ಬೀದರ : 2024-2025 ಶೈಕ್ಷಣಿಕ ವರ್ಷದ ಆರಂಭದ ಮುಂಚೆಯೇ ನಮ್ಮ ಬೀದರ ಜಿಲ್ಲೆಯಲ್ಲಿ ಹಲವಾರು ಖಾಸಗಿ ಶಾಲೆಗಳು ಮತ್ತು ಕಾಲೇಜುಗಳು ಸರ್ಕಾರದ ಅನುಮತಿ ಮೀತಿ ಮೀರಿ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡುತ್ತಿವೆ. ಇಂತಹ ಅನಧೀಕೃತ ಶುಲ್ಕ ವಸೂಲಿಕರಣವು ಪೋಷಕರಿಗೂ ವಿದ್ಯಾರ್ಥಿಗಳಿಗೂ ಹಿತಕರವಾಗಿಲ್ಲ. ಶಿಕ್ಷಣದ ಮೂಲಭೂತ ಹಕ್ಕಿಗೆ ಬೆದರಿಕೆ ಉಂಟು ಮಾಡುತ್ತಿದೆ. ಹಾಗೆ ಎಲ್ಲoದರ ಹಳ್ಳಿಹಳ್ಳಿಗಳಲ್ಲಿ ಅನಧಿಕೃತ ಕೋಚಿಂಗ ಸೆಂಟರಗಳು ಕೂಡ ತಲೆ ಎತ್ತಿವೆ.ಈ ಕೊಚಿಂಗ ಸೆಂಟರಗಳು ಮಕ್ಕಳ ಜೀವನದ ಜೋತೆ ಚೆಲ್ಲಾಟವಾಡುತ್ತಿದ್ದಾರೆ.
ಇದರ ಬಗ್ಗೆ ಅನೇಕ ಸಲ ದೂರು ಸಲ್ಲಿಸಿದರು ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಬೀದರ ಜಿಲ್ಲೆಯಲ್ಲಿ ಕೋಚಿಂಗ ಸೆಂಟರಗಳಾದ ಫಿಜಿಕ್ವಾಲ ಸೇರಿಂದತೆ ಅಕ್ರಮವಾಗಿ ನಡೆಸುತ್ತಿರುವ ಪದವಿ ಪೂರ್ವ ತರಬೇತಿ ಕೇಂದ್ರಗಳು ಪ್ರೌಡಶಾಲೆಗಳು ಮತ್ತು ಹಾಗೂ ಅಕ್ರಮ ಶಾಲೆಗಳನ್ನು ಕೂಡಲೆ ತನಿಖೇ ನಡೆಸಿ ರದ್ದು ಮಾಡಬೇಕು .ಮತ್ತು ನೀಟ.ಜೆಇಇ ತರಬೇತಿ ಹೇಸರಿನಲ್ಲಿ ಬಡ ಮಕ್ಕಳಿಂದ ದುಬಾರಿ ಶುಲ್ಕವನ್ನು ವಸೂಲಿಗಿಳಿದಿವೆ.
ಬಡ ವಿಧ್ಯಾರ್ಥಿಗಳ ಜೀವ ಹಿಂಡುತಿರುವ ಬೀದರ ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳಾದ ಭಾಲ್ಕಿಯ ಡೈಮಂಡ ಪಿಯು ಕಾಲೇಜು.ಬೀದರನ ಶಾಹಿನ ಕಾಲೇಜು,ಜ್ಞಾನಸುಧಾ ಕಾಲೇಜು ಹೀಗೆ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ವ್ಯವಹಾರ ಮಾಡಿಕೊಂಡು ವಿದ್ಯಾರ್ಥಿಗಳಿಂದ ಬಿಲ್ಡಿಂಗ ಫಂಡ,ಡೊನೆಷನ,ಲ್ಯಾಬಶುಲ್ಕ ಬಸ್ಸ ಶುಲ್ಕ ಹೀಗೆ ವಸೂಲಿ ಮಾಡುತ್ತಿದ್ದಾರೆ.ಈ ಬಗ್ಗೆ ಸರ್ಕಾರದ ಎಲ್ಲಾ ನಿಯಮಗಳನ್ನು ಮತ್ತು ಸೂಚನೆಗಳನ್ನು ಉಲ್ಲಂಘಿಸಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಮನಬಂದಂತೆ ಲಕ್ಷ ಲಕ್ಷ ಗಟ್ಟಲೆ ಹಣ ವಸೂಲಿ ಮಾಡುತ್ತಿದ್ದಾರೆ.
ಬಡ ವಿಧ್ಯಾರ್ಥಿಗಳ ಮತ್ತು ಪೋಷಕರ ಜೀವ ಹಿಂಡುತ್ತಿದ್ದಾರೆ.ಆದ ಕಾರಣ ದಯಾಳುಗಳಾದ ತಾವುಗಳು ಕೂಡಲೆ ಈ ಕಡೆ ಗಮನ ಹರಿಸಿ ಫಿಜಿಕ್ವಾಲದಂತಹ ಅನೇಕ ಕೋಚಿಂಗ ಸೆಂಟರಗಳನ್ನು ಕೂಡಲೆ ರದ್ದು ಮಾಡಿ ದುಬಾರಿ ಶುಲ್ಕ ವಸೂಲಿ ಮಾಡುತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಾದ ಡೈಮಂಡ್ ಪಿಯು ಕಾಲೇಜು .ಶಾಹಿನ ಕಾಲೇಜು ಬೀದರ ಜ್ಞಾನಸುಧಾ ಕಾಲೇಜುಗಳ ಪರಿಶೀಲನೆ ಮಾಡಿ ಸರ್ಕಾರದ ನಿಯಮ ಉಲ್ಲಂಘನೆ ಮಾಡಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಯುವ ಕ್ರಾಂತಿ ಸಂಘಟನೆಯ ಜಿಲ್ಲಾಧ್ಯಕ್ಷ ಸಂಗಮೇಶ ಭೂರೆ ವಿನಂತಿಸಿಕೊಂಡಿದ್ದಾರೆ.
ವರದಿ: ಸಂತೋಷ ಬಿಜಿ ಪಾಟೀಲ್