Ad imageAd image

ವಿವಿಧ ಬೇಡಿಕೆಗಳಿಗಾಗಿ ಡಿಎಸ್ಎಸ್, ಧರಣಿ ಸತ್ಯಾಗ್ರಹ

Bharath Vaibhav
ವಿವಿಧ ಬೇಡಿಕೆಗಳಿಗಾಗಿ ಡಿಎಸ್ಎಸ್, ಧರಣಿ ಸತ್ಯಾಗ್ರಹ
WhatsApp Group Join Now
Telegram Group Join Now

ಸಿಂಧನೂರು : ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಸಾರ್ವಜನಿಕರು ಅನೇಕ ಸಮಸ್ಯೆಗಳನ್ನು ಎದುರಿಸುತಿದ್ದು ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಸರಿಯಾದ ಚರಂಡಿ. ವಿದ್ಯುತ್ ದೀಪ. ರಸ್ತೆ.ಅಂಗನವಾಡಿಗಳಲ್ಲಿ ಮೂಲಭೂತ ಸೌಲಭ್ಯಗಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಜನರು ಸಂಕಷ್ಟ ಪಡುತ್ತಿದ್ದಾರೆ ಎಂದು “ಡಿಎಸ್‌ಎಸ್. ಡಾ. ಎನ್. ಮೂರ್ತಿ ಸ್ಥಾಪಿತ, ಸಂಘಟನೆಯ ತಾಲೂಕಾಧ್ಯಕ್ಷ ನಿರುಪಾದಪ್ಪ ಎಲೆಕೂಡ್ಲಿಗಿ ತಿಳಿಸಿದ್ದಾರೆ.

ನಂತರ ಸಮಿತಿಯ ಜಿಲ್ಲಾಧ್ಯಕ್ಷ ಅಶೋಕ ನಂಜಲದಿನ್ನಿ ಮಾತನಾಡಿ ಕಲ್ಬುರ್ಗಿ ವಿಭಾಗೀಯ ಅಧ್ಯಕ್ಷ ಬಸವರಾಜ ಸಾಸಲಮರಿ ಅಣ್ಣನವರ ಮಾರ್ಗದರ್ಶನದಲ್ಲಿ ಈ ಧರಣಿ ಹಮ್ಮಿಕೊಂಡದ್ದು ತಾಲೂಕಿನ ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ೧೫ನೇ ಹಣಕಾಸು ಯೋಜನೆ ಅಡಿಯಲ್ಲಿ ಚರಂಡಿ ಹೂಳೆತ್ತಲು ಖರ್ಚು ಮಾಡಿದ ಅನುದಾನ ಮತ್ತು ಸ್ಥಳೀಯ ಚರಂಡಿಗಳ ಸ್ಥಿತಿಗತಿ ಅವಲೋಕನ ಮಾಡಿದರೆ ಅನುದಾನ ದುರುಪಯೋಗವಾದ ಬಗ್ಗೆ ವಾಸ್ತವ ಸ್ಥಿತಿ ಅರ್ಥವಾಗುತ್ತದೆ.

ಗ್ರಾಮ ಪಂಚಾಯಿತಿಪಿ ಡಿ ಓ, ವಸತಿ ಯೋಜನೆ ಫಲಾನುಭವಿಗಳ ಆಯ್ಕೆ ಗ್ರಾಮ ಸಭೆಗಳ ಮುಖಾಂತರ ಮಾಡದೆ ಮನಬಂದಂತೆ ಆಯ್ಕೆ ಮಾಡಿ ವಸತಿ ಹೀನರಿಗೆ ಅನ್ಯಾಯ ಮಾಡುತ್ತಿದ್ದಾರೆ ಇದರಿಂದ ಅಭಿವೃದ್ಧಿ ಕಾಣದೆ ಹಳ್ಳಿಗಳಲ್ಲಿ ನರಕ ಸದೃಶ್ಯ ವಾತಾವರಣ ಉಂಟಾಗಿದ್ದು ಈ ಕುರಿತು ಪರಿಶೀಲನೆ ಮಾಡಿ ಭ್ರಷ್ಟಾಚಾರ ವೆಸಗಿದ ಪಂಚಾಯತಿ ಅಧಿಕಾರಿಗಳ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಬೇಕೆಂದು ನಗರದ ತಾಲೂಕ ಪಂಚಾಯತಿ ಕಾರ್ಯಾಲಯದ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಂಡು ತಾಲೂಕ ಪಂಚಾಯತಿ ಇ ಓ, ಅವರಿಗೆ ಮನವಿ ಪತ್ರ ಸಲ್ಲಿಸಿದರು
ಈ ಸಂದರ್ಭದಲ್ಲಿ : ಜಿಲ್ಲಾಧ್ಯಕ್ಷ ಅಶೋಕ ನಂಜಲದಿನ್ನಿ. ತಾಲೂಕಾಧ್ಯಕ್ಷ ನಿರುಪಾದೆಪ್ಪ ಎಲೆಕೂಡ್ಲಿಗಿ. ಮೌನೇಶ್ ದಿದ್ದಿಗಿ. ಮರಿಸ್ವಾಮಿ ಹಸುಂಕಲ್. ಛತ್ರಪ್ಪ ವೀರಾಪುರ. ಶಿವಲಿಂಗ ಹತ್ತಿಗುಡ್ಡ. ವಿರುಪಮ್ಮ ಉದ್ಬಾಳ. ಲಕ್ಷ್ಮಿ ಪತ್ತಾರ್. ಮಲ್ಲಿಕಾರ್ಜುನ ಹತ್ತಿಗುಡ್ಡ. ಈಶಪ್ಪ ಬುಕ್ಕನಟ್ಟಿ. ಬಾಲಪ್ಪ ಮುದ್ದಾಪುರ. ಇನ್ನು ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

ವರದಿ:ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!