Ad imageAd image

ವೀರಶೈವ ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೆ ಬೇಸಿಗೆ ತರಬೇತಿ ಶಿಬಿರ ಕ್ಕೆ ಚಾಲನೆ 

Bharath Vaibhav
ವೀರಶೈವ ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೆ ಬೇಸಿಗೆ ತರಬೇತಿ ಶಿಬಿರ ಕ್ಕೆ ಚಾಲನೆ 
WhatsApp Group Join Now
Telegram Group Join Now

ಮಾನ್ವಿ: ಪಟ್ಟಣದ ಪ್ರಗತಿ ಪಿ.ಯು.ಕಾಲೇಜಿನ ಆವರಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದಿಂದ ಅಯೋಜಿಸಲಾದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಬೇಸಿಗೆ ತರಬೇತಿ ಶಿಬಿರವನ್ನು ಅ.ಭಾ,ವೀ, ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಮಿರ್ಜಾಪೂರ ಚಾಲನೆ ನೀಡಿ ಮಾತನಾಡಿ ನಮ್ಮ ಮಕ್ಕಳಿಗೆ ಶಿಕ್ಷಣದ ಜೋತೆಗೆ ನಮ್ಮ ಪರಂಪರೆ ,ವೀರಶೈವ ,ಲಿಂಗಾಯತ ಧರ್ಮದ ಬಗ್ಗೆ ,ಸನಾತನ ಧರ್ಮದ ತತ್ವ,ಸಿದ್ದಾಂತಗಳ ಬಗ್ಗೆ ತಿಳಿಸುವ ಮೂಲಕ ನೈತಿಕ ಮೌಲ್ಯಗಳನ್ನು ಭೋದಿಸುವ ಉದ್ದೇಶದಿಂದ ಮಾನ್ವಿ ತಾಲೂಕು ಘಟಕವು ಬೇಸಿಗೆ ಶಿಬಿರವನ್ನು ಅಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಪೋಷಕರ ಸಲಹೆಯಂತೆ ಪಿ.ಯು.ವಿದ್ಯಾರ್ಥಿಗಳಿಗೂ ಕೂಡ ಬೇಸಿಗೆ ಶಿಬಿರವನ್ನು ಅಯೋಜಿಸುವುದಕ್ಕೆ ಅಗತ್ಯ ಸಹಕಾರವನ್ನು ಜಿಲ್ಲಾ ಘಟಕ ದಿಂದ ನೀಡಲಾಗುವುದು ಎಂದು ತಿಳಿಸಿದರು.

ಕಲ್ಲೂರು ಅಡಿವೇಶ್ವರ ಮಠದ ಶ್ರೀ ಶಂಭುಲಿ0ಗ ಮಹಾಸ್ವಾಮಿಗಳು ಮಾತನಾಡಿ ಇಂದಿನ ಅಧೂನಿಕ ದಿನಗಳಲ್ಲಿ ಗ್ರಾಮೀಣ ಭಾಗದ ಮಕ್ಕಳು ಕೂಡ ಪೈಪೋಟಿ ನೀಡಿ ಉನ್ನತ ಶಿಕ್ಷಣವನ್ನು ಪಡೆಯುವುದಕ್ಕೆ ಇಂತಹ ಬೇಸಿಗೆ ಶಿಬಿರಗಳು ಸಹಕಾರಿಯಾಗಿದ್ದು ಧಾರ್ಮಿಕತೆಯ ಮೂಲಕ ಗುಣಮಟ್ಟದ ಶಿಕ್ಷಣವನ್ನು ಇಂದಿನದಿನಗಳಲ್ಲಿ ಮಕ್ಕಳಿಗೆ ನೀಡುವ ಅಗತ್ಯವಿದೆ ಎಂದು ತಿಳಿಸಿದರು.

ಅ.ಭಾ,ವೀ,ಲಿಂಗಾಯತ ಮಹಾಸಭಾ ತಾ.ಘಟಕದ ಅಧ್ಯಕ್ಷ ಅರುಣಕುಮಾರ ಚಂದಾ ಮಾತನಾಡಿದರು. ಕಲ್ಮಠ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಚಾರ್ಯ ಮಹಾ ಸ್ವಾಮಿಗಳು, ಕರೆಗುಡ್ಡ ಮಹಾಂತೇಶ್ವರ ಮಠದ ಶ್ರೀ ಮಹಾಂತಲಿ0ಗ ಮಹಾಸ್ವಾಮಿಗಳು, ಡಾ.ಬಸವಫ್ರಭು ಪಾಟೀಲ್ ಬೆಟ್ಟದೂರು,ತಿಪ್ಪಣ್ಣ ಬಿ.ಹೋಸಮನಿ ಸೇರಿದಂತೆ ಇನ್ನಿತರರು ಇದ್ದರು.

ಮಾನ್ವಿ: ಪಟ್ಟಣದ ಪ್ರಗತಿ ಪಿ.ಯು.ಕಾಲೇಜಿನ ಆವರಣದಲ್ಲಿ ಅ.ಭಾ,ವೀ, ಲಿಂಗಾಯತ ಮಹಾಸಭಾ ತಾಲೂಕು ಘಟಕದಿಂದ ನಡೆದ ಬೇಸಿಗೆ ಶಿಬಿರಕ್ಕೆ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಮಿರ್ಜಾಪೂರ ಚಾಲನೆ ನೀಡಿ ಮಾತನಾಡಿದರು.

ವರದಿ : ಶಿವ ತೇಜ

WhatsApp Group Join Now
Telegram Group Join Now
Share This Article
error: Content is protected !!