ಹುಬ್ಬಳ್ಳಿ: ನಗರದಲ್ಲಿ ಪ್ರಥಮ ಬಾರಿಗೆ ಕರ್ನಾಟಕ ಮಾಧ್ಯಮ ಅಕಾಡಮಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಯೋಗದಲ್ಲಿ ಭಾನುವಾರ(ಮಾ.,23) ಏರ್ಪಡಿಸಲಾಗಿದ್ದ ಛಾಯಾ ಚಿತ್ರ ಪ್ರದರ್ಶನ ಹಾಗೂ ಛಾಯಾಗ್ರಹಣ ಕಾರ್ಯಾಗಾರ (ಫೋಕಸ್ ಆನ್ ನ್ಯೂಸ್) ವನ್ನು ಕಾರ್ಮಿಕ ಇಲಾಖೆಯ ಸಚಿವರು ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್ ಲಾಡ್ ಅವರು ಉದ್ಘಾಟಿಸಿದರು.
ಶಾಸಕರಾದ ಮಹೇಶ್ ಟೆಂಗಿಗಿನಕಾಯಿ, ಅಬ್ಬಯ್ಯ ಪ್ರಸಾದ್, ಎನ್‌ಎಚ್.ಕೋನರಡ್ಡಿ, ಹಿರಿಯ ಛಾಯಾಗ್ರಾಹಕರಾದ ಶಿಫ್ರಾ ದಾಸ. ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಶ್ಆಯೇಶಾ ಖಾನಂ, ಸದಸ್ಯರಾದ ಶಿವಾನಂದ ತಗಡೂರು, ಅಬ್ಬಾಸ್ ಮುಲ್ಲಾ ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿ ಜಿಲ್ಲೆಯ ವತಿಯಿಂದ ಹಿರಿಯ ಛಾಯಾಗ್ರಾಹಕರಾದ ಪಿ.ಕೆ.ಬಡಿಗೇರ, ಸದಾಶಿವ ಸಂಕಪ್ಪಗೋಳ, ವೀರನ ಗೌಡ ಇನಾಮತಿ. ಇವರ ಛಾಯಾಚಿತ್ರಗಳು ಪ್ರದರ್ಶನಗೊಂಡು ಸಚಿವರ ಮೆಚ್ಚುಗೆ ಗಳಿಸಿದವು.