ಗುರುಮಾಠಕಲ್ : ರಾಜ್ಯ ಸಾರಿಗೆ ಸಂಸ್ಥೆ ನೌಕರರು ಮುಷ್ಕರದ ಬಿಸಿ ತೆಲಂಗಾಣದ ಗಡಿ ಭಾಗದ ಗುರುಮಾಠಕಲ್ ಜನರಿಗೆ ಮುಟ್ಟಿದೆ.
ಮುಂಗಡವಾಗಿ ರೈಲು ಪ್ರಯಾಣ, ಆಸ್ಪತ್ರೆ ಸೇರಿದಂತೆ ಹಲವು ಕಾರ್ಯಗಳಿಗೆ ತೆರಳಬೇಕಿರುವ ಜನರು ತಡಬಡಿಸುತ್ತಿದರೆ.
ಗಡಿ ತಾಲೂಕು ಗುರುಮಠಕಲ್ ದಿಂದ ಯಾದಗಿರಿ ಹೋಗುವ ಸಾಮಾನ್ಯವಾಗಿ 50ರೂ. ಒಳಗೆ ಟಿಕೇಟ್ ದರ ಇದ್ದು, ಸಾರಿಗೆ ಬಸ್ ಬಂದ್ ಆಗಿರುವುದನ್ನು ಕಂಡು ಖಾಸಗಿ ವಾಹನದ ಮಾಲೀಕರು 80 ರಿಂದ 100 ರೂಪಾಯಿಗಳು ತೆಗೆದುಕುಳ್ಳುತ್ತಿದ್ದರು ಗಾಳಿ ಬಿಟ್ಟಗೆ ತುರಿಕೊಳ್ಳಬೇಕು ಎಂಬಂತೆ ಜನರ ಜೇಬಿಗೆ ಕನ್ನ ಹಾಕುತ್ತಿರುವ ಖಾಸಗಿ ವಾಹನಗಳ ಚಾಲಕರು ಬಸ್ ನಿಲ್ದಾಣದಲ್ಲಿಯೇ ಖಾಸಗಿ ವಾಹನಗಳಲ್ಲಿ ಜನರನ್ನು ತುಂಬಿಕೊಂಡು ಹೆಚ್ಚಿನ ಹಣ ಪೀಕುತ್ತಿರುವುದು ಕಂಡು ಬಂತು.
ಈ ಬಗ್ಗೆ ಪ್ರಯಾಣಿಕರು ಹೆಚ್ಚಿನ ಹಣ ನೀಡಲು ಸಹಜವಾಗಿಯೇ ನಿರಾಕರಿಸಿದರೇ, ಆದರೆ ಅನಿವಾರ್ಯ ಪರಸ್ಥಿತಿ ಯಲ್ಲಿ ಪ್ರಯಾಣಿಕರನ್ನೇ ದಬಾಯಿಸಿ, ಹೋಗೊದಿದ್ದರೆ ಹೋಗು, ಎಲ್ಲರೂ ಹೋಗುತ್ತಿಲ್ಲವೇ ಎಂದು ಹೆದರಿಸಿ ಖಾಸಗಿ ವಾಹನಗಳ ಹತ್ತಿಸುತ್ತಿರುವು ಕಂಡು ಬಂತು.
ಇಡಿ ನಮ್ಮ ಕರ್ನಾಟಕ ರಾಜ್ಯ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಬಸ್ ಬಂದ್ ಆಗುವ ಸುದ್ದಿ ತಿಳಿದು ಹೆಚ್ಚಿನ ಜನರು ಪ್ರಯಾಣ ಮುಂದೆ ಹಾಕಿದ್ದಾರೆ. ಹಾಗಾಗಿ ಗುರುಮಠಕಲ್ ಬಸ್ ನಿಲ್ದಾಣದಲ್ಲಿ ಜನರಿಲ್ಲದೇ ಬಿಕೋ ಎನ್ನುತ್ತಿತ್ತು ದೃಶ್ಯ ನೋಡಿ
ಯಾದಗಿರಿ, ಗುರುಮಠಕಲ್ ಮಾರ್ಗವಾಗಿ ಹೈದರಾಬಾದ್ ತೆರಳುವ ಪ್ರಯಾಣಿಕರಿಗೆ ಯಾವುದೇ ತೊಂದರೆಯಿಲ್ಲದೆ ತೆಲಂಗಾಣದ ಸಾರಿಗೆ ವಾಹನಗಳು ಸೇವೆ ನೀಡುವುದು ಕಂಡು ಬಂತು.
ಅಮಾಯಕರಿಂದ ವಸೂಲಿ ತಡೆಯುವವರಾರು : ಸಾರಿಗೆ ಬಸ್ ಗಳು ಬಂದ್ ಆಗಿದ್ದರಿಂದ ಗುರುಮಠಕಲ್ ದಿಂದ ಯಾದಗಿರಿಗೆ 80ರೂ ವಸೂಲಿ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳುತ್ತದೆ ಇದನ್ನು ತಕ್ಷಣ ತಡೆಯಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಪೊಲೀಸ್ ಬಂದೋಬಸ್ತ್: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಬಸ್ ನಿಲ್ದಾಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ವರದಿ : ರವಿ ಬುರನೋಳ್




