ನಿಪ್ಪಾಣಿ : ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿರುವ ಕಾಲದಲ್ಲಿಂದು ಯುವಕರು ಕಬ್ಬಡ್ಡಿ, ಖೋ ಖೋ, ಕುಸ್ತಿ, ಕ್ರಿಕೆಟ್, ಹಗ್ಗ ಜಗ್ಗಾಟ, ದಂತಹ ಕ್ರೀಡೆಗಳಲ್ಲಿ ಪಾಲ್ಗೊಂಡು ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಕಾರ್ಯ ಯುವಕರಲ್ಲಿಂದು ಹೆಚ್ಚಿಸಬೇಕು.
ನಮ್ಮ ಗ್ರಾಮೀಣ ಸಂಸ್ಕೃತಿ ಕಲೇ ಕ್ರೀಡೆಗಳನ್ನು ಬೆಳೆಸುವ ಜವಾಬ್ದಾರಿ ಪ್ರತಿ ನಾಗರಿಕರದ್ದು ಎಂದು ನಿಪ್ಪಾಣಿ ಮತಕ್ಷೇತ್ರದ ಯುವ ನಾಯಕ ಉತ್ತಮ ಪಾಟೀಲರು ತಿಳಿಸಿದರು.
ಅವರು ನಿಪ್ಪಾಣಿ ತಾಲೂಕಿನ ಬೇಡಕೀಹಾಳದ ಸಿದ್ದೇಶ್ವರ ಸರಾ ಪ್ರಯುಕ್ತ ಅರಿಹಂತ ಉದ್ಯೋಗ ಸಮೂಹ, ಹಾಗೂ ಅನ್ನಪೂರ್ಣೇಶ್ವರಿ ಫೌಂಡೇಶನ್ ಸಂಯುಕ್ರಾಶ್ರಯದಲ್ಲಿ 2 ದಿನಗಳವರೆಗೆ ನಡೆಯಲಿರುವ ಅಂತರ್ ರಾಜ್ಯ ಕಬ್ಬಡ್ಡಿ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ದಸರಾ ಉತ್ಸವ ಕಮಿಟಿ ಅಧ್ಯಕ್ಷ ಸುನಿಲ್ ನಾರೆ ಅಧ್ಯಕ್ಷತೆ ವಹಿಸಿದ್ದರು.
ಪ್ರಾರಂಭದಲ್ಲಿ ಶ್ರದ್ಧಾಂಜಲಿ ಸಭೆಯ ನಂತರ ಉತ್ತಮ ಪಾಟೀಲರು ಕಬ್ಬಡ್ಡಿ ಸ್ಪರ್ಧಕರಿಗೆ ಕೈ ಕುಲುಕಿ ಶುಭಾಶಯ ತಿಳಿಸಿದರು.ರಾಜ್ಯಮಟ್ಟದ ಬಾಲ ಕ್ರೀಡಾಪಟು ವರುಣ ಮಲ್ಕಾಪುರೆ ಇವರಿಂದ ತರಲಾದ ಕ್ರೀಡಾ ಜ್ಯೋತಿಯನ್ನು ಸ್ವಾಗತಿಸಲಾಯಿತು. ಪ್ರತಿಮೆ ಪೂಜೆಯ ನಂತರ ಟಾಸ ಹಾರಿಸಿ ಸ್ಪರ್ಧೆಗೆ ಚಾಲನೆ ನೀಡಿದರು. ಸ್ಪರ್ಧೆಯಲ್ಲಿ ಬೆಂಗಳೂರು, ಹಾವೇರಿ, ಬೈಲಹೊಂಗಲ, ದಾವಣಗೆರೆ ಸೇರಿದಂತೆ 35ಕ್ಕೂ ಅಧಿಕ ತಂಡಗಳು ಪಾಲ್ಗೊಂಡಿದ್ದವು. ಸಮಾರಂಭದಲ್ಲಿ ಬಾಳ ಸಾಹೇಬ ಪಾಟೀಲ ಜನ ಗೌಡ ದಡ್ಡ ಪಾಟೀಲ, ಡಾ.ನೀಲೇಶ್ ಚೌಗುಲೆ, ಟಿ ಎಸ್ ಚೌಗುಲೆ, ಡಾಕ್ಟರ್ ಅನಿಲ್ ಮಂಗಾಜೆ, ತಾತ್ಯಾಸಾಹೇಬ ಕೇಸ್ತೆ ಸಂಜಯ ಪಾಟೀಲ, ಸುರೇಶ್ ಖೋತ ಅಭಯ್ ಭಾಗಾಜೆ, ಶಂಕರ್ ಪಾಟೀಲ, ಅಶೋಕ್ ಅರಗೆ ಸೇರಿದಂತೆ ಗ್ರಾಮದ ಗಣ್ಯರು ಕಮಿಟಿಯ ಸದಸ್ಯರು ಪಾಲ್ಗೊಂಡಿದ್ದರು.
ವದರಿ : ಮಹಾವೀರ ಚಿಂಚಣೆ




