ಯಳಂದೂರು: ಎಸ್. ಡಿ. ವಿ ಎಸ್ ಶಾಲೆಯ ಮೈದಾನದಲ್ಲಿ ಶ್ರೀ ದುಗ್ಗಹಟ್ಟಿ ಪಿ. ವೀರಭದ್ರಪ್ಪ ಅಭಿನಂದನಾ ಸಮಾರಂಭ ಹಾಗೂ ದುಗ್ಗಹಟ್ಟಿ ಧೀಮಂತ ಎಂಬ ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ನೆಡೆಸಲಾಯಿತ್ತು ಕಾರ್ಯಕ್ರಮವನ್ನು ಜಗದ್ಗುರು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕೆ ಚಾಲನೆ ನೀಡಿದರು
ದುಗ್ಗಹಟ್ಟಿ ಧೀಮಂತ ಕೃತಿಯನ್ನು ಚಾಮರಾಜನಗರ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಸಿ. ಪುಟ್ಟರಂಗ ಶೆಟ್ಟಿ ರವರು ಲೋಕಾರ್ಪಣೆ ಮಾಡಿದರು ಕೊಳ್ಳೇಗಾಲ ಶಾಸಕರಾದ ಎ ಆರ್ ಕೃಷ್ಣ ಮೂರ್ತಿ ರವರು ಮಾತಾಡಿ ಯಳಂದೂರು ತಾಲೂಕು ದುಗ್ಗಹಟ್ಟಿ ಗ್ರಾಮದಲ್ಲಿ ನೆಲೆಸಿರುವ ಮಾನ್ಯ ಶ್ರೀ ವೀರಭದ್ರಪ್ಪನವರು
ಈ ಭಾಗದ ಅತ್ಯಂತ ಹಿರಿಯರು, ಸಮಾಜ ಸೇವಕರು, ಗುರುಲಿಂಗಜಂಗಮ ಪ್ರೇಮಿಗಳು, ದಾಸೋಹಿಗಳು, ಹಲವು ಜನೋಪಯೋಗಿ ಕೆಲಸಗಳನ್ನು ಮಾಡಿದವರು.ಈ ವಯಸ್ಸಿನಲ್ಲೂ ಕ್ರಿಯಾಶೀಲರಾಗಿದ್ದು ಸಮಾಜದೊಂದಿಗೆ ಸಕ್ರಿಯವಾಗಿ ಇರುವವರು ಗ್ರಾಮಗಳ ಏಳಿಗೆಯ ಕುರಿತು ಅಪಾರ ಕಾಳಜಿ ಹಾಗೂ ದೂರದೃಷ್ಟಿ ಉಳ್ಳವರು. ಎಂದರು
ಈ ಸಂದರ್ಭದಲ್ಲಿ. ಶಾಸಕರುಗಳಾದ ಪುಟ್ಟರಂಗ ಶೆಟ್ಟಿ. ಗಣೇಶ್ ಪ್ರಸಾದ್. ಹಾಗೂ ಮಾಜಿ ಶಾಸಕರಾದ ನಂಜುಂಡ ಸ್ವಾಮಿ, ಸುತ್ತೂರು ಶ್ರೀಗಳು ಹಾಗೂ ಹಲವರು ಗಣ್ಯರು ಹಾಜರಿದ್ದರು
ವರದಿ :ಸ್ವಾಮಿ ಬಳೇಪೇಟೆ