ಬೆಳಗಾವಿ: ಡಾ. ಎನ್. ಪ್ರಶಾಂತರಾವ್ ಸಾರಥ್ಯದ ಭಾರತ ವೈಭವ ಪತ್ರಿಕೆಯ ಸಮೂಹ ಸಂಸ್ಥೆಗಳಾದ ಬಿವಿ-5 ಯೂಟುಬ್ ಚಾನೆಲ್ ನ ಎನ್ ಪಿಆರ್ ಶೋ ( ಅತಿಥಿಗಳ ಸಂದರ್ಶನ ಸಭಾಂಗಣ) ದ ಉದ್ಘಾಟನೆಯನ್ನು ಹಾಲಸಿದ್ದನಾಥ ದೇವಸ್ಥಾನದ ಶ್ರೀ ಅಪ್ಪಾಸೋ ಭಾಗವಾನ್ ದೋನೆ ( ಪೂಜೇರಿ) ಶುಕ್ರವಾರ ನೆರವೇರಿಸಿದರು.

ನಗರದ ಸದಾಶಿವ ನಗರ ( ವಿಜಯ ಬೇಕರಿ) ಎದುರುಗಡೆ ಇರುವ ಬಿವಿ-5 ಹಾಗೂ ಯೂಟೂಬ್ ಚಾನೆಲ್ ನ ಕಚೇರಿಯಲ್ಲಿಂದು ಉದ್ಘಾಟನೆ ಪೂಜಾ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು. ಭಾರತ ವೈಭವ ಪತ್ರಿಕೆಯ ಹಾಗೂ ಬಿವಿ-5, ಯೂಟುಬ್ ಚಾನೆಲ್ ನ ಪ್ರಧಾನ ಸಂಪಾದಕರಾದ ಡಾ.ಎನ್. ಪ್ರಶಾಂತರಾವ್ ಹಾಗೂ ಅವರ ಧರ್ಮ ಪತ್ನಿ ಹಾಗೂ ಜಿ.ಪಂ. ಅಧ್ಯಕ್ಷರಾದ ಆಶಾ ಐಹೋಳೆ ಹಾಗೂ ಅವರ ಕುಟುಂಬ ಸದಸ್ಯರು ಹಾಗೂ ಬಿವಿ-5 ಯೂಟುಬ್ ಚಾನೆಲ್ ನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.




