ಗೋಕಾಕ : ಗೋಕಾಕ ತಾಲೂಕ ಆಡಳಿತ ಪಂಚಾಯತ ನಗರ ಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಆಶ್ರಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಸ್ಪೃಶ್ಯತೆಯ ನಿವಾರಣಾ ಹೋರಾಟದ ಮುಂಚೂಣಿ ವಹಿಸಿದ ಧೀಮಂತ ನಾಯಕ ಶೋಷಿತರ ದಮನಿತರ ಧ್ವನಿ. ಹಸಿರು ಕ್ರಾಂತಿಯ ಹರಿಕಾರರಾದ ಡಾ.ಬಾಬು ಜಗಜೀವನರಾಮ್ ಅವರ 118 ನೇ ಜನ್ಮದಿನದಂದು ಅವರಿಗೆ ಗೌರವದ ನಮನಗಳನ್ನು ಸಲ್ಲಿಸಲಾಯಿತು.
ಮಾನ್ಯ ತಹಸೀಲ್ದಾರರ ಮೂಲಕ ಮಾನ್ಯ ಪ್ರಧಾನಮಂತ್ರಿ ಯವರಿಗೆ ಪತ್ರಗಳ ಮೂಲಕ ದಲಿತ ಮುಖಂಡರು ಬಾಬುಜಗಜೀವನರಾಮ ಅವರಿಗೆ ಮರಣೋತ್ತರವಾಗಿ ಭಾರತರತ್ನ ನೀಡಲು ಕಾರ್ಯಕ್ರಮಕ್ಕೆ ಆಗಮಿಸಿದ ನೂರಾರು ಮುಖಂಡರು ತಮ್ಮ ಕೈಗಳಿಂದ ತಾವೆ ಬರೆದು ಪತ್ರಗಳಲ್ಲಿ ವಿನಂತಿಸಿಕೊಂಡರು.
ಡಾ.ಮೋಹನ ಭಸ್ಮ ತಹಸೀಲ್ದಾರರು ಮಾತನಾಡಿ ಬಾಬು ಜಗಜೀವನರಾಮ್ ಸ್ವಾತಂತ್ರ್ಯ ಹೋರಾಟಗಾರರಾಗಿ, ಸ್ವಾತಂತ್ರ್ಯನಂತರ ಭಾರತ ಸರ್ಕಾರದ ಸಚಿವರಾಗಿ, ಉಪ ಪ್ರಧಾನಿಯಾಗಿ ದೇಶದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ ಮಹಾನ್ ನಾಯಕರು. ಕೃಷಿ ಸಚಿವರಾಗಿದ್ದಾಗ ಸುಧಾರಿತ ಬಿತ್ತನೆ ಬೀಜ ಹಾಗೂ ಸುಧಾರಿತ ತಳಿಗಳನ್ನು ಅನುಷ್ಠಾನಗೊಳಿಸಿ ಆಹಾರ ಧಾನ್ಯಗಳ ಕೊರತೆ ನೀಗಿಸಿದ ಹಸಿರುಕ್ರಾಂತಿಯ ಹರಿಕಾರ ಎನಿಸಿಕೊಂಡರು. ಅವರ ತತ್ವಾದರ್ಶಗಳು ವಿಚಾರಧಾರೆಗಳು ನಮಗೆಲ್ಲರಿಗೂ ದಾರಿದೀಪವಾಗಿವೆ ಎಂದರು.
ಹಾಗೂ ಮಾನ್ಯ ತಹಸೀಲ್ದಾರರ ಮೂಲಕ ಮಾನ್ಯ ಪ್ರಧಾನಮಂತ್ರಿ ಯವರಿಗೆ ಪತ್ರಗಳ ಮೂಲಕ ದಲಿತ ಮುಖಂಡರು ಬಾಬುಜಗಜೀವನರಾಮ ಅವರಿಗೆ ಮರಣೋತ್ತರವಾಗಿ ಭಾರತರತ್ನ ನೀಡಲು ಕಾರ್ಯಕ್ರಮಕ್ಕೆ ಆಗಮಿಸಿದ ನೂರಾರು ಮುಖಂಡರು ತಮ್ಮ ಕೈಗಳ ಮೂಲಕ ಪತ್ರಗಳಲ್ಲಿ ಬರೆದು ತಹಸೀಲ್ದಾರರ ಅವರಿಗೆ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು ಏ.ಬಿ.ಮಲಬನ್ನವರ ಜಿ.ಬಿ.ಬಳಿಗಾರ ಕ್ಷೇತ್ರ ಶಿಕ್ಷಣಾಧಿಕಾರಿ ಗಳು.ಗೋಕಾಕ ಶ್ರೀ ಪರಶುರಾಮ ಎಮ.ಘಸ್ತೇ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ತಾಲೂಕಿನ ಪರಿಶಿಷ್ಟ ಜಾತಿಯ ವಿವಿದ ಸಂಘಟನೆಗಳ ಮುಖಂಡರು.ಪದಾಧಿಕಾರಿಗಳು ಮತ್ತು ಎಲ್ಲ ಸಮುದಾಯದ ಸಮಸ್ತ ನಾಗರಿಕರು ಇದ್ದರು.
ವರದಿ: ರಾಜು ಮುಂಡೆ