ನಿಪ್ಪಾಣಿ :ಶಾಸಕಿ ಶಶಿಕಲಾ ಜೊಲ್ಲೆ ಅವರ ವಿಶೇಷ ಪ್ರಯತ್ನದಿಂದ ಭೋಜ್ ಗ್ರಾಮದಲ್ಲಿ 14 ಲಕ್ಷ 39 ಸಾವಿರ ರೂಪಾಯಿಗಳ ಅನುದಾನದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ.
ನಿಪ್ಪಾಣಿ ಮತ ಕ್ಷೇತ್ರದ ಪ್ರತಿ ಹಳ್ಳಿಗಳಲ್ಲಿಯ ಮಕ್ಕಳ ಕಲಿಕೆಗೆ ಒತ್ತು ನೀಡುವುದಗೋಸ್ಕರ ಹಾಗೂ ಗ್ರಾಮೀಣ ಪ್ರದೇಶ ಮಕ್ಕಳು ಕಲಿಕೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆಯವರ ವಿಶೇಷ ಪ್ರಯತ್ನದಿಂದ ನಿಪ್ಪಾಣಿ ತಾಲೂಕಿನ ಭೋಜ್ ಗ್ರಾಮದ ವಾರ್ಡ್ ನಂಬರ್ 3ರಲ್ಲಿ ಸುಸಜ್ಜಿತ ಅಂಗನವಾಡಿ ಕಟ್ಟಡ ನಿರ್ಮಾಣಕ್ಕಾಗಿ PRED ಯೋಜನೆಯಡಿ 14 ಲಕ್ಷ 39 ಸಾವಿರ ರೂಪಾಯಿಗಳ ಅನುದಾನ ಮಂಜೂರಾಗಿದ್ದು ಗುರುವಾರ ಇಂದು ಬೆಳಿಗ್ಗೆ 10 ಗಂಟೆಗೆ ಅಂಗನವಾಡಿ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ನಡೆಯಿತು. ಪ್ರಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಅಂಗನವಾಡಿ ನಿರೀಕ್ಷಕರು ಕಾರ್ಯಕರ್ತರ ಉಪಸ್ಥಿತಿಯಲ್ಲಿ ಭೂಮಿ ಪೂಜೆ ನಡೆಯಿತು.

ತದನಂತರ ಬಾಪು ಮೋಹಿತೆ ಕುಬೇರ ನೇಜೆ, ರಾವಸಾಬ ಕುಪ್ಪಾನಟ್ಟೆ,ಅವರ ಹಸ್ತದಿಂದ ಶ್ರೀಫಲ ಅರ್ಪಣೆ ಮತ್ತು ಡಾಕ್ಟರ್ ಸುದರ್ಶನ್ ಮುರಾಬಟ್ಟೆ ಸಂತೋಷ್ ಮಾಳಿ ವಿನೋದ ಸಂಕಪಾಳ ಶ್ರೀಕಾಂತ ಬನ್ನೇ ಅವರ ಹಸ್ತದಿಂದ ಗುದ್ದಲಿ ಪೂಜೆ ನಡೆಯಿತು. ಈ ಸಮಾರಂಭದಲ್ಲಿ ಪಿಕೆಪಿಎಸ್ ಅಧ್ಯಕ್ಷ ಡಾಕ್ಟರ್ ಸುದರ್ಶನ ಮೂರಾಬಟ್ಟೆ ಹಾಗೂ ಹಾಲಶುಗರ್ ನಿರ್ದೇಶಕ ಶ್ರೀಕಾಂತ ಬನ್ನೇ ಮಾತನಾಡಿದರು. ಅಂಗನವಾಡಿ ಕಟ್ಟಡ ಭೂಮಿ ಪೂಜೆ ಸಮಾರಂಭದಲ್ಲಿ ವಿಜಯ ಕಮತೆ ಅಜಿತ್ ಹಣಬರ, ರವಿ ಮಾನೆ, ದಸ್ತಗೀರ ಸನದಿ,ಭರತ್ ಗುರವ, ಶೋಭಾ ನವನಾಳೆ ಪೂಜಾ ಕಮತೆ ಶ್ವೇತಾ ಅಲಾಸೆ ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಬಿಜೆಪಿ ಕಾರ್ಯಕರ್ತರು ಬಹು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ವರದಿ:ಮಹಾವೀರ ಚಿಂಚಣೆ




