Ad imageAd image

‘ಚುಂಬನದ ಕನಸುಗಳು ಬಿದ್ದರೇ ಏನೇಲ್ಲ ಅರ್ಥಗಳು ಸಿಗುತ್ತವೆ’

Bharath Vaibhav
‘ಚುಂಬನದ ಕನಸುಗಳು ಬಿದ್ದರೇ ಏನೇಲ್ಲ ಅರ್ಥಗಳು ಸಿಗುತ್ತವೆ’
WhatsApp Group Join Now
Telegram Group Join Now

ನಸು ಕಾಣದವರು ಯಾರಿದ್ದಾರೆ ಹೇಳಿ. ಪುಟ್ಟ ಮಕ್ಕಳಿಂದ ಮುದುಕರವರೆಗೂ ಎಲ್ಲರೂ ಕನಸಿನ ಲೋಕದಲ್ಲಿ ವಿಹರಿಸುತ್ತಾರೆ. ಆದರೆ ಕನಸುಗಳು ಮಾತ್ರ ವಿಭಿನ್ನವಾಗಿರುತ್ತದೆ. ಕೆಲವು ಕನಸುಗಳು ನಿದ್ದೆಯನ್ನು ಅಡ್ಡಿಪಡಿಸಿ ಭಯ ಉಂಟು ಮಾಡುತ್ತದೆ. ಇನ್ನು ಕೆಲ ಕನಸುಗಳು ಮನಸ್ಸಿಗೆ ಹಿತವೆನಿಸುತ್ತದೆ. ಆದರೆ ಸ್ವಪ್ನ ಶಾಸ್ತ್ರದ ಪ್ರಕಾರ ಪ್ರೀತಿಯನ್ನು ವ್ಯಕ್ತಪಡಿಸುವ ಚುಂಬನದ ಕನಸುಗಳು ಬಿದ್ದರೆ ಅದರ ಹಿಂದೆ ನಾನಾ ರೀತಿ ಅರ್ಥ ಅಡಗಿದೆಯಂತೆ. ನೀವು ಯಾರಿಗೆ ಮುತ್ತು ನೀಡುತ್ತೀರಿ ಎನ್ನುವುದರ ಆಧಾರದ ಮೇಲೆ ಆ ಕನಸಿನ ಅರ್ಥವನ್ನು ತಿಳಿದುಕೊಳ್ಳಬಹುದು.

ಸಂಬಂಧಿಕರನ್ನು ಚುಂಬಿಸುವ ಕನಸು : ನೀವು ಸಹೋದರಿ, ಸಹೋದರ ಅಥವಾ ಸಂಬಂಧಿಕರ ಕೆನ್ನೆಗೆ ಮುತ್ತು ನೀಡುವ ಕನಸು ಕಂಡರೆ ನಿಮ್ಮ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಿರುತ್ತದೆ. ನೀವು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ, ಭವಿಷ್ಯದಲ್ಲಿಯೂ ಚೆನ್ನಾಗಿ ಇರುತ್ತೀರಿ ಎನ್ನುವುದನ್ನು ಸೂಚಿಸುತ್ತದೆ.

ತಾಯಿ ಅಥವಾ ನಿಮ್ಮ ತಂದೆಯನ್ನು ಚುಂಬಿಸುವ ಕನಸು : ಹೆತ್ತ ತಂದೆ ತಾಯಿ ಅಥವಾ ಪೋಷಕರನ್ನು ಚುಂಬಿಸುವ ಕನಸು ಕಂಡರೆ ಇದು ನಿಮಗೆ ಹೆತ್ತವರ ಮೇಲೆ ಕಾಳಜಿ ಎಷ್ಟು ಇದೆ ಎನ್ನುವುದನ್ನು ತೋರಿಸುತ್ತದೆ. ಈ ಕನಸು ತಂದೆ ತಾಯಿಯ ಮೇಲಿನ ಪ್ರೀತಿ, ಕಾಳಜಿಯ ಸಂಕೇತವಾಗಿದೆ. ಈ ರೀತಿ ಕನಸು ಕಂಡರೆ ಅದು ಅದೃಷ್ಟದ ಕನಸು ಎನ್ನಲಾಗುತ್ತದೆ.

ಅಪರಿಚಿತ ವ್ಯಕ್ತಿಯನ್ನು ಚುಂಬಿಸುವ ಕನಸು : ಯಾರೋ ಗುರುತು ಪರಿಚಯವಿಲ್ಲದ ಅಪರಿಚಿತ ವ್ಯಕ್ತಿಯನ್ನು ಕನಸಿನಲ್ಲಿ ಚುಂಬಿಸಿದರೆ ಜೀವನದಲ್ಲಿ ಹೊಸ ಹೊಸ ವಿಷಯಗಳನ್ನು ತಿಳಿಯಲು ಆಸಕ್ತಿ ಹೊಂದಿದ್ದೀರಿ. ಹಾಗೂ ಈ ರೀತಿ ಕನಸು ಕಾಣುಕಾ ವ್ಯಕ್ತಿಗಳು ಹೊಸದನ್ನು ಪ್ರಯತ್ನಿಸಲು ಇಷ್ಟಪಡುತ್ತಾರೆ ಎಂದರ್ಥ.

ಶತ್ರುವನ್ನು ಚುಂಬಿಸುವ ಕನಸು : ರಾತ್ರಿ ಕನಸಿನಲ್ಲಿ ನಿಮ್ಮ ಶತ್ರುಗಳಲ್ಲಿ ಯಾರನ್ನಾದರೂ ಚುಂಬಿಸಿದರೆ, ನಿಮ್ಮ ವಿರೋಧಿ ಸ್ವಭಾವವನ್ನು ತೋರಿಸುತ್ತದೆ. ನೀವು ಯಾರನ್ನು ಕೂಡ ಇಷ್ಟ ಪಡುವುದಿಲ್ಲ ಎನ್ನುವುದನ್ನು ತಿಳಿಸಲು ಪ್ರಯತ್ನಿಸುತ್ತಿದ್ದೀರಿ ಎನ್ನುವುದನ್ನು ಸೂಚಿಸುತ್ತದೆ.

WhatsApp Group Join Now
Telegram Group Join Now
Share This Article
error: Content is protected !!