Ad imageAd image
- Advertisement -  - Advertisement -  - Advertisement - 

ಶಿಕ್ಷಣ ಸಚಿವರೇ ಇಲ್ಲಿ ನೋಡಿ ಸರ್ಕಾರಿ ಶಾಲೆಯ ಮಕ್ಕಳ ಹದಕ್ಕೆಟ್ಟಿರುವ ಹಣೆಬರಹ.

Bharath Vaibhav
ಶಿಕ್ಷಣ ಸಚಿವರೇ ಇಲ್ಲಿ ನೋಡಿ ಸರ್ಕಾರಿ ಶಾಲೆಯ ಮಕ್ಕಳ ಹದಕ್ಕೆಟ್ಟಿರುವ ಹಣೆಬರಹ.
WhatsApp Group Join Now
Telegram Group Join Now

ರಾಯಬಾಗ :-ತಾಲೂಕಿನ ಗ್ರಾಮೀಣ ಪ್ರದೇಶದ ಪೂಜಾರಿ ತೋಟದಲ್ಲಿರುವ ಸರ್ಕಾರಿ ಶಾಲೆಯ ಮಕ್ಕಳ ಹಣೆಬರಹ ಅಧಿಕಾರಿಗಳೇ ತಿದ್ದಿದ್ದಾರಾ ಅಥವಾ ನಿರ್ಲಕ್ಷ್ಯ ತೋರಿದ್ದಾರ….ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

ಮಾನ್ಯ ಶಿಕ್ಷಣ ಸಚಿವರೇ ದೇವರು ಕೊಟ್ಟರೂ ಪೂಜೇರಿ ಕೊಡಲಿಲ್ಲ ಎನ್ನುವ ಗಾದೆ ಮಾತು ನಿಜ ಆಗಿದೆ….1986 ರಲ್ಲಿ ಪ್ರಾರಂಭವಾದ ಸರ್ಕಾರಿ ಶಾಲೆ ಪೂಜಾರಿ ತೋಟ… ಒಂದೇ ಕೊಠಡಿ ಇದ್ದು ಮಳೆ ಬಿಸಿಲು ಎನ್ನದೆ ಶಾಲಾ ಮಕ್ಕಳು ಆಸರೆ ಕಾಣದೆ ಶಾಲೆಯಿಂದ ಹೊರಗಡೆ ಕುಳಿತು ಅಭ್ಯಾಸ ಮಾಡುವ ಪರಿಸ್ಥಿತಿ ಎದುರಾಗಿದೆ….ಸುಮಾರು 35 ಶಾಲಾ ಮಕ್ಕಳು ಇರುವ ಈ ಶಾಲೆ ಒಂದರಿಂದ ಐದರವರೆಗೆ ತರಗತಿಗಳು ನಡೆಯುತ್ತಿವೆ.

ಆದರೆ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ದೋರಣೆ ತೋರಿದ್ದು…ದುರದೃಷ್ಟಕರ…ಕುಡಿಯಲು ನೀರಿಲ್ಲ ಶೌಚಾಲಯ ಅಂತೂ ಮೊದಲೇ ಇಲ್ಲ…ಇನ್ನೂ ಕುಳಿತು ಅಭ್ಯಾಸ ಮಾಡಬೇಕಾದರೆ ಆಸರೆ ಇಲ್ಲ…..ಶಾಲೆಯ ಹೊರಗೆ ಕುಳಿತು ಮಳೆ ಬಿಸಿಲು ಎನ್ನದೆ ವಿದ್ಯಾಬ್ಯಾಸ ಮಾಡುತ್ತಿರುವ ಶಾಲಾ ಮಕ್ಕಳು….ಅಷ್ಟಕ್ಕೂ ಶಾಲೆ ಈ ಸ್ಥಿತಿಗೆ ಅಸಲಿ ಕಾರಣ ಕೊಟ್ಟ ಪಾಲಕರು..ಅಸಲಿ ಮಾಲೀಕರ ಹಾಗೂ ಅಧಿಕಾರಿಗಳ ನಡುವೆ ಶಾಲೆಯ ಜಾಗದ ತಕರಾರು….ಏನೇ ಯಾಗಲಿ ಶಾಲೆಯ ಮಕ್ಕಳಿಗೆ ಶಾಲಾ ಕೊಠಡಿ ಕುಡಿಯುವ ನೀರು ಶೌಚಾಲಯ ಬೇಕಾಗಿದ್ದು ಅಧಿಕಾರಿಗಳು ಬೇಗನೆ ಈ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎನ್ನುವುದು ನಮ್ಮ ಆಸೆ.

ವರದಿ:- ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!