ರಾಯಬಾಗ: ತಾಲೂಕಿನ ಖನದಾಳ ಗ್ರಾಮದ ಶ್ರೀ ಮಹಾಲಕ್ಷ್ಮಿ ಹಾಗೂ ಕೊರವಂಜಿ ದೇವಿ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ಆರೋಗ್ಯ ಧಾಮ ಘಟಪ್ರಭಾ ಹಾಗೂ ಗೋಕಾಕ್ ರಕ್ತ ನಿಧಿ ಗೋಕಾಕ್ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸನೆ ಹಾಗೂ ಸ್ವಯಂ ರಕ್ತದಾನ ಶಿಬಿರ ಕಾರ್ಯಕ್ರಮವನ್ನು, ಮಹಾಲಕ್ಷ್ಮಿ ಹಾಗೂ ಕೊರವಂಜಿ ದೇವಸ್ಥಾನದ ಧರ್ಮಾಧಿಕಾರಿಗಳಾದ ರಾಮಣ್ಣ ಮಹಾರಾಜರ ಅಮೃತ ಹಸ್ತದಿಂದ ಜ್ಯೋತಿ ಬೆಳಗಿಸುವುದರ ಮೂಲಕ ಶಿಬಿರವನ್ನು ಪ್ರಾರಂಭಿಸಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಆರೋಗ್ಯಧಾಮ ಘಟಪ್ರಭಾ ವೈದ್ಯಕೀಯ ತಂಡವು ಭಾಗವಹಿಸಿತ್ತು ವೈದ್ಯರಾದ ಡಾ. ಮನೋಜ್ ಕೆ , ಮತ್ತು ಡಾಕ್ಟರ್ ಪ್ರೀತಿ ಕೆ ಮೋಹನ್, ಹಾಗೂ ಡಾ. ರೋಹಿತ್ ಜಿ , ಹಾಗೂ ಗೋಕಾಕ್ ರಕ್ತ ನಿಧಿ ತಂಡ ಆಗಮಿಸಿ ಗ್ರಾಮದ ಗ್ರಾಮಸ್ಥರ ಹಾಗೂ ಭಕ್ತರ ಆರೋಗ್ಯ ತಪಾಸನೆ ಮಾಡಿದರು.ಹಲವಾರು ಯುವಕರು ರಕ್ತದಾನ ಮಾಡಿದರು.
ಈ ಕಾರ್ಯಕ್ರಮದಲ್ಲಿ ರಾಮನ ಮಹಾರಾಜರು ದಿವ್ಯ ಸಾನಿಧ್ಯ ವಹಿಸಿದ್ದರು ಮುಖ್ಯ ಅತಿಥಿಗಳಾದ ಸುರೇಶ್ ಐಹೊಳೆ, ಅಶೋಕ್ ಬಾಗಿ, ಅತುಲ್ ಶಿಂದೆ,ಲಕ್ಷ್ಮಣ್ ಹುಂಚಾಳ.ರಮೇಶ್ ಸಣ್ಣಕಿ.ಮಹೇಶ ಪತಾರ್.ರವಿ ಚಿಂಚಲಿ ಶ್ರೀಶೈಲ್ ಮಾಂಗ್, ಅಮರ್ ಹೊಸಟ್ಟಿ ಮುಂತಾದ ಗಣ್ಯರು ಹಾಜರಿದ್ದರು.
ವರದಿ: ಪರಶುರಾಮ ತೆಳಗಡೆ




