ರಾಯಬಾಗ :ತಾಲೂಕಿನ ಖನದಾಳ ಗ್ರಾಮದ ಭೋವಿ ಸಮಾಜದ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವವು ಅತ್ಯಂತ ಅದ್ದೂರಿಯಾಗಿ ನೆರವೇರಿತು ಪ್ರತಿ ವರ್ಷದಂತೆ ಗ್ರಾಮಸ್ಥರೆಲ್ಲರ ಸಮ್ಮುಖದಲ್ಲಿ ತಾಯಿಗೆ ವಿಶೇಷ ಪೂಜೆ ಮಾಡಲಾಯಿತು ಹಾಗೂ ಪೂಜೆಯ ನಂತರ ತಾಯಿಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ
ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಈ ಮೆರವಣಿಗೆಯಲ್ಲಿ ಸುಮಂಗಲೆಯರು ಕುಂಭ ಹೊತ್ತು ಸಾಗಿದರು ಹಾಗೂ ಹಲವಾರು ಭಕ್ತರು ಗೀತೆಗಳಿಗೆ ನೃತ್ಯ ಮಾಡುತ್ತಾ ಜಾತ್ರೆಯನ್ನು ಯಶಸ್ವಿಗೊಳಿಸಿದರು ಮೆರವಣಿಗೆ ನಂತರ ಎಲ್ಲಾ ಭಕ್ತರಿಗೆ ಕಮಿಟಿ ವತಿಯಿಂದ ಅಣ್ಣಪ್ರಸಾದ ವ್ಯವಸ್ಥೆ ಮಾಡಲಾಗಿದ್ದು ಎಲ್ಲರು ಪ್ರಸಾದ ಸೇವಿಸಿ ತಾಯಿಯ ಕೃಪೆಗೆ ಪಾತ್ರರಾದರು ಹಾಗೂ ಹಿರಿಯರಾದ ಆನಂದ್ ವಡ್ಡರ ಅವರು ಭಕ್ತರ ಮನರಂಜನೆಗಾಗಿ ಇಂದು ರಾತ್ರೀ 10 ಗಂಟೆಗೆ ಶ್ರೀ ಬಸವೇಶ್ವರ ನಾಟ್ಯ ಸಂಘ ರನ್ನ ಬೆಳಗಲಿಯವರಿಂದ. ಕೂಡಿಬಂದ ಕಂಕಣ ಬಲ ಅರ್ತಾರ್ಥ ಮಗ ಹೋದರು ಮಾಂಗಲ್ಯ ಬೇಕು ಎಂಬ ಸಾಮಾಜಿಕ ನಾಟಕ ಇರುತ್ತದೆ ಎಂದು ಪತ್ರಿಕಾ ವರದಿಯಲ್ಲಿ ತಿಳಿಸಿದ್ದಾರೆ.

ಜಾತ್ರೆಯಲ್ಲಿ ಊರಿನ ಹಿರಿಯರಾದ ಮಹಾದೇವ ರಡ ರಟ್ಟಿ. ವೆಂಕಪ್ಪ ನಂದಗಾಂವ ತಮ್ಮಣ್ಣ ರಬಕವಿ ಮಾಯಪ್ಪ ರಬಕವಿ ಆನಂದ ವಡ್ಡರ ಅಡಿವೆಪ್ಪ ಉಗಾರ ಶಾಸ್ತ್ರಿ ನಾಗರಾಳ ಗಿಡ್ಡಪ್ಪ ಮುಧೋಳ ನಾಗಪ್ಪ ರಬಕವಿ ಭೀಮಪ್ಪ ಪೂಜೇರಿ ಗೋಪಾಲ ವಡ್ಡರ ಹಾಗೂ ಸಮಸ್ತ ಗ್ರಾಮಸ್ಥರ ಸಹಕಾರದೊಂದಿಗೆ ಜಾತ್ರೆಯ ಅತೀ ವಿಜೃಂಭಣೆಯಿಂದ ನಡೆಯಿತು.
ವರದಿ:ಪರಶುರಾಮ ತೆಳಗಡೆ




