Ad imageAd image

ಇಂದಿನಿಂದ 17 ದಿನಗಳ ಕಾಲ ಶಾಲಾ ವಿದ್ಯಾರ್ಥಿಗಳಿಗೆ ದಸರಾ ರಜೆ 

Bharath Vaibhav
ಇಂದಿನಿಂದ 17 ದಿನಗಳ ಕಾಲ ಶಾಲಾ ವಿದ್ಯಾರ್ಥಿಗಳಿಗೆ ದಸರಾ ರಜೆ 
WhatsApp Group Join Now
Telegram Group Join Now

ಬೆಂಗಳೂರು: ಇಂದಿನಿಂದ ನವರಾತ್ರಿ ಆರಂಭವಾಗುತ್ತಿದ್ದು, ಮತ್ತೊಂದೆಡೆ ನಾಡ ಹಬ್ಬ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯುತ್ತಿದೆ.

ಈ ನಡುವೆ ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಅಕ್ಟೋಬರ್ 3 ಇಂದಿನಿಂದ ದಸರಾ ರಜೆ ಘೋಷಣೆ ಮಾಡಿದೆ.

ಅಕ್ಟೋಬರ್ 3ರಿಂದ 20ರವರೆಗೆ ದಸರಾ ರಜೆ ಆರಂಭವಾಗಲಿದ್ದು, ಇಂದಿನಿಂದ ಮಕ್ಕಳಿಗೆ ದಸರಾ ರಜೆ ಸಂಭ್ರಮ. ಒಟ್ಟು 17 ದಿನಗಳ ಕಾಲ ಶಾಲಾ ವಿದ್ಯಾರ್ಥಿಗಳಿಗೆ ದಸರಾ ರಜೆ ಇರಲಿದೆ.

ಗಾಂಧಿ ಜಯಂತಿ ಕಾರ್ಯಕ್ರಮದ ಬಳಿಕ 2024-25ನೇ ದಸರಾ ರಜೆ ಆರಂಭವಾಗಿದೆ. ಅಕ್ಟೋಬರ್ 21ರಿಂದ ಎರಡನೇ ಅವಧಿ ಆರಂಭವಾಗಲಿದ್ದು, 2025 ಏಪ್ರಿಲ್ 10ರವರೆಗೆ ಶಾಲೆಗಳು ನಡೆಯಲಿವೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!