Ad imageAd image

ಬೇಡಕಿಹಾಳದಲ್ಲಿ ದಸರಾ ಕ್ರೀಡಾಕೂಟ

Bharath Vaibhav
ಬೇಡಕಿಹಾಳದಲ್ಲಿ ದಸರಾ ಕ್ರೀಡಾಕೂಟ
WhatsApp Group Join Now
Telegram Group Join Now

ಕ್ರೀಡೆಯಿಂದ ವಿದ್ಯಾರ್ಥಿಗಳ ಬೌದ್ಧಿಕ ಹಾಗೂ ಶಾರೀರಿಕ ಸಮೃದ್ಧಿ:  ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಾನಂದ್ ಬಿಜಲೆ 

ನಿಪ್ಪಾಣಿ:  ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಯಲ್ಲಿ ಆಸಕ್ತಿಯನ್ನು ಹೆಚ್ಚಿಸಲು ವಿವಿಧ ಕ್ರೀಡಾ ಸ್ಪರ್ಧಿಗಳಿಂದ ಅನುಕೂಲವಾಗುವುದಲ್ಲದೆ ಅವರ ಬೌದ್ಧಿಕ ಹಾಗೂ ಶಾರೀರಿಕ ಬೆಳವಣಿಗೆಗೆ ಕ್ರೀಡೆ ಮಹತ್ವದ್ದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಾನಂದ ಬಿಜಲೇ ತಿಳಿಸಿದರು.

ಅವರು ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದಲ್ಲಿ ತಾಲೂಕ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ಸರ್ಕಾರದ ಜಿಲ್ಲಾ ಪಂಚಾಯತಿ ಬೆಳಗಾವಿ, ಯುವ ಸಬಲೀಕರಣ ಇಲಾಖೆ,ಹಾಗೂ ಬಿ ಎಸ್ ಸಯುಕ್ತ ಪದವಿಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಕ್ರೀಡಾಕೂಟವನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಾನಂದ ಬಿಜಲೆ ಹಾಗೂ ತಾತ್ಯಾಸಾಹೇಬ ಖೋತ,

ಬಾಲಿ ಎಸೆದು ಉದ್ಘಾಟಿಸಿದರು.

ತಾತ್ಯಾಸಾಹೇಬ ಖೋತ ಕ್ರೀಡಾಧ್ವಜ ಹಾರಿಸಿದರು.  ಗಣ್ಯರಿಂದ ಕ್ರೀಡಾ ಜ್ಯೋತಿಗೆ ಸ್ವಾಗತಿಸಿದರು. ಸ್ಪರ್ಧೆಯಲ್ಲಿ 200ಕ್ಕೂ ಅಧಿಕ ಕ್ರೀಡಾಸ್ಪರ್ದಕರು ಪಾಲ್ಗೊಂಡಿದ್ದರು. ಪ್ರಾಚಾರ್ಯ ಎಂ. ಎಸ್. ಕಟ್ಟಿ, ಉಪ ಪ್ರಾಚಾರ್ಯ ಜೆ. ಎ. ಕಾಂಬಳೆ, ಕ್ರೀಡಾ ಸಂಯೋಜಕ ಸಂಜೀವಕುಮಾರ್ ನಾಯಿಕ್, ಜೆ. ಡಿ. ಪಾಟೀಲ, ಕಿರಣ ಪಾಂಗಿರೆ, ಪ್ರಮೋದ ಪಾಟೀಲ, ಆರ್. ಎಸ್ ಜಯಕರ, ಕ್ರೀಡಾ ಸ್ಪರ್ಧಕರು, ಉಪಸ್ಥಿತರಿದ್ದರು. ಎಲ್. ಜಿ. ಬಂಡಗರ ಸ್ವಾಗತಿಸಿ ಕ್ರೀಡಾ ಸ್ಪರ್ಧಕರಿಗೆ ಪ್ರತಿಜ್ಞೆ ನೀಡಿದರು. ಎಸ್. ಎ. ಕಮತೆ ನಿರೂಪಿಸಿ ಅನಿಲ ಮಾಲಗತ್ತಿ ವಂದಿಸಿದರು.

ವರದಿ: ಮಹಾವೀರ ಚಿಂಚಣೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!