ಸಿರುಗುಪ್ಪ : ನಗರದ ಶ್ರೀ ಅಭಯಾಂಜನೇಯ್ಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ರಾಜೀವ್ ಗಾಂಧಿ ಸ್ಮಾರಕ ಆಂಗ್ಲ ಮಾದ್ಯಮ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದರು.
ಪ್ರವಾಸದ ನಿಮಿತ್ತ ರವಿವಾರದ ರಜೆ ಮಜೆಯೊಂದಿಗೆ ಮಕ್ಕಳ ಮನಸ್ಸಲ್ಲಿ ಕುತೂಹಲ ಮತ್ತು ಸಂಭ್ರಮದ ವಾತಾವರಣ ಕಂಡುಬಂದಿತು.
ಪ್ರಾಂಶುಪಾಲರಾದ ಸಿದ್ದಲಿಂಗ ಜೆ.ಎಮ್, ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಕಿರುಕೈಗಾರಿಕೆ, ವಿಜ್ಞಾನದ ಉಪನ್ಯಾಸ ಹಾಗೂ ರಾಜರ ಕಾಲದಲ್ಲಿ ಉಪಯೋಗಿಸಲಾದ ತಂತ್ರಜ್ಞಾನದ ಕುರಿತಾಗಿ ಭೋಧನೆಗಾಗಿ ಶಾಲಾ ಆಡಳಿತ ಮಂಡಳಿಯಿಂದ ಶೈಕ್ಷಣಿಕ ಅಧ್ಯಯನ ಪ್ರವಾಸ ಹಮ್ಮಿಕೊಳ್ಳಲಾಗಿದೆ.
ಪ್ರವಾಸದಲ್ಲಿ 50 ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದು ಪ್ರಥಮವಾಗಿ ಬಳ್ಳಾರಿಯ ಶ್ರೀ ಕನಕ ದುರ್ಗಮ್ಮ ದೇವಿಯ ದರ್ಶನ ಮಾಡಿ ಕೋಟೆ, ವಿಜ್ಞಾನ ಕೇಂದ್ರ, ಕೆ.ಎಮ್.ಎಫ್ ಹಾಲಿನ ಘಟಕದಲ್ಲಿನ ಉತ್ಪನ್ನಗಳ ವೀಕ್ಷಣೆ.
ಹೊಸಪೇಟೆಯಲ್ಲಿನ ತುಂಗಾಭದ್ರ ಜಲಾಶಯ ಇನ್ನಿತರ ಪ್ರವಾಸಿ ಸ್ಥಳಗಳ ಬಗ್ಗೆ ಮಕ್ಕಳಿಗೆ ವೀಕ್ಷಣೆಗೆ ಒಂದು ದಿನದ ಪ್ರವಾಸಕ್ಕೆ ತೆರಳುತ್ತಿದ್ದೇವೆ.
ಪ್ರವಾಸಕ್ಕೆ ಯಾವುದೇ ಅಡ್ಡಿ ಆತಂಕಗಳು ಎದುರಾಗದಂತೆ ಶ್ರೀ ಅಭಯಾಂಜನೇಯ್ಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತೆೆಂದು ತಿಳಿಸಿದರು.
ಇದೇ ವೇಳೆ ಶಿಕ್ಷಕರಾದ ಮಣಿಕಂಠ, ಪ್ರಿಯಾಂಕ, ಸವಿತಾ, ನೇತ್ರಾ, ಸೀಮಾ, ರಿಹಾನಾ, ಜಾನ್ಸಿ, ಉಮೇರ್ ಸಲ್ಮಾ ಹಾಗೂ ವಿದ್ಯಾರ್ಥಿಗಳು ಇದ್ದರು.
ವರದಿ : ಶ್ರೀನಿವಾಸ ನಾಯ್ಕ