ಯಳಂದೂರು: ಬಿಳಿಗಿರಿರಂಗನ ಬೆಟ್ಟ ದಿಂದ ಯಳಂದೂರು ಮಾರ್ಗವಾಗಿ ಬರುತಿದ್ದ KA 10 F 0395 KSRTC ಬಸ್ಗೆ ಗುಂಬಳಿಯ ಕೆರೆಯ ಬಲಿ ಯಳಂದೂರು ದಿಂದ ಬಿಳಿಗಿರಿರಂಗನ ಬೆಟ್ಟದ ಮಾರ್ಗವಾಗಿ ಹೋಗುತ್ತಿದ್ದ ಬೈಕ್ ನಿಂತಿದ್ದ ಬಸ್ಸಿಗೆ ಹೋಗಿ ಡಿಕ್ಕಿ ಹೊಡೆದಿದೆ
ಗುಂಬಳ್ಳಿ ರೋಡಿನಲ್ಲಿ ದನ ಕರುಗಳು ಮೇಕೆಗಳು ಹೋಗುತ್ತಿದ್ದು ಬಿಳಿಗಿರಿ ರಂಗನಾಥ ಬೆಟ್ಟದಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಸೊಂದು ಹೋಗಲು ಜಾಗವಿಲ್ಲದೆ ನಿಂತಿದ್ದು ದನ ಕರುಕಳು ಹೋದಾಗ ಮುಂದುಗಡೆಯಿಂದ ನಂಬರ್ ಪ್ಲೇಟ್ ಇಲ್ಲದ ಟಿವಿಎಸ್ ಎಕ್ಸೆಲ್ ಬೈಕ್ ನಲ್ಲಿ ನಾಲ್ಕು ಜನರು ಕುಡಿದ ಅಮಲಿನಲ್ಲಿ ಬಸ್ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾರೆ
ಮೇಲೆ ಏಳದ ಸ್ಥಿತಿಯಲ್ಲಿ ಗಂಭೀರವಾಗಿ ಗಾಯವಾಗಿದ್ದು
ಬೈಕ್ ನಲ್ಲಿ ಸವಾರಿ ಮಾಡುತ್ತಿದ್ದ ನಾಲ್ಕು ಜನರ ಜೇಬಿನಲ್ಲೂ ಮಧ್ಯದ ಪೋಚ್ಗಳು ಕಂಡುಬಂದಿದೆ
ಘಟನೆ ನಡೆದ ಸ್ಥಳದಲ್ಲಿ ಕೆಲವು ಸಮಯಗಳುಕಾಲ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ
ಮೇಲೆ ಏಳಲಾಗದಷ್ಟು ಕುಡಿದು ರೋಡಿನಲ್ಲಿ ಬಿದ್ದಿದ್ದು ಗಾಯಾಳುಗಳನ್ನು ವಿಷಯ ತಿಳಿದ ಯಳಂದೂರು ಪೊಲೀಸ್ ಇಲಾಖೆಯ ಪಿಎಸ್ಐ ಹನುಮಂತ್ ಉಪ್ಪಾರ್ ರವರು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಬಂದು ನಾಲ್ಕು ಜನ ಗಾಯಾಳುಗಳಲ್ಲಿ ಮೂರು ಜನರನ್ನು ಆಂಬುಲೆನ್ಸ್ ಮೂಲಕ ಹಾಗೂ ಒಬ್ಬ ಗಾಯಾಳುವನ್ನು ಪೊಲೀಸ್ ಇಲಾಖೆಯ ವಾಹನದಲ್ಲಿ ತಾಲೂಕು ಆಸ್ಪತ್ರೆಗೆ ಸೇರಿಸಿದ್ದು
ಯಳಂದೂರು ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿ ಗಾಯಾಳುಗಳಾದ ಮಹದೇವ ಬಿನ್ ಜಡೆ ಗೌಡ, ರಾಜೇಶ ಕೆ ದೇವರಲ್ಲಿ, ಕುಮಾರಸ್ವಾಮಿ ಮಾದೇಗೌಡ ಬೆಲ್ಲತ್ತ ಹಾಗೂ ಇವರುಗಳನ್ನು ತಾಲೂಕು ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗಿದೆ
*ಮಾನವೀಯತೆ ಮೆರೆದ ಪೊಲೀಸ್ ಇಲಾಖೆ *
ಗಂಭೀರವಾಗಿ ಗಾಯವಾಗಿ ಬಿದ್ದಿದ್ದ ಗಾಯಾಳುಗಳನ್ನು ಯಾವುದೇ ಸಾರ್ವಜನಿಕರು ಮೇಲೆ ಎತ್ತದೆ ಆಸ್ಪತ್ರೆಗೂ ಕರೆದು ಹೋಗದೆ ಇದ್ದ ಸಮಯದಲ್ಲಿ
ಸ್ಥಳಕ್ಕೆ ಆಗಮಿಸಿದ ಯಳಂದೂರು ಪೊಲೀಸ್ ಇಲಾಖೆಯ ಪಿಎಸ್ಐ ಹನುಮಂತ್ ಉಪ್ಪಾರ್ ಎ ಎಸ್ ಐ ಎಪಿ ಶಂಕರ್ ರೈಟರ್ರಾದ ನಾಗೇಂದ್ರ ಹಾಗೂ ಪೊಲೀಸ್ ಇಲಾಖೆಯ ವಾಹನ ಚಾಲಕರಾದ ಪ್ರತಾಪ್ ರವರು ಗಾಯವಾಗಿ ಮೇಲೇನೆ ಬಿದ್ದಿದ್ದ ಗಾಯಾಳುಗಳಲ್ಲಿ ಮೂರು ಜನರನ್ನು ಅಂಬುಲೆನ್ಸ್ ಗೆ ಎತ್ತಿಮಲಗಿಸಿ ಆಂಬುಲೆನ್ಸ್ ಅಲ್ಲಿ ಇನ್ನೊಬ್ಬರಿಗೆ ಸ್ಥಳವಿಲ್ಲದೆ ಪೊಲೀಸ್ ಇಲಾಖೆಯ ವಾಹನದಲ್ಲೇ ಕರೆದುಕೊಂಡು ತಾಲೂಕು ಆಸ್ಪತ್ರೆಗೆ ಸೇರಿಸಲಾಯಿತು
ಸ್ಥಳದಲ್ಲಿದ್ದ ಸಾರ್ವಜನಿಕರು ಪೊಲೀಸ್ ಇಲಾಖೆಯ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು
ವರದಿ :ಸ್ವಾಮಿ ಬಳೇಪೇಟೆ