Ad imageAd image

ಭಾರತ ವನಿತೆಯರಿಗೆ ಸುಲಭ ಗೆಲುವು

Bharath Vaibhav
ಭಾರತ ವನಿತೆಯರಿಗೆ ಸುಲಭ ಗೆಲುವು
WhatsApp Group Join Now
Telegram Group Join Now

——————————————ಶ್ರೀಲಂಕಾ ವಿರುದ್ಧದ ಟ್ವೆಂಟಿ ಪಂದ್ಯ

ವಿಶಾಖಪಟ್ಟಣಂ: ಭಾರತ ಪ್ರವಾಸದಲ್ಲಿರುವ ಶ್ರೀಲಂಕಾ ಮಹಿಳಾ ತಂಡದ ವಿರುದ್ಧ ಕಳೆದ ರಾತ್ರಿ ಇಲ್ಲಿ ನಡೆದ ಮೊದಲ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯದಲ್ಲಿ ಭಾರತದ ವನಿತೆಯರು ೮ ವಿಕೆಟ್ ಗಳ ಜಯ ಸಾಧಿಸಿದ್ದಾರೆ.
ಇಲ್ಲಿನ ವಿಸಿಎ- ವಿಡಿಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಮಹಿಳಾ ತಂಡ ನಿಗದಿತ ೨೦ ಓವರುಗಳಲ್ಲಿ ೬ ವಿಕೆಟ್ ಗೆ ೧೨೧ ರನ್ ಗಳಿಸಿತು. ಸುಲಭದ ಗುರಿ ಬೆನ್ನಟ್ಟಿದ ಭಾರತ ವನಿತೆಯರ ತಂಡವು ೧೪.೪ ಓವರುಗಳಲ್ಲಿ ೨ ವಿಕೆಟ್ ಗೆ ೧೨೨ ರನ್ ಗಳಿಸಿ ಸುಲಭ ಜಯ ಪಡೆಯಿತು.
ಸ್ಕೋರ್ ವಿವರ
ಶ್ರೀಲಂಕಾ ೨೦ ಓವರುಗಳಲ್ಲಿ ೬ ವಿಕೆಟ್‌ಗೆ ೧೨೧
ವಿಶ್ಮಿ ಗುಣರತ್ನೆ ೩೯ ( ೪೩ ಎಸೆತ, ೧ ಬೌಂಡರಿ, ೧ ಸಿಕ್ಸರ್), ಕ್ರಾಂತಿಗೌಡ ೨೩ ಕ್ಕೆ ೧)
ಭಾರತ ೧೪.೪ ಓವರುಗಳಲ್ಲಿ ೨ ವಿಕೆಟ್ ಗೆ ೧೨೨
ಜೆಮಿನಿ ರೊಡ್ರಿಗ್ಸ್ ಅಜೇಯ ೬೯ ( ೪೪ ಎಸೆತ, ೧೦ ಬೌಂಡರಿ), ಸ್ಮೃತಿ ಮಂದಾನಾ ೨೫ ( ೨೫ ಎಸೆತ, ೪ ಬೌಂಡರಿ)
ಪAದ್ಯ ಶ್ರೇಷ್ಠ: ಜೆಮಿನಿ ರೊಡ್ರಿಗ್ಸ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!