ಸೇಡಂ : ಚಿತ್ತಾಪೂರ ಪ್ರಾದೇಶಿಕ ಅರಣ್ಯ ಇಲಾಖೆಯ ವತಿಯಿಂದ ದುಗುನೂರ ಪ್ರೌಢ ಶಾಲೆ ಸೇಡಂ ತಾಲೂಕಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಆಚರಿಸಿದ “ಚಿಣ್ಣರ ವನದರ್ಶನ” ಕಾರ್ಯಕ್ರಮದಡಿ ಬೀದರ್ ಜಿಲ್ಲೆಯ ಜೆಎಲ್ಆರ್, ಕೃಷ್ಣಮೃಗ ಸಂರಕ್ಷಿತ ಪ್ರದೇಶ, ಟ್ರೀ ಪಾರ್ಕ್, ಸಸ್ಯ ಕ್ಷೇತ್ರಗಳಿಗೆ ಎರಡು ದಿನದ 8/12/2025 ಮತ್ತು 9/12/2025ರಂದು ಪ್ರವಾಸ ಕೈಗೊಳ್ಳಲಾಗಿತ್ತು.
ಈ ಪ್ರವಾಸದ ಮುಖ್ಯಾಂಶಗಳು:
– ಕೃಷ್ಣಮೃಗ ಸಂರಕ್ಷಿತ ಪ್ರದೇಶದಲ್ಲಿ ಕೃಷ್ಣಮೃಗ, ಜಿಂಕೆ ಪಕ್ಷಿಗಳ ವೀಕ್ಷಣೆ
– ಸಸ್ಯ ಕ್ಷೇತ್ರದಲ್ಲಿ ಸಸ್ಯಗಳ ಮಹತ್ವ, ಸಂರಕ್ಷಣೆ ಕುರಿತು ತರಬೇತಿ
– ಅರಣ್ಯ ಅಧಿಕಾರಿಗಳು ಹಾಗೂ ಶೈಲೇಂದ್ರ ಕವಡೆ ಅವರಿಂದ ಅರಣ್ಯ ಸಂರಕ್ಷಣೆಯ ಮಹತ್ವ ಕುರಿತು ಉಪನ್ಯಾಸ ಮಾಡಲಾಯಿತು ಎಂದು ಅರಣ್ಯಾಧಿಕಾರಿಗಳು ಪತ್ರಿಕೆಗೆ ಮಾಹಿತಿ ನೀಡಿದರು.
ಪ್ರವಾಸದ ಫಲಿತಾಂಶ:
– ಮಕ್ಕಳಿಗೆ ಅರಣ್ಯ, ವನ್ಯಜೀವಿಗಳ ಬಗ್ಗೆ ಜಾಗೃತಿ
– ಪ್ರಕೃತಿ ಸಂರಕ್ಷಣೆಯ ಮಹತ್ವ ಅರಿವು
– ಹೊಸ ಅನುಭವ, ಸ್ಮರಣೀಯ ಕ್ಷಣಗಳು ತಿಳಿದು ಬರುತ್ತವೆ ಎಂದು ಅರಣ್ಯಾಧಿಕಾರಿಗಳಾದ ವಿಜಯ್ ಕುಮಾರ್ ಪಿ ಬಡಿಗೇರ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದರು.
ಈ ಸಂಧರ್ಭದಲ್ಲಿ ಅರಣ್ಯಾಧಿಕಾರಿಗಳಾದ ಸಿದ್ದು ಗೌಡ ಡಿ,ಆರ್,ಎಫ್ ಮತ್ತು ಭೀಮಣ್ಣಗೌಡ ಬೀಟ್ ಆಫೀಸರ್ ಹಾಗೂ ಶಾಲಾ ಮಕ್ಕಳು ಮತ್ತು ಶಿಕ್ಷಕರು ಇದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




