Ad imageAd image

ಶಬ್ದ ಮಾಲಿನ್ಯ ಕುರಿತು ಅಧಿಕಾರಿಗಳು ಗಮನ ಹರಿಸಿ: ದುಂಡಪ್ಪ ಖಿನ್ನವರ.

Bharath Vaibhav
ಶಬ್ದ ಮಾಲಿನ್ಯ ಕುರಿತು ಅಧಿಕಾರಿಗಳು ಗಮನ ಹರಿಸಿ: ದುಂಡಪ್ಪ ಖಿನ್ನವರ.
WhatsApp Group Join Now
Telegram Group Join Now

ಚಿಕ್ಕೋಡಿ: ಗ್ರಾಮೀಣ ಪ್ರದೇಶದಲ್ಲಿ ಶಬ್ದ ಮಾಲಿನ್ಯದಿಂದ ಜನರ ಮೇಲೆ ವಿಪರೀತವಾದ ಪರಿಣಾಮ ಆಗುತ್ತಿದೆ ಈ‌ ಕಾರಣಕ್ಕಾಗಿ ಸಂಬಂದಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತ ದುಂಡಪ್ಪ ಖಿನ್ನವರ ಆಗ್ರಹಿಸಿದ್ದಾರೆ‌.

ಚಿಕ್ಕೋಡಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ ಸದ್ಯದ ಪರಿಸ್ಥಿತಿಯಲ್ಲಿ ಟ್ರ್ಯಾಕ್ಟರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಧ್ವನಿ ವರ್ಧಕ ಹಚ್ಚಲಾಗುತ್ತಿದೆ.ಇದರಿಂದಾಗಿ ಚಿಕ್ಕಮಕ್ಕಳು,ಶಾಲಾ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಅದಲ್ಲದೇ ಹಿರಿಯರ ಮೇಲೆ ಬಹಳಷ್ಟು ಪರಿಣಾಮ ಬಿಳುತ್ತಿದೆ.

ದೊಡ್ಡ ಧ್ವನಿ ವರ್ಧಕದಿಂದ ಸಮಾಜ ಶಾಂತಿ ಕದಡುವ ಕೆಲಸ ಆಗುತ್ತಿದೆ.ಶಾಲೆಯ ಪಕ್ಕದಲ್ಲಿ ಹೊಲದಲ್ಲಿ ಟ್ರಾಕ್ಟರಗಳಿಂದ ಉಳಿಮೆ ಮಾಡುವ ಸಂಧರ್ಭದಲ್ಲಿ ದೊಡ್ಡ ಧ್ವನಿ ವರ್ಧಕ ಹಚ್ಚುತ್ತಾರೆ.ಇದರಿಂದ ಮಕ್ಕಳು ಅಭ್ಯಾಸ ಇಲ್ಲದೆ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ದೊಡ್ಡ ಪ್ರಮಾಣದ ಧ್ವನಿ ವರ್ಧಕ ವಿರುದ್ಧ ಅಧಿಕಾರಿಗಳು ಸೂಕ್ತ ಕ್ರಮವಹಿ,ಶಬ್ದ ಮಾಲಿನ್ಯವನ್ನು ತಡೆಗಟ್ಟಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತ ದುಂಡಪ್ಪ ಖಿನ್ನವರ ಆಗ್ರಹಿಸಿದ್ದಾರೆ‌.

ವರದಿ : ರಾಜು ಮುಂಡೆ

WhatsApp Group Join Now
Telegram Group Join Now
Share This Article
error: Content is protected !!