ತುಮಕೂರು: ಜಿಲ್ಲೆ ಪಾವಗಡ ತಾಲೂಕು ಬಿಜೆಪಿ ಪಕ್ಷದ ವತಿಯಿಂದ ಶನಿವಾರ ಪಾವಗಡ ಪಟ್ಟಣದಲ್ಲಿರುವ ನಿರಕ್ಷಣ ಮಂದಿರ ದಿಂದ ಶನಿಮಾತ್ಮ ಸರ್ಕಲ್ ಹಾಗೂ ಪಾವಗಡ ತಾಲೂಕ್ ಆಫೀಸ್ ಕಚೇರಿ ಯವರಿಗೆ ಬಿಜೆಪಿ ಪಕ್ಷದ ಮುಖಂಡರು ಹಾಗೂ ನೂರಾರು ಜನ ಕಾರ್ಯಕರ್ತರೊಂದಿಗೆ ಕಾಲ್ನಡಿಗೆ ಮುಖಾಂತರ ಪ್ರತಿಭಟನೆ ಮಾಡಿ ತಹಸಿಲ್ದಾರ್ ಆಫೀಸ್ ಕಚೇರಿಗೆ ಭೇಟಿ ನೀಡಿ ಪಕ್ಷದ ವತಿಯಿಂದ ತಾಲೂಕ್ ಆಫೀಸ್ ಆವರಣದಲ್ಲಿ ಪ್ರತಿಭಟನೆ
ದಿನಾಂಕ 05-04-2025 ರಂದು ಬೆಳಿಗ್ಗೆ ಸುಮಾರು 11:00 ಗಂಟೆ ಸಮಯಕ್ಕೆ ರಾಜ್ಯ ಬಿಜೆಪಿ ಘಟಕದ ಆದೇಶದ ಮೇರೆಗೆ ಪಾವಗಡ ತಾಲ್ಲೂಕು ಪಾವಗಡ ನಗರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದು,
ಬಿಜೆಪಿ ಪಕ್ಷದ ಪಾವಗಡ ತಾಲ್ಲೂಕು ಮಂಡಲ ಅಧ್ಯಕ್ಷ ಅಶೋಕ್ ಕುಮಾರ್ ಮಾತನಾಡಿ ರಾಜ್ಯ ಸರ್ಕಾರವು ಜನಸಾಮಾನ್ಯರ ದಿನ ನಿತ್ಯ ಬಳಕೆ ವಸ್ತುಗಳ ಮೇಲೆ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿರುವುದು ಸರಿಯಲ್ಲ ರಾಜ ಸರ್ಕಾರ ಮಾಡಿರುವ ಬೆಲೆ ಏರಿಕೆ ಜಾಸ್ತಿ ಮಾಡಿ ಕರ್ನಾಟಕ ಜನರನ್ನು ಮೋಸ ಮಾಡುತ್ತಿದ್ದಾರೆ ತಾಲೂಕಿನಲ್ಲಿರುವ ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ಅಧಿಕಾರಗಳು ಇದ್ದಾರೆ ಅದಕ್ಕೆ ಇವರನ್ನು ಪರಿಗಣಿಸಿ ಭ್ರಷ್ಟಾಚಾರ ಮಾಡಿರುವ ಅಧಿಕಾರಿಗಳನ್ನು ಓಡಿಸಿ ಜನ ಸಾಮಾನ್ಯರಿಗೆ ಕೆಲಸ ಮಾಡಿವ ಅಧಿಕಾರಿಗಳನ್ನು ತಾಲ್ಲೂಕು ಕಚೇರಿಗಳಿಗೆ ನೇಮಿಸಬೇಕೆಂದು ಒತ್ತಾಯ ಮಾಡಿದ್ದಾರೆ
ಬಿಜೆಪಿ ಪಕ್ಷದ ರಾಜ್ಯ ಓಬಿಸಿ ಕಾರ್ಯದರ್ಶಿ ಮಾತನಾಡಿ ಇಡೀ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಜನರನ್ನು ಭಾರಿ ಮೋಸ ಮಾಡುತ್ತಿದ್ದಾರೆ ಹಾಲಿನ ಧರ ಏರಿಕೆ, ವಿದ್ಯುತ್ ಬೆಲೆ ಏರಿಕೆ, ಸಾರಿಗೆ ಬಸ್ ಟಿಕೆಟ್ ಧರ ಏರಿಕೆ, ಡೀಸೆಲ್ ಬೆಲೆ ಏರಿಕೆ, ಹೇಳಿ ಪಾವಗಡ ತಾಲ್ಲೂಕಿನಲ್ಲಿ ಪಟ್ಟಣದಲ್ಲಿರುವ ಪುರಸಭೆಯಲ್ಲಿ 23 ಸದಸ್ಯರು ಇದ್ದು 21 ಕಾಂಗ್ರೆಸ್ ಪಕ್ಷದ ಸದಸ್ಯರುದ್ದು ಅಂಗಡಿ ಬಾಡಿಗೆಗಳಲ್ಲಿ ಹರಾಜ್ ಒಂದು ಅಂಗಡಿ 35 ಸಾವಿರ ಮತ್ತು 40, ಸಾವಿರ ವರೆಗೂ ಅವರಗೆ ಇಷ್ಟ ಬಂದಂಗೆ ಹರಾಜು ಮಾಡಿಕೊಂಡಿದ್ದಾರೆ ಎಂದು ಹೇಳಿ ಪಾವಗಡ ಪಟ್ಟಣದ ಪುರಸಭೆಯಲ್ಲಿ ಮೂರು ತಿಂಗಳಗೊಮ್ಮೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ಬದಲಾವಣೆಗಳನ್ನು ಮಾಡಿಕೊಂಡು ಪಟ್ಟಣದಲ್ಲಿ ಅಭಿವೃದ್ಧಿ ಶೂನ್ಯ ಹೇಳಿದ್ದಾರೆ ನಂತರ ತಾಲೂಕಿನಲ್ಲಿರುವ ಸರ್ಕಾರಿ ಆಸ್ಪತ್ರೆಗಳು ಡಾಕ್ಟರ್ ಇಲ್ಲದೆ ಕಾರಣದಿಂದ ಹತ್ತು ದಿನಗಳ ಹಿಂದೆ ನಾವು ಪ್ರತಿಭಟನೆ ಮಾಡಿದ್ದೇವೆ ಆದರೂ ಕೂಡ ಇನ್ನೂ ಡಾಕ್ಟರಗಳನ್ನು ನೇಮಕ ಮಾಡಿಲ್ಲ ಇನ್ನೂ ಒಂದು ವಾರ ನೋಡುತ್ತೇವೆ ಡಾಕ್ಟರ್ ಗಳನ್ನು ನೇಮಕ ಮಾಡದಿದ್ದರೆ ಸರ್ಕಾರಿ ಆಸ್ಪತ್ರೆಯ ಮುಂದೆ ಬಿಜೆಪಿ ಪಕ್ಷದ ವತಿಯಿಂದ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ,
ಇದೇ ವೇಳೆಯಲ್ಲಿ ಜಿಲ್ಲೆಯ ಬಿಜೆಪಿ ಪಕ್ಷದ ಕೋರ್ ಕಮಟಿಯ ಸದಸ್ಯ ಡಾಕ್ಟರ್ ವೆಂಕಟರಾಮಯ್ಯ ಮಾತನಾಡಿ ಮಸೂದೆಯನ್ನು ಜಾರಿಗೆ ತಂದಿರುವ ಕರ್ನಾಟಕ ಸರ್ಕಾರ ಸಂವಿದಾನ ವಿರೋದಿ ಹಾಗೂ ಹಿಂದೂ ವಿರೋದಿ ಅಂತ ಹೇಳಿ ಧರ ಏರಿಕೆಗಳನ್ನು ಕೂಡಲೇ ರದ್ದುಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿ ಎಂದು ಹೇಳಿದ್ದಾರೆ .
ಇದೇ ವೇಳೆಯಲ್ಲಿ ಬಿಜೆಪಿ ಪಕ್ಷದ ಮುಖಂಡರು ಹಾಗೂ ನೂರಾರು ಜನ ಕಾರ್ಯಕರ್ತರದೊಂದಿಗೆ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಸಿಲ್ದಾರ್ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ FDA ನೌಕರರಾದ ಸುಬ್ಬಲಕ್ಷ್ಮಮ್ಮ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು ಈ ವೇಳೆಯಲ್ಲಿ ಮನವಿ ಪತ್ರವನ್ನು ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಮಾತನಾಡಿದ FDA ಸುಬ್ಬಲಕ್ಷ್ಮಮ್ಮ ಬೆಲೆ ಏರಿಕೆ ವಿಚಾರವಾಗಿ ಮನವಿ ಪತ್ರದಲ್ಲಿ ಸಲ್ಲಿಸಿರುವ ವಿಚಾರಗಳು ಜಿಲ್ಲಾ ಕಚೇರಿ ಅಧಿಕಾರಿಗಳಿಗೆ ರಾಜ ಸರ್ಕಾರ ಕಚೇರಿ ಗಳಿಗೆ ಮನವಿ ಪತ್ರವನ್ನು ತಲುಪಿಸುತ್ತೇವೆಂದು ತಿಳಿಸಿದರು
ಈ ವೇಳೆ ಬಿಜೆಪಿ ಪಕ್ಷದ ಬಿಕೆಹಳ್ಳಿ ನಾರಾಯಣಸ್ವಾಮಿ. ಪುರಸಭಾ ಮಾಜಿ ನಾಮಿನಿ ಸದಸ್ಯರಾದ ಗೋಲ್ಡನ್ ಮಂಜುನಾಥ್. ಬಿಜೆಪಿ ಪಕ್ಷದ ಎಸ್ಸಿ ಘಟಕದ ಅಧ್ಯಕ್ಷ ಪ್ರಸನ್ನ ಸುಮನ್. ವೆಂಕಟಾಪುರ ಮಣಿ, ಹಲವಾರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ಇತರರು ಹಾಜರಿದ್ದರು.
ವರದಿ: ಶಿವಾನಂದ