ಇಲಕಲ್ :ಮುಖಮುಖಿ ಸಾಮಾಜಿಕ ಸ್ಪಂದನ ಸಂಸ್ಥೆ ಗೊರಬಾಳ್ ಇವರ ವತಿಯಿಂದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಹಾಗೂ ಅಕ್ಷರದ ಅಮ್ಮ ಸಾವಿತ್ರಿಬಾಯಿ ಫುಲೆ ಇವರ ಜಯಂತಿ ಅಂಗವಾಗಿ ಇಳಕಲ್ ಬಸ್ ನಿಲ್ದಾಣದಲ್ಲಿ ಸತತ 11 ವರ್ಷಗಳ ಉಚಿತ ಕುಡಿಯುವ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆಯನ್ನು ಇಂದು ದಿನಾಂಕ 28-04-2025 ರಂದು ಇಲಕಲ್ಲಿನ ಯುವ ಪತ್ರಕರ್ತರಾದ ಸೈಯದ್ ಸಿರಾಜ್ ಖಾಜಿ ಅವರು ರಿಬ್ಬನ್ ಕಟ್ ಮಾಡುವುದರ ಮೂಲಕ ಪ್ರಯಾಣಿಕರಿಗೆ ಕುಡಿಯುವ ನೀರಿನ ಅರವಟ್ಟಿಗೆಯನ್ನು ಚಾಲನೆಗೊಳಿಸಿದರು. ಈ ಸಮಾರಂಭದ ಕುರಿತು ಮಾತನಾಡಿದ ಸೈಯದ್ ಸಿರಾಜ್ ಖಾಜಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಸಮಾಜದಲ್ಲಿ ಸಾಮರಸ್ಯ , ಸಮಾಜದ ಏಳಿಗೆಗೆ ಶ್ರಮ ವಹಿಸಬೇಕು. ಪ್ರಜಾಪ್ರಭುತ್ವಕ್ಕೆ ಧಕ್ಕೆ ಆಗದಂತೆ ಎಲ್ಲರೂ ಸಂವಿಧಾನದ ಅಡಿಯಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಹೋಗಬೇಕು.
ಮುಂದುವರೆದು ಮಾತನಾಡಿ ಅಕ್ಷರದ ಅಮ್ಮ ಶ್ರೀಮತಿ ಸಾವಿತ್ರಿಬಾಯಿ ಪುಲೆ ಇವರ ಶೈಕ್ಷಣಿಕ ಕೊಡುಗೆ ಅಪಾರ ಪ್ರತಿ ವರ್ಷ ಇಂತಹ ಮಹಾನ್ ನಾಯಕ, ನಾಯಕಿಯರ ಜಯಂತಿಗಳನ್ನು ಆಚರಿಸಿದ್ದಕ್ಕೆ ಸಾರ್ಥಕವಾಗುತ್ತದೆ. ಮುಖಮುಖಿ ಸಾಮಾಜಿಕ ಸ್ಪಂದನ ಸಂಸ್ಥೆಯು ಕಳೆದ ಹತ್ತು ವರ್ಷಗಳ ಅವಧಿಕ್ಕಿಂತ ಹೆಚ್ಚು ಸಾಮಾಜಿಕ,ಶೈಕ್ಷಣಿಕ, ಬಡವರ ಏಳಿಗೆಗೆ ಕಟಿಬುದ್ಧವಾಗಿ ನಿಂತಿರುವುದು ಶ್ಲಾಘನೀಯ. ಇಳಕಲ್ಲಿನ ಗ್ರಾನೆಟ್ ಉದ್ದಿಮೆಗಾರರಾದ ಸಣ್ಣದುರ್ಗಪ್ಪ ಬಂಡಿ, ವೆಂಕಟೇಶ್ ಬಂಡಿ ಇವರು ಒಂದು ವಾರಗಳ ಕಾಲ ಸಾರ್ವಜನಿಕರಿಗೆ ಉಚಿತ ಶುದ್ಧ ಕುಡಿಯುವ ನೀರನ್ನು ಒದಗಿಸಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶೇಖರಯ್ಯ ಹಿರೇಮಠ್, ಸಾರಿಗೆ ನಿಯಂತ್ರಕರಾದ ಮಹಾಂತೇಶ್ ಅರಳಿ, ವೀರೇಶ್ ಹಿರೇಮಠ ರಜಾಕ್ ಹುಬ್ಬಳ್ಳಿ ಭಾಷಾ ಸಾಬ್ ಹಾವೇರಿ ಪತ್ರಕರ್ತರಾದ ಕಾಸಿಂ ಅಲಿ ಮಕಾನದಾರ, ಮೆಹಬೊಬ ಡೋಟಿಹಾಳ ಮುಂತಾದವರು ಇದ್ದರು.