ಸಿಂಧನೂರು: ಜುಲೈ 4 ರಂದು ದಲಿತ ವಿದ್ಯಾರ್ಥಿ ಪರಿಷತ್ ತಾಲೂಕ ಸಮಿತಿ ಸಿಂಧನೂರು ಮಾನ್ಯ ತಹಸಿಲ್ದಾರ್ ಗೆ ಮನವಿ ಪತ್ರ ಸಲ್ಲಿಸಿ ಮೊನ್ನೆ ಸಿಂಧನೂರು ತಾಲೂಕಿನ ಗುಡದಮ್ಮ ಕ್ಯಾಂಪ್ ನ ಶರಣಬಸವೇಶ್ವರ ಹಿರಿಯ ಪ್ರಾಥಮಿಕ ಶಾಲಾ ಯಲ್ಲಿ ಎರಡನೇ ತರಗತಿ ಓದುತ್ತಿರುವ ದಲಿತ ಸಮುದಾಯದ ಅಖಿಲ್ ಎನ್ನುವ ವಿದ್ಯಾರ್ಥಿಯು ಮನೆಯಿಂದ ಶಾಲೆಗೆ ಹೋಗಿ ಶಾಲಾ ವಾಹನ ದಿಂದ ಕೆಳಗೆ ಇಳಿಯುವ ಸಮಯದಲ್ಲಿ ಆ ವಾಹನ ಚಾಲಕ ವಿದ್ಯಾರ್ಥಿಗೆ ಕಟ್ಟಿಗೆಯಿಂದ ಮೈಯಲ್ಲ ಬಾಸುಂಡೆ ಬರುವಂತೆ ದಳಿಸಿದ್ದು ನೋಡಿದರೆ ನಿಜಕ್ಕೂ ಇದು ಉದ್ದೇಶಪೂರ್ವಕವಾದ ಕೃತ್ಯ ಎನಿಸುತ್ತದೆ
ಅಷ್ಟೇ ಅಲ್ಲದೆ ಈಗಾಗಲೇ ಆ ಶಾಲೆಯ ಆಟೊಟಗಳಲ್ಲಿ ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ದಲಿತ ಸಮುದಾಯದ ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡಲಾಗುತ್ತದೆ ಎನ್ನುವ ಆರೋಪಗಳು ಬಲವಾಗಿ ಕೇಳಿ ಬರುತ್ತಿವೆ ಈ ಮುಂಚೆಯೇ ಸಹ ಶಾಲೆಯ ಶಿಕ್ಷಕರು ಈ ವಿದ್ಯಾರ್ಥಿಯನ್ನು ಪದೇ ಪದೇ ಹೊಡೆದಿದ್ದು ಯಾರಿಗೆ ಹೇಳಿದಂತೆ ಆ ವಿದ್ಯಾರ್ಥಿಗೆ ಬೆದರಿಕೆ ಹಾಕಲಾಗಿದೆ ಎಂದು ವಿದ್ಯಾರ್ಥಿಯ ಕುಟುಂಬಸ್ಥರು ಆರೋಪಿಸಿದ್ದರು.

ಆದ್ದರಿಂದ ಈ ಕೂಡಲೇ ತಾವುಗಳು ಆ ಶಾಲೆಯ ವಾಹನ ಚಾಲಕನ ವಿರುದ್ಧ ಸ್ವಯಂ ದೂರು ದಾಖಲಾಯಿಸಿಕೊಂಡು ಮತ್ತು ಆ ಶಾಲೆಯ ಆಡಳಿತ ಮಂಡಳಿ ವಿರುದ್ಧ ಜಾತಿ ದೌರ್ಜನ್ಯ ತಡೆ ಕಾಯ್ದೆ ಅನ್ವಯ ದೂರು ದಾಖಲಾಹಿಸಿಕೊಂಡು ಆ ಶಾಲೆಯ ಮಾನ್ಯತೆ ರದ್ದು ಮಾಡಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಸಮಿತಿ ಸಿಂಧನೂರು ಈ ಮನವಿ ಪತ್ರದ ಮೂಲಕ ಒತ್ತಾಯಿಸುತ್ತದೆ.
ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ತಾಲೂಕಾಧ್ಯಕ್ಷ ದುರುಗೇಶ್ ಕಲ್ಮಗಿ, ಚನ್ನಬಸವ ಯಾಪಲ ಪರ್ವಿ ಜಿಲ್ಲಾ ಉಪಾಧ್ಯಕ್ಷರು. ವೀರೇಶ್ ದಿದ್ದಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ. ಜಂಬಣ್ಣ ಉಪ್ಪಲ ದೊಡ್ಡಿ. ಚಿಕ್ಕೋರಪ್ಪ. ಶರಣಬಸವ ಬುನ್ನಟ್ಟಿ. ರಮೇಶ್ ಬಸಾಪುರ. ಇನ್ನು ಅನೇಕರಿದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ




