ಗದಗ : ಗದಗದಲ್ಲಿ ಮನೆ ಕಟ್ಟಲು ಪಾಯ ಅಗೆಯುವಾಗ ಯಾವಾಗ ನಿಧಿ ಸಿಕ್ಕಿತೊ, ತಕ್ಷಣ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ ಆರಂಭಿಸಿತು.
ಕಳೆದ ಎರಡು ದಿನಗಳಿಂದ ಉತ್ಖನನ ಕಾರ್ಯ ನಡೆಯುತ್ತಿದ್ದು, ಇದೀಗ ಎಂದು ಮೂರನೇ ದಿನ ಉತ್ಖನನ ವೇಳೆ ಕೋಟೆ ಗೋಡೆಯಲ್ಲಿ ಶಿವಲಿಂಗ ಪತ್ತೆಯಾಗಿದೆ.
ಲಕ್ಕುಂಡಿಯಲ್ಲಿ ಮೂರನೇ ದಿನವೂ ಉತ್ಕನ ಕಾರ್ಯ ನಡೆಯುತ್ತಿದ್ದು ಕೋಟೆ ಗೋಡೆಯಲ್ಲಿ ಪುರಾತನ ಕಾಲದ ಶಿವಲಿಂಗ ಪತ್ತೆಯಾಗಿದೆ.
ಗ್ರಾಮದ ವೀರಭದ್ರೇಶ್ವರ ದೇಗುಲದ ಪಕ್ಕದ ಕೋಟೆ ಗೋಡೆಯಲ್ಲಿ ಶಿವಲಿಂಗ ಪತ್ತೆಯಾಗಿದೆ. ತೀವ್ರ ಕುತೂಹಲದಿಂದ ಗ್ರಾಮಸ್ಥರು ಇದೀಗ ಶಿವಲಿಂಗವನ್ನು ವೀಕ್ಷಣೆ ಮಾಡುತ್ತಿದ್ದಾರೆ.
ಈ ಪತ್ತೆಯಾದ ಶಿವಲಿಂಗ ಯಾವ ಕಾಲದಂದು ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ನಿನ್ನೆಯೂ ಸಹ ಲಕ್ಕುಂಡಿ ಗ್ರಾಮದಲ್ಲಿ ಒಂದು ಪುರಾತನ ವಸ್ತು ಪತ್ತೆಯಾಗಿತ್ತು.
ಇದೀಗ ಎಂದು ಕೋಟೆಗೋಡಿಯಲ್ಲಿ ಮತ್ತೊಂದು ಶಿವಲಿಂಗ ಪತ್ತೆಯಾಗಿದೆ. ಅಕಸ್ಮಾತ್ ಲಕ್ಕುಂಡಿಯಲ್ಲಿ ನಿಧಿ ನಿಕ್ಷೇಪ ದೊರೆತರೆ ಇಡೀ ಗ್ರಾಮವನ್ನೇ ಸ್ಥಳಾಂತರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.




