ಕೋಲಾರ: ಜಿಲ್ಲೆ ಘಟಕ . ಕರ್ನಾಟಕ ಡ್ರೈವರ್ಸ್ & ಓನರ್ಸ್ ವೆಲ್ ಫೇರ್ ಅಸೋಸಿಯೇಷನ್ ರಿ ವತಿಯಿಂದ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಟೇಕಲ್ ನಲ್ಲಿ ಹಮ್ಮಿಕೊಂಡಿದ್ದ ಚಾಲಕರ ಜಾಗೃತಿ ಅಭಿಯಾನ ಮತ್ತು ಜಿಲ್ಲಾ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿದ ಗೌರವ ಅಧ್ಯಕ್ಷರು ಅಶೋಕ್. HC. ಶ್ರೀನಿಧಿ ಕುಮಾರ್. ಗುಬ್ಬಿ ಮಹೇಶ್. ಸಂತೋಷ್ ನಾಯಕ್. ಕಲ್ಯಾಣ್ ಕುಮಾರ್ ಅವರಿಗೆ ಗೌರವ ಸನ್ಮಾನ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸ್ಥಳೀಯ ಶಾಸಕರ ಸಹೋದರರು ಈರೇಗೌಡರು ಮಾತನಾಡಿ. ಚಾಲಕರ ಜಾಗೃತಿ ಅವಶ್ಯಕತೆ ಬಗ್ಗೆ ಮನಮುಟ್ಟುವಂತೆ ತಿಳಿಸಿದರು. ಸ್ಥಳೀಯ ನಾಯಕರು ರಾಮಮೂರ್ತಿ. ರಾಜಕುಮಾರ್ ಮಾತಾಡಿ ಚಾಲಕರ ಸಂಘಟನೆಗಳ ಅವಶ್ಯಕತೆ ಚಾಲಕರ ಒಗ್ಗಟ್ಟು ಕುರಿತು ಗಮನ ಸೆಳೆದರು. ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ಕೋಲಾರದ ಜಿಲ್ಲೆಯ ಅನೇಕ ಪದಾಧಿಕಾರಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ವರದಿ : ಯಾರಬ್. ಎಂ.




