ಚೇಳೂರು: ಚರಂಡಿ ಸ್ವಚ್ಚತೆ ಮಾಡುವರು ಸುರಕ್ಷಾ ಕವಚ ಧರಿಸಿ ಹಾಗೂ ಹಾಗೂ ರಕ್ಷಣಾ ಸಾಮಗ್ರಿಗಳನ್ನು ಬಳಸಿಯೇ ಸ್ವಚ್ಛತಾ ಕಾರ್ಯ ಮಾಡಬೇಕು ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬರಿಗಾಲು ಮತ್ತು ಬರಿಗೈಯಲ್ಲಿ ಚರಂಡಿಗೆ ಇಳಿಸಿ ಸ್ವಚ್ಛತೆ ಮಾಡಿಸುತ್ತಿದ್ದಾರೆ.
ಕೈಗೆ ಬ್ಲೌಸ್, ಕಾಲಿಗೆ ಬೂಟು ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಸ್ವಚ್ಛತಾ ಕಾರ್ಯವನ್ನು ಸ್ವಚ್ಚತಾ ಕಾರ್ಮಿಕ ಮಾಡಬೇಕಿದೆ. ಇವರಲ್ಲಿ ಬಹುತೇಕರು ಸುರಕ್ಷತೆ ಬಗ್ಗೆ ತಿಳವಳಿಕೆ ಇಲ್ಲ. ಇವರ ಆರೋಗ್ಯ ರಕ್ಷಣೆ ಮತ್ತು ಪ್ರಾಣ ರಕ್ಷಣೆಯ ಬಗ್ಗೆ ತಿಳಿಸಬೇಕಾದವರೂ ತಮ್ಮ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ.
ಚರಂಡಿ ಸ್ವಚ್ಚತೆಗೆ ಸ್ವಚ್ಚತಾಗಾರರು ಇದ್ದು ಅವರಿಗೆ ಸ್ವಚ್ಚತಾ ಪರಿಕರಗಳನ್ನು ನೀಡಲಾಗಿದ್ದೆ ಅದಲ್ಲಿ ಅವರಿಂದಲೇ ಚರಂಡಿ ಸ್ವಚ್ಚತೆ ಮಾಡಿಸಬೇಕಿತ್ತು, ಆದರೆ ಪ್ರತಿ ಬಾರಿಯೂ ಕೂಲಿ ಕರ್ಮಿಕರಿಂದಲೇ ಸ್ವಚ್ಚತೆ ಮಾಡಿಸುತ್ತಾರೆ.
ವರದಿ :ಯಾರಬ್. ಎಂ.