲ ಎಂದು ತಿಳಿಸಿದರು ಅವರ ಕಷ್ಟವನ್ನು ಅರ್ಥ ಮಾಡಿಕೊಂಡ ಡಾ ವಿಜಯ ಕೊರೆಣ್ಣವರ ಅವರು ಮಹಿಳೆಯರಿಗೆ ದೈರ್ಯ ಹೇಳಿ ಎಷ್ಟೆ ಕಸ್ಟವಾದರು ನಾನು ಹೆರಿಗೆ ಮಾಡಿಕೊಳ್ಳುತ್ತೇನೆ ನಿಮ್ಮ ಕಷ್ಟ ಅರ್ಥವಾಗಿದೆ ಎಂದು ಹೇಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿದ್ದಾರೆ ತಾಯಿ ಮಗು ಆರೋಗ್ಯವಾಗಿ ಇದ್ದು ಕಷ್ಟದಲ್ಲಿ ಇದ್ದ ಕುಟುಂಬಕ್ಕೆ ಡಾ ವಿಜಯ ಕೊರೆಣ್ಣವರ ದೇವರ ಸ್ವರೂಪಿಯಾಗಿದ್ದಾರೆ ಇದಕ್ಕೆ ಸಿಬ್ಬಂದಿಗಳು ಸಾತ್ ನೀಡಿದ್ದಾರೆ ದಿನ ನಿತ್ಯ ಇವರ ಸೇವೆ ತಾಲೂಕಿನ ಎಷ್ಟು ಜನಕ್ಕೆ ಸ್ಪೂರ್ತಿಯಾಗಿದೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರು ಎಲ್ಲ ವೈದ್ಯರು ಹಾಗೂ ಸಿಬ್ಬಂದಿಗಳು ಮಾದರಿಯಾಗಿದ್ದಾರೆ.
ವರದಿ :ಆಕಾಶ ಮಾದರ ಐಗಳಿ




