ಬೈಲಹೊಂಗಲ: ಜಗಜ್ಯೋತಿ ಪವಾಡ ಬಸವೇಶ್ವರ ದೇವಸ್ಥಾನದ ಇಂಚಲ ಸಮಸ್ತ ಹಿಂದೂ ಬಾಂಧವರಿಂದ ಅದ್ದೂರಿಯಾಗಿ ದುರ್ಗಾ ಮಾತಾ ದೌಡ ಆಚರಿಸಲಾಯಿತು.
ವಿಶ್ವ ಹಿಂದೂ ಪರಿಷತ್ ಭಜರಂಗದಳದ ವತಿಯಿಂದ ಇಂಚಲ ಗ್ರಾಮದಲ್ಲಿ ದುರ್ಗಾ ಮಾತಾ ದೌಡ ಪ್ರಾರಂಭವಾಗಿದೆ..ದುರ್ಗಾ ಮಾತಾ ದೌಡ ಎಂದರೆ ನವರಾತ್ರಿ ಹಾಗೂ ದುರ್ಗಾ ಹಬ್ಬದ ಸಂದರ್ಭದಲ್ಲಿ ಆಯೋಜಿಸುವ ಧಾರ್ಮಿಕ ಸಾಂಸ್ಕೃತಿಕ ದೌಡ ಅಥವಾ ಓಟ ಇದು ವಿಶೇಷವಾಗಿ ಯುವಕರಲ್ಲಿ ಭಕ್ತಿ ,ಶಕ್ತಿ ,ಮತ್ತು ಶಿಸ್ತಿನ ಪ್ರತೀಕವಾಗಿ ನಡೆಯುತ್ತದೆ.

ದೌಡ ಎಂಬ ಪದವು ಹಿಂದಿ ಮತ್ತು ಮರಾಠಿ ಭಾಷೆಯದ್ದಾಗಿದ್ದು ಕನ್ನಡದಲ್ಲಿ ಓಟ ಅಥವಾ ಓಡುವುದು ಎಂಬುದಾಗಿದೆ .ಅಂದರೆ ನವರಾತ್ರಿ ದಿನಗಳಲ್ಲಿ ಪ್ರತಿನಿತ್ಯ ಬೆಳಿಗ್ಗೆ ಬೇಗನೆ ಎದ್ದು ದುರ್ಗಾ ಮಾತೆಯನ್ನು ಪ್ರಾರ್ಥಿಸಿಕೊಂಡು ಶುಭ್ರ ಬಿಳಿ ಬಟ್ಟೆ ಧರಿಸಿ ಕೇಸರಿ ಶಾಲು ಹಾಗೂ ಪೇಟಾ ಧರಿಸಿ ಹಣೆಗೆ ಕೇಸರಿ ತಿಲಕ್ ಧರಿಸಿ ದೇವಿಯ ಭಾವಚಿತ್ರ ಹಾಗೂ ಅಗ್ನಿ ಜ್ಯೋತಿ ಮತ್ತು ಕೇಸರಿ ಧ್ವಜ ಸ್ತಂಭ ಹಿಡಿದುಕೊಂಡು ಮೊಟ್ಟ ಮೊದಲ ಸ್ಥಳ ಪೂಜೆ ಮಾಡಿಕೊಂಡು ಅಲ್ಲಿಂದ ಹೊರತು ಗ್ರಾಮದ ಬೀದಿಗಳಲ್ಲಿ ಸಂಚರಿಸಿ ದೇವಿಯ ಗುಡಿಗೆ ಹೋಗಿ ದರ್ಶನ್ ಪಡೆಯಬೇಕು..ಇದು ಹಿಂದಿನಿಂದಲೂ ನವರಾತ್ರಿ ವೇಳೆಯಲ್ಲಿ ಬೆಳಗಿನ ಜಾವ ದುರ್ಗಾ ಮಾತೆಯ ಘೋಷಣೆಗಳನ್ನು ಕೂಗುತ್ತಾ ಹಳ್ಳಿಯ ಬೀದಿಗಳಲ್ಲಿ ಓಡುವ ಸಂಪ್ರದಾಯ ಇತ್ತು ಅದೇ ನಂತರ ಸಂಘಟಿತ ದುರ್ಗಾ ಮಾತಾ ದೌಡ ಆಗಿ ಬೆಳೆಯಿತು.
ಇದರಂತೆ ಪವಾಡ ಪುರುಷರ ನಾಡು ಎಂದೇ ಪ್ರಖ್ಯಾತ ಪಡೆದ ನಮ್ಮ ಸುಕ್ಷೇತ್ರ ಇಂಚಲ ಗ್ರಾಮದಲ್ಲಿ ಶ್ರೀ ಶಿವಯೋಗಿ ರೇವಯ್ಯ ಗುರು ಸಿದ್ದರಾಮ ಶಿವಯೋಗಿಗಳ ಕಮಲ ಸಂಜಾತರಾದ ಶ್ರೀ ಶಿವಾನಂದ ಭಾರತಿ ಅಪ್ಪಾಜಿ ಆಶೀರ್ವಾದ ಪಡೆದು ಅವರ ಕೃಪೆಯಿಂದ ಇಂಚಲ ಗ್ರಾಮದಲ್ಲಿ ಈ ವರ್ಷ ಬಹಳ ಅದ್ಧೂರಿಯಾಗಿ ಜಗಜ್ಯೋತಿ ಪವಾಡ ಬಸವೇಶ್ವರ ದೇವಸ್ಥಾನದಿಂದ ಸಮಸ್ತ ಇಂಚಲ ಗ್ರಾಮದ ಹಿಂದೂ ಭಾಂದವರೆಲ್ಲ ಈ ದುರ್ಗಾ ಮಾತಾ ದೌಡ ಪ್ರಾರಂಭ ಮಾಡಿದ್ದಾರೆ.
ಇದು ದಿನೇ ದಿನೇ ಯುವಕರಲ್ಲಿ ಭಕ್ತಿ ಶಕ್ತಿ, ಆಸಕ್ತಿ ಮೂಡಿಸುತ್ತಾ ಇಂಚಲ ಗ್ರಾಮದಲ್ಲಿ ಅಪ್ಪಾಜಿ ಆಶೀರ್ವಾದದಿಂದ ದಿನಾ ಯಶಸ್ವಿಯಾಗಿ ನಡಿಯುತ್ತಿದೆ..ಎಂದು ಹೇಳುವೆ..ಇಂಚಲ ಗ್ರಾಮದ ಬೀದಿಗಳಲ್ಲಿ ಸಂಚರಿಸುತ್ತಾ ಜೈ ಬಸವ ಜೈ ಶಿವಾಜಿ ಜೈ ಶಾಂಭವಿ ಜೈ ಶ್ರೀರಾಮ್ ಭಲೋ ಭಾರತ ಮಾತಾಕಿ ಜೈ ಹಾಗೂ ಶ್ರೀ ಹನ್ನೆರಡನೇ ಶತಮಾನದಲ್ಲಿ ಇದ್ದ ಅವರಿವನ್ನದೇ ಎಲ್ಲಾ ಕಾಯಕ ಶರಣರ ನಾಮಾವಳಿಗಳನ್ನು ಜೈಕಾರ ಹಾಕುತ್ತಾ ಈ ದುರ್ಗಾ ಮಾತಾ ದೌಡ ಪಥ ಸಂಚಲನವನ್ನು ನಮ್ಮ ಇಂಚಲ ಗ್ರಾಮದಲ್ಲಿ ಪ್ರಾರಂಭಿಸಿದ್ದಾರೆ ಎಂದು ಹೇಳಲು ನನಗೆ ಹೆಮ್ಮೆ ಅನಿಸುತ್ತೆ ..ಅದೇನ್ ಗಾಂಭೀರ್ಯ ಅದೇನ್ ಶಿಸ್ತು ಅದೇನ್ ಜೈಕಾರ ನಿಂತು ನೋಡಲೆರಡು ಕಣ್ಣುಗಳು ಸಾಲದು .. ಅವರಿವನೆದ್ದದೇ ಸ್ವ ಇಚ್ಛೆಯಿಂದ ಎಲ್ಲರೂ ಬನ್ನಿ ಪ್ರೋತ್ಸಾಹಿಸಿ ಪಾಲ್ಗೊಳ್ಳಿ ಎಂದು ಹೇಳುತ್ತೆವೆ. ಮುಂಬರುವ ದಿನಗಳಲ್ಲಿ ಇದನ್ನು ದೊಡ್ಡ ಮಟ್ಟದಲ್ಲಿ ಬೆಳೆಸೋಣ ಎಂದು ಹಿಂದೂ ಸಂಘದ ಕಾರ್ಯಕರ್ತರು ಎಲ್ಲರೂ ಭಾಗಿಯಾಗಿ ವಿಜೃಂಭಣೆಯಿಂದ ಆಚರಿಸೋಣ ಎಂದು ಮಾತನಾಡಿದರು.
ವರದಿ: ದುಂಡಪ್ಪ ಹೂಲಿ




