ತುಮಕೂರು : ದೂರು ನೀಡಲು ಬಂದಿದ್ದ ಮಹಿಳೆಯ ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಅರೋಪದಡಿ ಜೈಲು ಸೇರಿ ಜಾಮೀನಿನ ಮೂಲಕ ಹೊರ ಬಂದಿದ್ದ ಮಧುಗಿರಿ ಡಿವೈಎಸ್ ಪಿ ರಾಮಚಂದ್ರಪ್ಪ ವಿರುದ್ಧ ಎರಡನೇ ದೂರು ದಾಖಲಾಗಿದ್ದು, ಮತ್ತೆ ಜೈಲುಪಾಲಾಗಿದ್ದಾರೆ.
ರಾಮಚಂದ್ರಪ್ಪ ರಾಸಲೀಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಇದರ ಬೆನ್ನಲ್ಲೇ ಡಿವೈಎಸ್ ಪಿ ರಾಮಚಂದ್ರಪ್ಪನನ್ನು ಅಮಾನತು ಮಾಡಿ ಜೈಲು ಸೇರಿದ್ದರು, ಅವರಿಗೂ ಇದೀಗ ಜಾಮೀನು ಮಂಜೂರಾಗಿದ್ದರೂ ಕೂಡ ಮತ್ತೆ ಜೈಲು ಪಾಲಾಗಿದ್ದಾರೆ.
ಮೊದಲ ದೂರಿನಡಿ ನ್ಯಾಯಾಂಗ ಬಂಧನಲ್ಲಿದ್ದ ರಾಮಚಂದ್ರಪ್ಪಗೆ ಮಧುಗಿರಿ ಸೆಷನ್ಸ್ ನ್ಯಾಯಾಲಯ ಎರಡು ಲಕ್ಷ ಮೌಲ್ಯದ ಶೂರಿಟಿ ಬಾಂಡ್ ಸೇರಿದಂತೆ ಷರತ್ತುಬದ್ದ ಜಾಮೀನಿನ ಮೇರೆಗೆ ಮಂಜೂರು ಮಾಡಿತ್ತು. ಅದರಂತೆ ಜೈಲಿನಿಂದ ಬಿಡುಗಡೆಯಾಗಿದ್ದರು.
ಇದೀಗ ಲೈಂಗಿಕ ಕಿರುಕುಳಕ್ಕೆ ಸಂಬಂಧಪಟ್ಟಂತೆ ಎರಡನೇ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪಿ ರಾಮಚಂದ್ರಪ್ಪ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದ್ದು, ಹೀಗಾಗಿ ಮತ್ತೆ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.




