ಅಥಣಿ: ತಾಲೂಕಿನ ಬೇವನೂರು ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಮೂರು ದಿನಗಳ ಕಾಲ ಅಮೋಘಸಿದ್ದೇಶ್ವರ ಜಾತ್ರೆಯು ಜರುಗುವುದು. ಇಂದು ಬೆಳಗ್ಗೆ ದೇವರ ವಿಶೇಷ ಪೂಜೆ ದೊಂದಿಗೆ ಜಾತ್ರಾ ಕಾರ್ಯಕ್ರಮಕ್ಕೆ ಊರಿನ ಗಣ್ಯ ಮಾನ್ಯರು ಹಿರಿಯರು ಸೇರಿ ವಿಶೇಷವಾಗಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ಇಂದು ಬೆಳಗ್ಗೆ 9 ಗಂಟೆಗೆ ಜೋಡಿ ಎತ್ತಿನ ಗಾಡಿ ಶರ್ತಿ ಕೂಡ ಜರುಗಿದ್ದು. ಪ್ರಥಮ ದ್ವಿತೀಯ ತೃತೀಯ
ಮೂರು ಬಹುಮಾನಗಳನ್ನು ವಿತರಣೆ ಮಾಡಿದರು. ಸಂಜೆ ದೇವರ ಭೇಟಿ ಕಾರ್ಯಕ್ರಮಗಳು ಜರುಗುವುದು.
ರಾತ್ರಿ 9 ಗಂಟೆಗೆ ವಿಶೇಷವಾಗಿ ತಂಡಗಳಿಂದ ಡೊಳ್ಳಿನ ಪದಗಳು ಜರಗುವುದು.
ಸೋಮವಾರ ವಿಶೇಷ ಪೂಜೆಯೊಂದಿಗೆ ದೇವರಿಗೆ ನೈವೇದ್ಯ ರಾತ್ರಿ 10 ಗಂಟೆಗೆ ಮಾನವಂತರ ಮಗ ಸುಂದರವಾದ ನಾಟಕ ಜರುವುದು. ಮಂಗಳವಾರದದು ವಿವಿಧ ವಾದ್ಯ ಮೇಳದೊಂದಿಗೆ ದೇವರು ಭೇಟಿಯೊಂದಿಗೆ ದೇವರು ಗದ್ದಿಗೆ ಹೋಗುವುದು. ಅದೇ ದಿನ ಸಂಜೆ ಜಂಗಿ ಕುಸ್ತಿ ಜರುವುದು ಎಂದು ಶ್ರೀ ಅಮೋಘಸಿದ್ದೇಶ್ವರ ಸೇವಾ ಸಂಘ ಕಮಿಟಿಯವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗಜಾನನ್ ಪೂಜಾರಿ. ಅನಿಲ ಯಮಗಾರ. ಕಾಕಸ ಪಾಟೀಲ್ ಮಾರುತಿ ಗಿರಣಿ ತಾತು ಪವಾರ. ರಾಜು ಪಾಟೀಲ್. ಪೀರಗೌಡ ಪಾಟಿಲ. ಸದಾಶಿವ ವಾಘಮಾರೆ. ಶ್ರೀಕಾಂತ್ ನಾಯಕ್. ಶ್ರೀಕಾಂತ್ ಚೌಗಲಾ. ಪ್ರಲ್ಲಾದ್ ಗ್ಯಾಂಡ್. ಗಜಾನನ್ ಗ್ಯಾಂಡ ಗ್ರಾಮದ ಮುಖಂಡರು ಹಿರಿಯರು ಉಪಸ್ಥಿತರಿದ್ದರು.
ವರದಿ: ರಾಜು ವಾಘಮಾರೆ




