——————————-ಪ್ರಾಣಹಾನಿ, ಆಸ್ತಿ-ಪಾಸ್ತಿ ದಕ್ಕೆ ವರದಿಯಾಗಿಲ್ಲ
ಅಸ್ಸಾಂನ ಮಧ್ಯ ಭಾಗದ ಪ್ರದೇಶಗಳಲ್ಲಿ ಸೋಮವಾರ ಬೆಳಗ್ಗೆ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆ ದಾಖಲಾಗಿದೆ.
ಈ ಭೂಕಂಪದಿಂದ ಯಾವುದೇ ಪ್ರಾಣಾಪಾಯ ಅಥವಾ ಆಸ್ತಿನಷ್ಟದ ಬಗ್ಗೆ ಯಾವುದೇ ವರದಿಗಳಾಗಿಲ್ಲ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ವರದಿ ಪ್ರಕಾರ, ಬೆಳಿಗ್ಗೆ 4.17ಕ್ಕೆ ಬ್ರಹ್ಮಪುತ್ರ ನದಿಯ ದಕ್ಷಿಣ ದಡದಲ್ಲಿರುವ ಮೋರಿಗಾಂ ಜಿಲ್ಲೆಯಲ್ಲಿ ಭೂಕಂಪ ದಾಖಲಾಗಿದ್ದು, 50 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ.
ಭೂಕಂಪದ ಕೇಂದ್ರಬಿಂದು ಮಧ್ಯ ಅಸ್ಸಾಂನಲ್ಲಿ 26.37 ಉತ್ತರ ಅಕ್ಷಾಂಶ ಮತ್ತು 92.29 ಪೂರ್ವ ರೇಖಾಂಶದಲ್ಲಿದೆ ಎಂದು ತಿಳಿಸಿದೆ.




