ಭಾರತ ವೈಭವ BV 5 ನ್ಯೂಸ್ ವರದಿ: ಎಚ್ಚೆತ್ತ ತಿಪಟೂರು ನಗರಸಭೆ
ತುರುವೇಕೆರೆ: ಮಲ್ಲಾಘಟ್ಟ ಕೆರೆಗೆ ತಿಪಟೂರು ನಗರದ ಯುಜಿಡಿ (ಒಳಚರಂಡಿ) ನೀರು ಹರಿಯುತ್ತಿರುವ ಬಗ್ಗೆ ವರದಿ ಬಂದ ಹಿನ್ನೆಲೆ ತಿಪಟೂರು ನಗರಸಭೆ ಆಯುಕ್ತರು ಎಚ್ಚೆತ್ತಿದ್ದು, ತಿಪಟೂರು ತಾಲೂಕಿನ ಈಚನೂರು ಕೆರೆಯ ವಾಲ್ ಅನ್ನು ಬಂದ್ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ತಾಲೂಕಿನ ಜೀವನದಿ ಎಂದೇ ಹೆಸರಾದ ಮಲ್ಲಾಘಟ್ಟ ಕೆರೆಗೆ ತಿಪಟೂರು ನಗರದ ಯುಜಿಡಿ (ಒಳಚರಂಡಿ)ಯ ಕೊಳಚೆ ನೀರು ಹರಿದು ಬರುತ್ತಿದ್ದು, ಇದರಿಂದ ನೀರು ಕಲುಷಿತಗೊಳ್ಳುತ್ತಿದ್ದು, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮಲ್ಲಾಘಟ್ಟ ಶ್ರೀ ಗಂಗಾಧರೇಶ್ವರ ದೇವಾಲಯ ಸಮಿತಿ ಕಾರ್ಯದರ್ಶಿ ಕಾಂತರಾಜು ಒತ್ತಾಯಿಸಿರುವ ಬಗ್ಗೆ BV5 ನ್ಯೂಸ್ (ಭಾರತ ವೈಭವ) ವಿಸ್ತೃತ ವರದಿ ಮಾಡಿತ್ತು.
ಈಗ ಈಚನೂರು ಕೆರೆ ವಾಲ್ ಬಂದ್ ಮಾಡಿರುವ ಕಾರಣ ತಾತ್ಕಾಲಿಕವಾಗಿ ನೀರು ಹರಿವು ನಿಂತಂತಾಗಿದೆ. ಯುಜಿಡಿ ನೀರು ಹರಿಯುತ್ತಿದೆಯೇ? ಇಲ್ಲವೇ? ಪರಿಶೀಲಿಸಿ ನೀರು ಮಲ್ಲಾಘಟ್ಟ ಕೆರೆಗೆ ಹರಿಯದಂತೆ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ತಿಳಿಸಿದ್ದಾರೆ.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ



