ಚನ್ನಮ್ಮನ ಕಿತ್ತೂರು: ಕಿತ್ತೂರು ತಾಲೂಕಿನ ಬಸಾಪುರ ಶಿಗಿಹಳ್ಳಿ ಕೆಎ ಗ್ರಾಮದಲ್ಲಿ ಎಲ್ಲಾ ಹಬ್ಬಗಳನ್ನೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅದರಂತೆ ನಾಡ ಹಬ್ಬ ದಸಾರ ಕೂಡ ಅದ್ದೂರಿಯಾಗಿ ನಡೆಯುತ್ತದೆ 9 ದಿನಗಳ ಕಾಲ ಬಸಾಪುರ ಶಿಗೇಹಳ್ಳಿ ಕೆಎ ಗ್ರಾಮದಲ್ಲಿ ದುರ್ಗಾ ಮಾತಾ ದೌಡ ಎಲ್ಲರ ಗಮನ ಸೆಳೆಯಿತು.
9 ನೇ ದಿನವಾದ ಇಂದು ದುರ್ಗಾ ಮಾತಾ ದೌಡ ಬಸಾಪುರ ಶಿಗೇಹಳ್ಳಿ ಕೆಎ ಗ್ರಾಮದ ಪ್ರಮುಖ ಬೀದಿಗಳಾದ ಬಬ್ಲಿ ಅವರ ಓಣಿ ಭೀಮರಾಣಿ ಅವರ ಓಣಿ ಕಂಬಾರ ಓಣಿ ಹೀಗೆ ಊರಿನ ಏಲ್ಲ ಪ್ರಮುಖ ಬೀದಿಗಳಲ್ಲಿ ಸಂಚರಿಸಿತ್ತು.
ನವರಾತ್ರಿ ಹಬ್ಬ ಸಮೀಪಿಸುತ್ತಿದ್ದಂತೆ ಇಲ್ಲಿನ ದುರ್ಗಾ ಮಾತಾ ದೌಡ್ ದಸರಾ ಹಬ್ಬದ ಒಂಬತ್ತು ದಿನಗಳ ಕಾಲ ಬೆಳಗ್ಗೆ 5 ಗಂಟೆಗೆ ಬಿಳಿ ಬಟ್ಟೆ ತೊಟ್ಟು, ತಲೆ ಮೇಲೆ ಕೇಸರಿ ಪೇಟ, ಹೊಟ್ಟೆಗೆ ಕೇಸರಿ ಶಾಲು ಕಟ್ಟಿಕೊಂಡು, ಕೈಯಲ್ಲಿ ಖಡ್ಗ ಮತ್ತು ಭಗವಾ ಧ್ವಜ ಹಿಡಿದು ಒಂದೊಂದು ದಿನ ಇಂತಿಷ್ಟು ಪ್ರದೇಶವೆಂದು ನಿಗದಿಪಡಿಸಿರುವ ಆಯಾ ಮಾರ್ಗಗಳಲ್ಲಿ ಎಲ್ಲರೂ ಭಕ್ತಿಯಿಂದ ಓಡುತ್ತಾರೆ. ಈ ವೇಳೆ ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ್ ಜೈ ಭವಾನಿ-ಜೈ ಶಿವಾಜಿ, ಜೈ ಚನ್ನಮ್ಮ-ಜೈ ರಾಯಣ್ಣ ಎಂದು ಘೋಷಣೆ ಕೂಗುತ್ತಾ ಉತ್ಸಾಹದಿಂದ ಜನರು ಓಡುವುದನ್ನು ನೋಡುವುದೇ ಸಂಭ್ರಮ.
ದೌಡ್ ಸಾಗುವ ರಸ್ತೆಗಳನ್ನು ನೀರಿನಿಂದ ಸ್ವಚ್ಛಗೊಳಿಸಿ ಅಲಂಕರಿಸಲಾಗುತ್ತದೆ. ಬಣ್ಣಬಣ್ಣದ ರಂಗೋಲಿ ಬಿಡಿಸಿ, ಹೂಗಳಿಂದ ಅಲಂಕರಿಸಲಾಗುತ್ತದೆ. ದೌಡ್ನಲ್ಲಿ ಓಡಿ ಬರುವ ಸಾವಿರಾರು ಭಕ್ತರಿಗೆ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸುತ್ತಾರೆ. ದಾರಿಯುದ್ಧಕ್ಕೂ ಪುಷ್ಪವೃಷ್ಟಿಗೈದು ಹುರಿದುಂಬಿಸುತ್ತಾರೆ. ಪುಟ್ಟಪುಟ್ಟ ಮಕ್ಕಳು ಜೀಜಾಮಾತಾ, ಛತ್ರಪತಿ ಶಿವಾಜಿ ವೇಷ ಧರಿಸಿ ಸಂಭ್ರಮಿಸುತ್ತಾರೆ.




