ಭಾಲ್ಕಿ : ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಅಂಗವಾಗಿ ಕಾರ್ಮಿಕರ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕಾ ಆಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಗೆ ಹಿರಿಯ ಶ್ರೇಣಿ ನ್ಯಾಯಾಧೀಶ ರಾಘವೇಂದ್ರ ವೈಜಿನಾಥ ಅವರು ಕಿರಿಯ ಶ್ರೇಣಿ ನ್ಯಾಯಾಧೀಶ ದೇಶಭೂಷಣ ಕೌಜಲಗಿ ಅವರು ಹಸಿರು ಬಾವುಟ ಪ್ರದರ್ಶಿಸುವ ಮೂಲಕ ಚಾಲನೆ ನೀಡಿದರು.
ಪಟ್ಟಣದ ಕೋರ್ಟ್ ಆವರಣದಿಂದ ಆರಂಭ ಗೊಂಡ ಜಾಥಾ ಬಿ,ಆರ್ ಅಂಬೇಡ್ಕರ್ ವೃತ್ತ , ಗಾಂಧಿ ವೃತ್ತ, ಬಸವೇಶ್ವರ ವೃತ್ತ ಮಾರ್ಗವಾಗಿ ಸಾಗಿ ಪುರಭವನದ ವರೆಗೆ ನಡೆಯಿತು.
ಜಾಥಾದಲ್ಲಿ ಪಾಲ್ಗೊಂಡ ಶಾಲಾ ಮಕ್ಕಳು ಬಾಲ ಕಾರ್ಮಿಕತೆ ನಾಚಿಕೆಗೇಡು ಬಾಲಕಾರ್ಮಿಕ ಪದ್ಧತಿ ನಿಲ್ಲಿಸಿ, ದುಡಿಮೆ ಬೇಡ ಶಿಕ್ಷಣ ಬೇಕು, ಮುಗ್ಧತೆ ರಕ್ಷಿಸಿ ಬಾಲಕಾರ್ಮಿಕತೆ ಶಿಕ್ಷಿಸಿ , ಬಾಲ ಕಾರ್ಮಿಕ ಅನಿಷ್ಟ ಪದ್ಧತಿ ಅಳಿಸಿ, ಮಕ್ಕಳನ್ನು ತಪ್ಪದೆ ಶಾಲೆಗೆ ಕಳುಹಿಸಿ ಎಂಬ ನಾಮಫಲಕ ಪ್ರದರ್ಶಿಸುವ ಮೂಲಕ ಜಾಗೃತಿ ಜಾಥಾ ನಡೆಸಲಾಯಿತು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಸಂಗಮೇಶ ಎಮ್ ಗಾಮ, ಉಪಾಧ್ಯಕ್ಷ ಮಹೇಶ ಪರಶೆಣ್ಣೆ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ ಜಿ ಹಳ್ಳದ, ಕಾರ್ಮಿಕ ಅಧಿಕಾರಿ ಮಂಜುನಾಥ, ಅರ್ಜುನ ಸೀತಾಳಗೆರೆ, ಗೋಪಾಲ ಹಿಪ್ಪರ್ಗೆ, ಮಹೇಶ್ ಹೊಸಳೆ, ರೋಹಿದಾಸ ರಾಠೋಡ, ಸಂದೀಪ ವಾಡೇಕರ್, ಅಂಬರೀಶ ಖಂಡ್ರೆ, ರಾಮ,ಜೈಭಿಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ: ಸಂತೋಷ ಬಿಜಿ ಪಾಟೀಲ



