Ad imageAd image

ಕನ್ನಡ ಶಾಲೆ ಮತ್ತು ಭಾಷೆ ಉಳಿವಿಗಾಗಿ ಡಾ, ವಿಷ್ಣುವರ್ಧನ್ – ಅಭಿಮಾನಿ ದ್ವಿಚಕ್ರ ವಾಹನದ ಮೂಲಕ ರಥಯಾತ್ರೆ.

Bharath Vaibhav
ಕನ್ನಡ ಶಾಲೆ ಮತ್ತು ಭಾಷೆ ಉಳಿವಿಗಾಗಿ ಡಾ, ವಿಷ್ಣುವರ್ಧನ್ – ಅಭಿಮಾನಿ ದ್ವಿಚಕ್ರ ವಾಹನದ ಮೂಲಕ ರಥಯಾತ್ರೆ.
WhatsApp Group Join Now
Telegram Group Join Now

ಮುದಗಲ್ಲ : ಕನ್ನಡ ಭಾಷೆ, ನೆಲ ಜಲ ಕುರಿತು ಅರಿವು ಮೂಡಿಸಲು ಬೆಂಗಳೂರಿನಿಂದ ಬೀದರ್ ವರೆಗೂ ಸ್ಕೂಟರಿನಲ್ಲಿ ಹೊರಟಿರುವ ಜ್ಯೂನಿಯರ್ ವಿಷ್ಣುವರ್ದನ್ ಎಂದೇ ಹೆಸರು ಮಾಡಿರುವ, ವಿಷ್ಣುವರ್ಧನ್ ಅಪ್ಪಟ ಅಭಿಮಾನಿ ನಾಗಬಸಯ್ಯ ಮಲ್ಲಯ್ಯ ಮಳಲಿಮಠ ಅವರು ಐತಿಹಾಸಿಕ ಮುದಗಲ್ಲ ಪಟ್ಟಣಕ್ಕೆ ಭೇಟಿ ನೀಡಿದರು.

ಈ ವೇಳೆ ಮುದಗಲ್ಲ ಹಾಜಿ ಮಲಂಗ ಬಾಬಾ ಕನ್ನಡ ಸಾಹಿತ್ಯ ಪರಿಷತ್ ಮುದಗಲ್ಲ ಘಟಕದ ಅಧ್ಯಕ್ಷರು, ಹಾಗೂ ಶಿವರಾಜ ಸುಂಕದ ,ಮಹಾಂತೇಶ ಅಪ್ಪು ವಿಧ್ಯಾದಾಮ ಸಂಸ್ಥಾಪಕ ,ವಿರೇಶ ಕುಂಬಾರ ,ಬಸವರಾಜ ಕುಂಬಾರ ಹಾಗೂ ವಿಷ್ಣು ಅಭಿಮಾನ ಬಳಗದ ಸದಸ್ಯರು ಅವರನ್ನು ಸ್ವಾಗತಿಸಿ, ಸನ್ಮಾನಿಸಿ ಬಿಳ್ಕೊಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕನ್ನಡ ನಾಡು ನುಡಿ ಸಂಸ್ಕೃತಿ ಕುರಿತು ಅರಿವು ಮೂಡಿಸುವ ಕೆಲಸ ಮಾಡುತ್ತಿರುವೆ. ನನ್ನ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ವಿಷ್ಣು ಅಭಿಮಾನಿಯಾಗಿ ನನ್ನ ಕರ್ತವ್ಯವನ್ನು ನಾನು ಮಾಡುತ್ತಿರುವೆ ಎಂದರು. ಇವರು ಬಂದ ಸಂದರ್ಭದಲ್ಲಿ ವಿಷ್ಣು ಅಭಿಮಾನಿಗಳು ಸೇರಿ ಅನೇಕರು ಶುಭ ಹಾರೈಸಿ ಬೀಳ್ಕೊಟ್ಟರು.

ರಾಣೇಬೆನ್ನೂರು ತಾಲ್ಲೂಕಿನ ಐರಣಿ ಗ್ರಾಮದವರಾದ ನಾಗಬಸಯ್ಯ ಹತ್ತು ವರ್ಷಗಳಿಂದ ಪ್ರತಿ ಅಕ್ಟೋಬರಲ್ಲಿ ತಮ್ಮ ದ್ವಿಚಕ್ರ ವಾಹನದ ಮೂಲಕ ನಾಡಿನಾದ್ಯಂತ ಸಂಚರಿಸುವ ಅವರು, ಕನ್ನಡ ಭಾಷೆ, ನೆಲ, ಜಲ ಸಂರಕ್ಷಣೆ ಮಾಡುವ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಸದ್ಯ ಬೆಂಗಳೂರಿನಲ್ಲಿ ಖಾಸಗಿ ನೌಕರಿಯಲ್ಲಿರುವ ನಾಗಬಸಯ್ಯ ಅವರು ತಮ್ಮದೇ ಆಕ್ಟೀವಾ 3 ಜಿ.ಸ್ಕೂಟರ್‍ನ ಕನ್ನಡ ಬಾವುಟ, ತೋರಣಗಳಿಂದ ಸಿಂಗರಿಸಿ, ಭುವನೇಶ್ವರಿ ಮತ್ತು ವಿಷ್ಣು ಚಿತ್ರಗಳನ್ನು ಅಳವಡಿಸಿ ಕೊಂಡು ಕನ್ನಡ ರಥವನ್ನಾಗಿಸಿ ಕೊಂಡಿದ್ದಾರೆ. ವಿಷ್ಣು ಅವರ ವೇಷ ಭೂಷಣ ತೊಟ್ಟು ಆಕರ್ಷಿಸುತ್ತಾರೆ. ವಿಷ್ಣು ಅಭಿಮಾನಿಗಿರುವ ಇವರು ಅನೇಕ ಕಡೆ ಜ್ಯೂ. ವಿಷ್ಣುವಾಗಿ ಕಾರ್ಯಕ್ರಮಗಳನ್ನು ನೀಡಿ ಅದರಿಂದ ಬಂದ ಹಣವನ್ನು ಇಂತಹ ಜಾಗೃತಿಗಾಗಿ ಬಳಕೆ ಮಾಡುತ್ತಿದ್ದಾರೆ.

ಈ ರೀತಿ ಸಂಚಾರ ಕೈಗೊಂಡಾಗ ಅನೇಕ ನಗರ ಪಟ್ಟಣಗಳಲ್ಲಿ ಪೊಲೀಸರು ಹಾಗೂ ಸ್ಥಳೀಯರು ಅವರ ವಾಹನಕ್ಕೆ ಪೆಟ್ರೂಲ್ ಖರ್ಚು ನೀಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಅಬ್ದುಲ್ ಮಜಿದ್, ಆನಂದ ,ಇಸ್ಮಾಯಿಲ್
,ಮಹಮ್ಮದ್ ,ಅನೀಫ್ ಆಟೋ ಚಾಲಕರು ಅನೇಕ ವಿಷ್ಣುವರ್ಧನ್ ಅಭಿಮಾನಿಗಳು ಎಲ್ಲಾ ಐತಿಹಾಸಿಕ ಮುದಗಲ್ಲ ಸ್ವಾಗತವನ್ನು ಮಾಡಿದರು. ವಿಷ್ಣುವರ್ಧನ್ ಅನೇಕ ಅಭಿಮಾನಿಗಳು ಜೊತೆಗೂಡಿ ಮುಂದಿನ ಪ್ರಯಾಣ ಸುಖಕರವಾಗಿರಲಿ ಎಂದು ಹಾರೈಸಿದರು.

ವರದಿ: ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!