ಕುಷ್ಟಗಿ :-ಹನುಮಸಾಗರ ವಲಯ ಮಟ್ಟದ 2024-25 ಸಾಲಿನ 9 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಗಳಿಗೆ ಗುರುವಾರರಂದು ತಾಲೂಕಿನ ಅಡವಿಬಾವಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಾಲೆ ಆವರಣದಲ್ಲಿ ಕ್ರೀಡಾ ಧ್ವಜಾರೋಹಣ ಮಾಡುವ ಮೂಲಕ ಗ್ರಾಮ ಪಂಚಾಯತ ಅಧ್ಯಕ್ಷರಾದ ಶರಣಪ್ಪ ಹೆಚ್ ಮದ್ದೂರು ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣ ಭಾವಚಿತ್ರಕ್ಕೆ ಪುಷ್ತ್ವ ನಮನಗಳನ್ನು ಸಲ್ಲಿಸುತ್ತಾ ಕಾರ್ಯಕ್ರಮವನ್ನು ಉದ್ಘಾಟಿಸಿದ ದೈಹಿಕ ಶಿಕ್ಷಣದ ಪರಿವೀಕ್ಷಣ ಅಧಿಕಾರಿ ಸರಸ್ವತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳು ಸೋಲು ಮತ್ತು ಗೆಲುವನ್ನ ಒಂದು ನಾಣ್ಯದ ಎರಡು ಮುಖಗಳಂತೆ ಅಳವಡಿಸಿಕೊಳ್ಳಬೇಕು .
ಸೂಲೆ ಇರಲಿ ಗೆಲುವೆ ಇರಲಿ ಅದನ್ನು ಸಮನಾಗಿ ಸ್ವೀಕರಿಸುಕೊಂಡು ಮುನ್ನುಗ್ಗಿದರೆ ಮುಂದೊಂದು ದಿನ ಗೆಲುವಿನ ನಗೆ ಬೀರಬಹುದೆಂದು ವಿದ್ಯಾರ್ಥಿಗಳಲ್ಲಿ ವಿಶ್ವಾಸದ ನುಡಿಗಳನ್ನು ತುಂಬಿದರು ಸಿ ಆರ್ ಪಿ ಅಯ್ಯಪ್ಪ ಶಿರೋಳ ಶಿಕ್ಷಕ ಐದರಲಿ ಇನ್ನೂ ಅನೇಕ ಪ್ರಮುಖರು ಪ್ರಾಸ್ತಾವಿಕವಾಗಿ ಮಾತಾಡಿದರು
ಈ ಒಂದು ಕಾರ್ಯಕ್ರಮದಲ್ಲಿ ಅಡವಿಬಾವಿ ಪ್ರಾಥಮಿಕ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷಣೆಯಾದ ಸುನಿತಾ ಎಸ್ ಹಿರೇಮನಿ ಅಧ್ಯಕ್ಷತೆ ವಹಿಸಿದ್ದರು 9 ಗ್ರಾಮ ಪಂಚಾಯತಿ ಮಟ್ಟದ ಮುಖ್ಯ ಶಿಕ್ಷಕರು ದೈಹಿಕ ಶಿಕ್ಷಕರು ಶಿಕ್ಷಕಿಯರು ಗ್ರಾಮ ಪಂಚಾಯತಿ ಸದಸ್ಯರು ಎಸ್ ಡಿ ಎಂ ಸಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಪೊಲೀಸ್ ಇಲಾಖೆಯವರು ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಿರಿಯ ಗಣ್ಯಮಾನ್ಯರು ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಉಮಾಪತಿ ಮಾಳಗಿ. ಬಸವರಾಜ್ ಗುರುಕಾರ ಸ್ವಾಗತಿಸಿದರು ವಾಲಿಬಾಲು ಕೋಕೋ ಕಬಡ್ಡಿ ಇನ್ನು ಅನೇಕ ಕ್ರೀಡೆಗಳನ್ನು ಈ ಒಂದು ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದೆ ಕ್ರೀಡಾಪಟುಗಳನ್ನು ಉರಿದುಂಬಿಸುವ ಮೂಲಕ ನೆರೆದ ನೂರಾರು ಜನ ಸಾರ್ವಜನಿಕರು ಸಾಕ್ಷಿಯಾದರು.
ವರದಿ:- ಶಿವಯ್ಯ ಕೆಂಭಾವಿಮಠ