—————–ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಕಾನೂನು ಸಾಕ್ಷರತಾ ಶಿಬಿರ
ಗೋಕಾಕ: ಗೋಕಾಕದ ಗ್ರಾಮೀಣ ಪೋಲಿಸ್ ಠಾಣೆ ಆವರಣದಲ್ಲಿ ಡಿಎಸ್ಪಿ ರವಿ ನಾಯಕ ಇವರ ನೇತೃತ್ವದಲ್ಲಿ ಗೋಕಾಕ ಕಾನೂನು ಸೇವಾ ಸಮಿತಿ ಗೋಕಾಕ. ನ್ಯಾಯವಾದಿಗಳ ಸಂಘ ಸಂಯುಕ್ತಾಶ್ರಯದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಕಾನೂನು ಸಾಕ್ಷರತಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಗೋಕಾಕ ನ್ಯಾಯಾಲಯದ ನ್ಯಾಯಾದೀಶರು, ನ್ಯಾಯವಾದಿಗಳು ಮತ್ತು ಪೋಲಿಸ್ ಇಲಾಖೆಯ ಅಧಿಕಾರಿಗಳು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.
ಗೋಕಾಕ ಡಿಎಸಪಿ ರವಿ ನಾಯಕ ಇವರು ಶಿಬಿರವನ್ನು ಉದ್ದೇಸಿಸಿ ಇವತ್ತಿನ ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರ ಕೊಡುವುದು ಹಿರಿಯರ ಆದ್ಯ ಕರ್ತ್ಯವ್ಯ ,ಸಂಸ್ಕಾರ ಇದ್ದ ಕುಟುಂಬ ಯಾವುತ್ತೂ ಪೋಲಿಸ್ ಠಾಣೆಗೆ ಬರುವುದಿಲ್ಲ.ಅದು ಅನ್ಯೋನ್ಯವಾಗಿ ಜೀವನ ಸಾಗಿಸುತ್ತದೆ. ಇವತ್ತಿನ ಯುಗದಲ್ಲಿ ಕ್ಷಣಕ್ಷಣಕ್ಕೂ ಕಾನೂನು ಬಾಹಿರ ಚಟುವಟಿಕೆಗಳು,ಅಪರಾಧಗಳಲ್ಲಿ ಸಂಸ್ಕಾರ ಇಲ್ಲದ ಹಿರಿಯರ ಮಾತು ಕೆಳದ ಯುವಕರು ಹೆಚ್ಚಾಗಿದ್ದಾರೆ ಅದನ್ನು ತಡೆಯುವ ಶಕ್ತಿ ಹಿರಿಯರಿಗಿದೆ ತಮಗೆ ಅನ್ಯಾಯವಾದಲ್ಲಿ ಪೋಲಿಸ್ ಇಲಾಖೆ ತಮ್ಮ ಜೊತೆ ಸದಾ ಇರುತ್ತದೆ ಎಂದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾದೀಶರಾದ ಉಮೇಶ ಅತ್ನುರೆ ಇವರು ಹಿರಿಯ ನಾಗರಿಕರಿಗೆ ಕಾನೂನಲ್ಲಿ ಹಕ್ಕುಗಳಿವೆ,ತಮ್ಮ ಮಕ್ಕಳು ತಮ್ಮನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ನ್ಯಾಯಾಲಯಕ್ಕೆ ಅರ್ಜಿ ನಿಡಿದ್ದಲ್ಲಿ ನ್ಯಾಯ ಕೊಡಿಸುವ ಬರವಸೆ ನೀಡಿದರು. ಇನ್ನು ಮನೆಯಲ್ಲಿ ಮಕ್ಕಳ ಹುಟ್ಟು ಹಬ್ಬದಂತೆ ಮಕ್ಕಳು ತಮ್ಮ ಹಿರಿಯರ ಹುಟ್ಟು ಹಬ್ಬವನ್ನು ಮನೆಯಲ್ಲಿ ಆಚರಿಸಬೇಕೆಂದು ತಮ್ಮ ಅಬಿಪ್ರಾಯ ವ್ಯಕ್ತಪಡಿಸಿದರು.
ಪ್ಯಾನಲ್ ನ್ಯಾಯವಾದಿ ಎಚ್,ಎಲ್,ಆಡೀನ ಇವರು ಹಿರಿಯ ನಾಗರಿಕರ ರಕ್ಷಣೆ ಕಾಯಿದೆಗಳ ಮಾಹಿತಿಯನ್ನು ನೀಡಿದರು.ಈ ಸಂದರ್ಭದಲ್ಲಿ ನ್ಯಾಯಾದಿಶರಾದ ಚೈತ್ರಾ ಕುಲಕರ್ಣಿ,ಮಹಾದೇವ ಕಾನಟ್ಟಿ ನ್ಯಾಯವಾದಿ ಸಂಘದ ಅದ್ಯಕ್ಷ ಜಿ.ಬಿ.ಪಾಟೀಲ, ಸಿಪಿಅಯ್ವಸುರೇಶಬಾಬು, ಮಹಿಳಾ ಪ್ರತಿನಿದಿ ವಿ ಜಿ, ಸಿದ್ದಾಪುರಮಠ, ಪಿಎಸ್ ಐ ಕೆ,ವಾಲಿಕಾರ ಸೇರಿದಂತೆ ನೂರಾರು ಹಿರಿಯ ನಾಗರಿಕರು,ಪೋಲಿಸ್ ಸಿಬ್ಬಂದಿಗಳು ಉಪಸ್ಥಿತರಿದ್ದು ಡಿಜಿ ಕೊಣ್ಣೂರ ಇವರು ಸ್ವಾಗತಿಸಿ,ವಂದಿಸಿದರು.
ವರದಿ: ಮನೋಹರ ಮೇಗೇರಿ




