Ad imageAd image

ಫಳ ಫಳ ಹೊಳೆಯುವ ಚರ್ಮಕ್ಕೆ ಈ ಆಹಾರವನ್ನು ಸೇವಿಸಿ

Bharath Vaibhav
ಫಳ ಫಳ ಹೊಳೆಯುವ ಚರ್ಮಕ್ಕೆ ಈ ಆಹಾರವನ್ನು ಸೇವಿಸಿ
WhatsApp Group Join Now
Telegram Group Join Now

ಚರ್ಮದ ಆರೋಗ್ಯ, ಗಾಯದ ವಾಸಿಮಾಡುವಿಕೆ, ಮೂಳೆಯ ಬಲ, ಮತ್ತು ಇತರ ಹಲವು ದೈಹಿಕ ವ್ಯವಸ್ಥೆಗಳು ಅಥವಾ ಕಾರ್ಯಗಳಲ್ಲಿ ಪಾತ್ರವನ್ನು ವಹಿಸುತ್ತದೆ. ಹೈಲುರಾನಿಕ್ ಆಸಿಡ್‌ ಚರ್ಮ, ಸಂಯೋಜಕ ಅಂಗಾಂಶ ಮತ್ತು ಕಣ್ಣುಗಳಲ್ಲಿ ಕಂಡುಬರುತ್ತದೆ. ಇದರ ಮುಖ್ಯ ಕಾರ್ಯವೆಂದರೆ ನೀರನ್ನು ಉಳಿಸಿಕೊಳ್ಳುವುದು. ಅಂಗಾಂಶಗಳು ಲುಬ್ರಿಕೇಟ್‌ ಮಾಡುವುದು ಮತ್ತು ತೇವಾಂಶ ಕಾಪಾಡುವುದು. ಚರ್ಮದ ಆರೋಗ್ಯವಾಗಿರಲು  ಹೈಲುರಾನಿಕ್ ಆಮ್ಲ ಹೇರಳವಾಗಿರುವ ಈ ಆಹಾರಗಳನ್ನು ದಿನದ  ಡಯಟ್‌ನಲ್ಲಿ ತಪ್ಪದೇ ಆಳವಡಿಸಿಕೊಳ್ಳಿ.

ಬೋನ್ ಬ್ರಾಥ್:
ಹೈಲುರಾನಿಕ್ ಆಸಿಡ್‌ ಹೆಚ್ಚಿಸಿಕೊಳ್ಳಲು ಬೋನ್‌ ಬ್ರಾಥ್‌ ಅಥವಾ ಮೂಳೆ ಸಾರು ತಿನ್ನುವುದು ಅತ್ಯುತ್ತಮ. ಬೋನ್‌ ಬ್ರಾಥ್‌ ಹೈಲುರಾನಿಕ್ ಆಸಿಡ್‌ ಉತ್ಪತ್ತಿಯನ್ನು ಹೆಚ್ಚಿಸಿ ಚರ್ಮವನ್ನು ಹೈಡ್ರೇಟ್‌ ಮಾಡುತ್ತದೆ.

ನಟ್ಸ್ಮತ್ತು ಸೀಡ್ಸ್‌:
ನಟ್ಸ್‌ ಮತ್ತು ಸೀಡ್ಸ್ ದೇಹಕ್ಕೆ  ದೈನಂದಿನ  ಪೋಷಕಾಂಶಗಳನ್ನು ಒದಗಿಸುತ್ತದೆ. ಅವುಗಳಲ್ಲಿರುವ  ಹೆಚ್ಚಿನ ಮೆಗ್ನೀಸಿಯಮ್ ಅಂಶದಿಂದ,  ಹೈಲುರೊನಾನ್ ಉತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಅಗತ್ಯವಾದ ಫ್ಯಾಟಿ ಆಸಿಡ್‌ಗಳನ್ನು ಹೊಂದಿರುವ ಇವು ಚರ್ಮವನ್ನು ಹೈಡ್ರೇಟ್‌ ಮಾಡುತ್ತದೆ.

ಹಸಿರು ಎಲೆ ತರಕಾರಿ:
ಇವುಗಳು ಮೆಗ್ನೀಷಿಯಮ್‌ನ ಬಲವಾದ ಮೂಲವಾಗಿದ್ದು ದೇಹದಲ್ಲಿ ಹೈಲುರಾನಿಕ್ ಆಸಿಡ್‌ ಉತ್ಪಾದನೆ ವೇಗ ಹೆಚ್ಚಿಸುತ್ತದೆ. ಮೃದು ಚರ್ಮಕ್ಕಾಗಿ ಮತ್ತು ರೇಡಿಯಂಟ್ ಗ್ಲೋಗಾಗಿ ಎಲೆಕೋಸು,  ಪಾಲಕ್, ಕೇಲ್ ಮತ್ತು ಮೈಕ್ರೋಗ್ರೀನ್‌ಗಳು ಆಹಾರದಲ್ಲಿ ಸೇರಿಸಕೊಳ್ಳುವುದು ಅಗತ್ಯ.

ರೂಟ್ ವೇಜಿಟೇಬಲ್ಸ್:
ಬೇರಿನ ತರಕಾರಿ ದೇಹದಲ್ಲಿ ಹೈಲುರಾನಿಕ್ ಆಸಿಡ್‌  ಉತ್ಪಾದನೆಯನ್ನು ಹೆಚ್ಚಿಸಬಹುದು ಎಂದು ಕೆಲವು ಸಂಶೋಧನೆಗಳು ಸೂಚಿಸುತ್ತವೆ  ಈ ಆಹಾರಗಳಲ್ಲಿ ಆಲೂಗಡ್ಡೆ, ಗೆಣಸು, ಬೀಟ್ರೂಟ್‌ ಮತ್ತು ಇತರ ಗೆಡ್ಡೆಗಳು ಸೇರಿವೆ.ಜೊತೆಗೆ ಇವುಗಳು ಪೊಟ್ಯಾಸಿಯಮ್, ಫೈಬರ್, ವಿಟಮಿನ್ ಬಿ 6, ವಿಟಮಿನ್ ಎ ಮತ್ತು ವಿಟಮಿನ್ ಸಿ ಯ ಉತ್ತಮ ಮೂಲಗಳು. ಇವೆಲ್ಲವೂ ನಮ್ಮ ದೇಹಕ್ಕೆ ಅತ್ಯಗತ್ಯ.

ಟಮೋಟೋ:
ಟೊಮೆಟೊಗಳಲ್ಲಿ ಲೈಕೋಪೀನ್‌ ಹೇರಳವಾಗಿದ್ದು, ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಹೈಲುರಾನಿಕ್ ಆಮ್ಲದ ಮಟ್ಟವನ್ನು ಪರೋಕ್ಷವಾಗಿ ಬೆಂಬಲಿಸುತ್ತದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!