ಹುಬ್ಬಳ್ಳಿ: ಹೌದು ಈಗ ಸುವರ್ಣ ಸೌಧ ನಡೆಯುತ್ತಿರುವಾಗಲೇ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಇರುವ ಬ್ರೇಕಿಂಗ್ ಸುದ್ದಿಯನ್ನು ಬಯಲಿಗೆ ಎಳೆದಿದ್ದಿದ್ದಾರೆ. ಅಷ್ಟಕ್ಕೂ ಈ ಸ್ಟೋರಿ ಏನಂತೀರಾ..?
ಹುಬ್ಬಳ್ಳಿ ನಗರದ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಬರುವ ಹೊಸೂರಿನ ನಂ 16 ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕರಾಳ ಕಥೆಯ ಸ್ಟೋರಿ..! ಅಷ್ಟಕ್ಕೂ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಕಸ ತುಂಬುವ ಎಲ್ಲಾ ವಾಹನಗಳು ದಿನನಿತ್ಯ ಬೆಳಿಗ್ಗೆ ವಿವಿಧ ವಾರ್ಡ್ ಗಳಲ್ಲಿ ಸಂಚಾರ ಮಾಡಿ ಕಸ ತುಂಬಿಕೊಂಡು ಬಂದು ದಿನನಿತ್ಯ ಮಧ್ಯಾಹ್ನದ ವೇಳೆಗೆ ಈ ಸರ್ಕಾರಿ ಶಾಲೆ ಆವರಣದಲ್ಲಿ ಬಂದು ಪಾರ್ಕಿಂಗ್ ಮಾಡ್ತಾರಂತೆ. ಇನ್ನೂ ದಿನನಿತ್ಯ ಇಲ್ಲಿ ಆವರಣದಲ್ಲಿ ಆಟವಾಡುವಾಗ ಹಾಗೂ ಮಧ್ಯಾಹ್ನದ ವೇಳೆ ಊಟ ಮಾಡುವಾಗ ಸರ್ಕಾರಿ ಶಾಲಾ ಮಕ್ಕಳು ದುರ್ವಾಸನೆಯಲ್ಲೇ ಊಟ ಮಾಡುವುದು, ಆಟ ವಾಡುವುದು ಆಗ್ತಾ ಇದೆಯಂತೆ.. ಇನ್ನೂ ಇದೇ ಸರ್ಕಾರಿ ಶಾಲೆಯ ಆವರಣದಲ್ಲಿ ಸರ್ಕಾರಿ ಪ್ರೌಢಶಾಲೆ ಸಹ ಇದ್ದು ಇಲ್ಲಿರುವ ಶಿಕ್ಷಕರು ಮಾತ್ರ ಕಣ್ಣಿದ್ದೂ ಕುರುಡಾಗುವ ಪರಿಸ್ಥಿತಿ ನಿರ್ಮಾಣವಾಗಿದೆಯಂತೆ..! ಇನ್ನೂ ಇಲ್ಲಿರುವ ಮುಖ್ಯ ಶಿಕ್ಷಕರು ಈ ಸಮಸ್ಯೆ ಬಗ್ಗೆ ವಿಚಾರಿಸಲು ಹೋದಾಗ ಓಡಿ ಹೋಗಿರುವ ಪ್ರಸಂಗ ನಡೆದಿದೆ. ಆದ್ದರಿಂದ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಸಮಗ್ರವಾಗಿ ವರದಿ ತಯಾರಿಸಿ ಶಿಕ್ಷಣ ಸಚಿವರ ಗಮನಕ್ಕೆ ತೆಗೆದುಕೊಂಡು ಬರುವ ಕೆಲಸ ಮಾಡಿದ್ದಾರೆ. ಇನ್ನಾದ್ರೂ ಈ ಶಾಲೆಗೆ ಕಸದ ವಾಹನಗಳಿಂದ ಮುಕ್ತಿ ಕೋಡಿಸುವವರೇ ಎಂಬುದನ್ನು ಕಾದುನೋಡಬೇಕಿದೆ
ವರದಿ: ಬಸವರಾಜು