Ad imageAd image

ತ್ಯಾಜ ಕಸದಿಂದ ತಯಾರಿಕೆಯಾದ ಗೊಬ್ಬರ ಮಾರಾಟಕ್ಕೆ ಚಾಲನೆ

Bharath Vaibhav
ತ್ಯಾಜ ಕಸದಿಂದ ತಯಾರಿಕೆಯಾದ ಗೊಬ್ಬರ ಮಾರಾಟಕ್ಕೆ ಚಾಲನೆ
WhatsApp Group Join Now
Telegram Group Join Now

ಸಿರುಗುಪ್ಪ: ಕಸದಿಂದ ರಸವೆಂಬಂತೆ ತಯಾರಿಸಿದ ನಗರದಲ್ಲಿ ಸಂಗ್ರಹಿಸುವ ಹಸಿಕಸವನ್ನು ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಗೊಬ್ಬರವನ್ನು ಖರೀದಿಸುವ ಮೂಲಕ ತಹಶೀಲ್ದಾರ್ ಗೌಸಿಯಾ ಬೇಗಂ ಅವರು ಗೊಬ್ಬರ ಮಾರಾಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕದಿಂದ ಹಸಿ ತ್ಯಾಜ್ಯ ಗೊಬ್ಬರ, ಸಾವಯುವ ಗೊಬ್ಬರ ಉತ್ಪಾಧನೆ ಉತ್ತಮ ಕಾರ್ಯವಾಗಿದೆ.

ಮನೆಯ ಅಂಗಳ, ಮಹಡಿ, ಸುತ್ತಮುತ್ತಲಿನ ಜಾಗಗಳಲ್ಲಿ ಬೆಳೆಯುವ ಸಣ್ಣಪುಟ್ಟ ಸಸ್ಯಗಳಿಗೆ ರಸವತ್ತಾದ ಗೊಬ್ಬರದ ಅವಶ್ಯಕತೆಯಿದೆ. ಇದನ್ನು ಮನಗೊಂಡ ಗೊಬ್ಬರದ ಮಾರಾಟಕ್ಕೆ ಮುಂದಾಗಿರುವುದು ಶ್ಲಾಘನೀಯವಾಗಿದೆ ಎಂದರು. ನಗರಸಭೆ ಪೌರಾಯುಕ್ತ ಗಂಗಾಧರ ಅವರು ಮಾತನಾಡಿ ಸರ್ಕಾರಿ ವಸತಿ ನಿಲಯಗಳು, ಸರ್ಕಾರಿ ಕಛೇರಿಗಳಲ್ಲಿ ಸಸ್ಯ ಬೆಳವಣಿಗೆಗೆ ಗೊಬ್ಬರವನ್ನ ಉಚಿತವಾಗಿ ನೀಡಲಾಗುತ್ತದೆ.

ಸಾರ್ವಜನಿಕರು ತಮ್ಮ ಸಸ್ಯಗಳಿಗೂ ಗೊಬ್ಬರವನ್ನು ಬಳಸಲು ಕಿಲೋ ಗ್ರಾಂಗೆ ಕೇವಲ 2ರೂಪಾಯಿ ನೀಡುವ ಮೂಲಕ ತಮಗೆ ಅವಶ್ಯಕತೆಗನುವಾಗಿ ಪಡೆಯಬಹುದಾಗಿದೆ. ಮುಂದಿನ ದಿನಗಳಲ್ಲಿ ಮನೆಯಲ್ಲಿಯೇ ಗೊಬ್ಬರವನ್ನು ತಯಾರಿಸುವ ವಿಧಾನದ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥರೆಡ್ಡಿ ಮಾತನಾಡಿ ಗೊಬ್ಬರವು ಉತ್ತಮ ಪೋಷಕಾಂಶಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ರೈತರಿಗೂ ಜಾಗೃತಿ ಮೂಡಿಸಲಾಗುವುದು ಎಂದರು.

ಇದೇ ವೇಳೆ ನಗರಸಭೆ ಅಧ್ಯಕ್ಷೆ ಬಿ.ರೇಣುಕಮ್ಮ, ಉಪಾಧ್ಯಕ್ಷೆ ಯಶೋದಾಮೂರ್ತಿ, ಸದಸ್ಯ ಬಿ.ಎಮ್.ಅಪ್ಪಾಜಿ, ತಾಲೂಕು ಪಂಚಾಯಿತಿ ಇ.ಓ ಪವನ್ ಕುಮಾರ್.ಎಸ್.ದಂಡಪ್ಪನವರ್, ಪೋಲೀಸ್ ಉಪಾಧೀಕ್ಷಕ ಮಾಲತೇಶ ಕೂನಬೇವ, ಕ್ಷೇತ್ರ ಶಿಕ್ಷಣಾಧಿಕಾರಿ ಗುರ‍್ರಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಘವೇಂದ್ರವರ್ಮ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಪ್ರದೀಪ್ ಸೇರಿದಂತೆ ಇನ್ನಿತರ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.
ವರದಿ : ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!