ಲಿಂಗಸ್ಗೂರು: ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ ಅಹೋರಾತ್ರಿ ಸರದಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಂತ ಸಂಘಟನೆಗಳು ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ವಿವಿಧ ಜಿಲ್ಲೆಗಳಿಂದ ಬಸ್ ಸಂಚಾರ ಒದಗಿಸಬೇಕೆಂದು ಎರಡು ದಿನಗಳ ಕಾಲ ಧರಣಿ ಸತ್ಯಾಗ್ರಹ ನಡೆಸಿದರು ಕೊನೆಗೂ ಎಚ್ಚೆತ್ತುಕೊಂಡ ಅಧಿಕಾರಿಗಳು ಧರಣಿ ಸ್ಥಳಕ್ಕೆ ಸುಮಾರು ರಾತ್ರಿ 8 ಗಂಟೆಗೆ ಭೇಟಿ ನೀಡುವ ಮೂಲಕ ಧರಣಿ ನಿರತರನ್ನು ಮನವರಿಸಲು ಮುಂದಾದಾಗ ಊರಿನ ಮುಖಂಡರು ಧರಣೀರ್ತರು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು ಧರಣಿ ನಿರತ ಮತ್ತು ಮುಖಂಡರ ಜೊತೆ ಮನವಿ ಮಾಡಿದ ಅಧಿಕಾರಿಗಳು ಕೆಲ ಸಮಯ ನಮಗೆ ನೀಡಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬರುವ ಬಸ್ಸುಗಳನ್ನು ಹಟ್ಟಿ ಚಿನ್ನದ ಗಣಿ ಪಟ್ಟಣದ ಮೂಲಕ ಹೊರಡುವ ವ್ಯವಸ್ಥೆ ಕಲ್ಪಿಸಲಾಗುವುದೆಂದು ಭರವಸೆ ನೀಡುವ ಮೂಲಕ ಧರಣಿ ನಿರತರನ್ನು ಮನವೊಲಿಸಿ ಇಲ್ಲಿಗೆ ನಿಮ್ಮ ಧರಣಿ ಅಂತ್ಯಗೊಳಿಸಿ ಎಂದು ಮನವಿ ಮಾಡಿಕೊಂಡರು.
ಧರಣಿ ನಿರತರು ಮತ್ತು ಊರಿನ ಮುಖಂಡರು ಮುಂದಿನ ದಿನಗಳಲ್ಲಿ ಬೇಡಿಕೆ ಈಡೇರದಿದ್ದರೆ ನ್ಯಾಷನಲ್ ಹೈವೇ ಎ 51
ಯರಡೋಣ ಕ್ರಾಸ್ ಮುಖ್ಯರಸ್ತೆಯನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆ ಧರಣಿ ನಡೆಸುತ್ತೇವೆಂದು ಎಚ್ಚರಿಕೆ ನೀಡಿ ಧರಣಿ ವಾಪಸ್ ಪಡೆದರು
ಈ ಸಂದರ್ಭದಲ್ಲಿ ವಿನೋದ್, ಗಿರಿ, ಹಟ್ಟಿ ಪಟ್ಟಣ ಪಂಚಾಯತಿ ಅಧ್ಯಕ್ಷ ಸನ್ದಾನಿ ಎಂಡಿ, ಸುರೇಶ್ ಗೌಡ ಗುರಿಕಾರ್, ಹನುಮಂತ್ ರೆಡ್ಡಿ, ಪರಮೇಶ್ ಯಾದವ್, ಬಸವರಾಜ್ ಪೈ, ಯಂಕೋಬ ಪವಡೆ, ಮಲ್ಲು ಚಿತ್ರನಾಳ, ಸೇರಿದಂತೆ ಇನ್ನು ಅನೇಕ ಊರಿನ ಮುಖಂಡರು ಉಪಸ್ಥಿತರಿದ್ದರು.
ಬಸ್ ಸಂಚಾರ ಕಲ್ಪಿಸಲು ಅಹೋರಾತ್ರಿ ಸರದಿ ಉಪವಾಸ ಸತ್ಯಗ್ರಹ ಸ್ಥಳಕ್ಕೆ ಭೇಟಿ ನೀಡಿದ ಡಿ ಟಿ ಓ ಚಂದ್ರಶೇಖರ್
