ಚನ್ನಮ್ಮನ ಕಿತ್ತೂರು : ಕಿತ್ತೂರು ತಾಲೂಕಿನ ನಿಚ್ಚಣಿಕಿ ಶ್ರೀ ಗುರು ಮಡಿವಾಳೇಶ್ವರ ಮಠದಿಂದ ನಂದಿಭೂಷಿತ ಕಪ್ಪತ ಜ್ಯೋತಿ ಯಾತ್ರೆಗೆ ಪೂಜ್ಯ ಪಂಚಾಕ್ಷರಿ ಮಹಾಸ್ವಾಮಿಗಳು, ಹಾಗೂ ರೈತರು ಯುವಕರು ಚಾಲನೆ ನೀಡಿದರು. ನಂತರ ಜ್ಯೋತಿ ಯಾತ್ರೆ ಕಿತ್ತೂರಿನ ಕೋಟೆ ಆವರಣಕ್ಕೆ ಆಗಮಿಸಿತು. ರಾಜಗುರು ಸಂಸ್ಥಾನ ಕಲ್ಮಠದ ಪೂಜ್ಯ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು ಆಗಮಿಸಿ ಪೂಜೆ ಸಲ್ಲಿಸಿ ನಂತರ ಜ್ಯೋತಿ ಯಾತ್ರೆ ಕಿತ್ತೂರಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವ ರಾಣಿ ಚನ್ನಮ್ಮನ ವೃತ್ತಕ್ಕೆ ಆಗಮಿಸಿತ್ತು ರಾಜಗುರು ಸಂಸ್ಥಾನ ಕಲ್ಮಠದ ಪೂಜ್ಯ ಶ್ರೀ ಮ.ನಿ.ಪ್ರ. ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು, ಹಾಗೂ ಪೂಜ್ಯ ಶ್ರೀ ಮ.ನಿ.ಪ್ರ.ಶಿವಕುಮಾರ ಮಹಾಸ್ವಾಮಿಗಳು ಕಪ್ಪತಗುಡ್ಡ ನಂದಿವೇರಿ ಸಂಸ್ಥಾನಮಠ,ಡೋಣಿ ಗದಗ ಹಾಗೂ ರೈತ ಮುಖಂಡರು ರಾಣಿ ಚನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ರಾಜಗುರು ಸಂಸ್ಥಾನ ಕಲ್ಮಠದ ಪೂಜ್ಯ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು ನಂದಿಭೂಷಿತ ಕಪ್ಪತ ಜ್ಯೋತಿ ಯಾತ್ರೆಗೆ ಶುಭ ಕೊರಿದರು.
ಕಿತ್ತೂರಿನ ತಹಶೀಲ್ದಾರ ಕಚೇರಿ ಮುಂದೆ ರೈತರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಬೇಟಿ ನೀಡಿ ಮಾತನಾಡಿ ರೈತರು ನಡೆಸುತ್ತಿರುವ ನ್ಯಾಯಯುತ ಬೇಡಿಕೆಗಳಿಗೆ ನಮ್ಮ ಬೆಂಬಲ ಇದೆ ಎಂದು ಹೇಳಿದರು.

ನಂದಿಭೂಷಿತ ಕಪ್ಪತ ಜ್ಯೋತಿ ಯಾತ್ರೆ ಬಗ್ಗೆ ಭಾಲಚಂದ್ರ ಜಾಬಶೆಟ್ಟಿ ಅವರು ಮಾತನಾಡಿ ನಂದಿಕೃಷಿ. ನಂದಿ ಆದಾರಿತ ಉಳುಮೆಯಿಂದ ಸುಸ್ಥಿರ ಭೂಫಲವತ್ತತೆ ಕಾಯ್ದುಕೊಂಡು ಸುರಕ್ಷಿತ ಹಾಗೂ ಸುಸ್ಥಿರ ಆಹಾರ ಭದ್ರತೆಯನ್ನು ನಮ್ಮ ಪೂರ್ವಜರು ಹೊಂದಿದ್ದರು. ಆದರೆ ಈಗ ನಾವೆಲ್ಲರೂ ರಾಸಾಯನಿಕ ಕೃಷಿಯೆಡೆಗೆ ಆಕರ್ಷಿತಗೊಂಡಿರುವದರಿಂದ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದ್ದು. ಆಹಾರ ಉತ್ಪಾದನೆಯಲ್ಲಿ ಇಳುವರಿ ಹಾಗೂ ಗುಣಮಟ್ಟದಲ್ಲಿ ಕುಸಿತವಾಗಿದ್ದರಿಂದ ರೈತ ಸಂಕಷ್ಟಕೀಡಾಗುತ್ತಿದ್ದಾನೆ ಹಾಗಾಗಿ ನಂದಿಕೃಷಿಯ ಪುನರುತ್ಥಾನದ ಅವಶ್ಯಕತೆಯಿದ್ದು. ರೈತರು ಪುನಃ ನಂದಿಕೃಷಿಯಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸುವುದಕ್ಕಾಗಿ ನಂದಿಭೂಷಿತ ಕಪ್ಪತ ಜ್ಯೋತಿ ಯಾತ್ರೆ ಆಯೋಜಿಸಲಾಗಿದೆ ಎಂದು ಹೇಳಿದರು. ರೈತ ಮುಖಂಡರಾದ ದಳವಾಯಿ ಅಪ್ಪೇಶ ಅವರು ಮಾತನಾಡಿದರು.
ವರದಿ:ಬಸವರಾಜ ಭಿಮರಾಣಿ.ಜಗದೀಶ ಕಡೋಲಿ




