ಕಲಘಟಗಿ: ತಾಲೂಕಿನ ಗಳಗಿ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಬಿ. ಶಿಗೀಗಟ್ಟಿ ಗ್ರಾಮದಲ್ಲಿ ಇತ್ತೀಚಿಗೆ ಸಾರ್ವಜನಿಕ ಕೊಂದುಕೊರತ ಸಭೆಯಲ್ಲಿ ಗ್ರಾಮಸ್ಥರು ಸನ್ಮಾನ್ಯ ಸಂತೋಷ್ ಎಸ್ ಲಾಡ್ ಸಾಹೇಬರಿಗೆ ಬೇಡಿಕೆ ಇಟ್ಟಿರುವ ಕಾರಣದಿಂದ ಇಂದು ಸಮಾಜ ಕಲ್ಯಾಣ ಇಲಾಖೆಯ ಅನುದಾನದಡಿಯಲ್ಲಿ ಸುಮಾರು 50.00 ಲಕ್ಷಗಳಲ್ಲಿ ರಸ್ತೆ ಕಾಮಗಾರಿಗೆ ಮುತ್ತಗಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಹೂವಕ್ಕ ಲಮಾಣಿ ಇವರು ಗುದ್ದಲಿ ಪೂಜೆ ನೆರವರಿಸಿದ್ದರು.
ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಶ್ರೀ ಎಸ್ ಆರ್ ಪಾಟೀಲ ಮಾನ್ಯ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿಯಾದ ಸೋಮಶೇಖರ್ ಬೆನ್ನೂರ ಜಿಲ್ಲಾ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾದ ಶ್ರೀ ಗುರು ಬೆಂಗೇರಿ ಹಾಗೂ ಸುತ್ತಮುತ್ತಲಿನ ಗ್ರಾಮದ ಮುಖಂಡರುಗಳಾದ ಎಚ್ ಎಮ್ ಕಾಳೆ ಮಂಜಪ್ಪ ಈರಪ್ಪ ಮೊಗನ್ನವರ ಬಸವರಾಜ್ ದಾಸನಕೊಪ್ಪ ರವಿ ಲಮಾಣಿ ರಾಮು ಲಮಾಣಿ ತುಳಸವ್ವ ಲಮಾಣಿ ಲಕ್ಷ್ಮಣ್ ಲಮಾಣಿ ಧನಪ್ಪ ಲಮಾಣಿ ಶೇಖರ್ ಲಮಾಣಿ ರಮೇಶ್ ಲಮಾಣಿ ಆನಂದ ಲಮಾಣಿ ಇನ್ನು ಅನೇಕ ಗ್ರಾಮ ಪಂಚಾಯತ ಸದಸ್ಯರು ಗ್ರಾಮದ ಹಿರಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ: ನಿತೀಶಗೌಡ ತಡಸ ಪಾಟೀಲ್