ರೋಣ :ರೋಣ ತಾಲೂಕ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಅಶೋಕ ಕುರಿಯವರು ಸ. ಉ. ಹಿ ಪ್ರಾ ಗಂ ಮ ಶಾಲೆ ರೋಣ ಹಾಗೂ ಉಪಾಧ್ಯಕ್ಷರಾಗಿ ರಮೇಶ ಬಿ ಇಟಗಿ ಸ ಕಿ ಪ್ರಾ ಶಾಲೆ ಯರೇಕುರಬನಾಳ ದಿನಾಂಕ 24-05-2025 ರಂದು ಅವಿರೋಧ ಆಯ್ಕೆಯಾದರು.
ರೋಣ ಪಟ್ಟಣದಲ್ಲಿ ರೋಣ ತಾಲೂಕ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕಿನ ಉನ್ನತ ಸ್ಥಾನಕ್ಕೆ ತರಲು ಶ್ರಮಿಸುವೆ ಎಂದು ನೂತನ ಅಧ್ಯಕ್ಷರಾದ ಅಶೋಕ ಕುರಿಯವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ರೋಣ ತಾಲೂಕಿನ ಶಿಕ್ಷಕರ ಸಂಘದ ಅಧ್ಯಕ್ಷರಾದ ವಾಯ್ ಡಿ ಗಾಣಿಗೇರ , ಗದಗ ಜಿಲ್ಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ ಕುರಿಯವರ,ಉಪಾಧ್ಯಕ್ಷರಾದ ಎಂ ವಾಯ ಜಕ್ಕರಸಾನಿ, ರೋಣ ತಾಲೂಕ ನೌಕರರ ಸಂಘದ ಅಧ್ಯಕ್ಷರಾದ ಶರಣು ದಾನಪ್ಪಗೌಡರ ಹಾಗೂ ಬ್ಯಾಂಕಿನ ಎಲ್ಲಾ ನಿರ್ದೇಶಕರು ,ಚುನಾವಣಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಬ್ಯಾಂಕಿನ ಎಲ್ಲಾ ನಿರ್ದೇಶಕರು ವಿವಿಧ ಶಾಲೆಗಳಿಂದ ಆಗಮಿಸಿದ ಎಲ್ಲ ಗುರುವೃಂದ ಹಾಗೂ ಬ್ಯಾಂಕಿನ್ ಸಿಬ್ಬಂದಿ ಭಾಗವಹಿಸಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಪ್ರಧಾನ ಗುರುಗಳಾದ ಎನ್ ಎ ಮುಲ್ಲಾ, ಎ ಎಂ ಮಾರನಬಸರಿ ಹಾಗೂ ಸಿಬ್ಬಂದಿ ವರ್ಗ ಸೇರಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೂ ಹಾಗೂ ಉಪಾಧ್ಯಕ್ಷರಿಗೂ ಗೌರವ ಪೂರಕ ಸನ್ಮಾನ ಮಾಡಿದರು.




