ನಿಪ್ಪಾಣಿ: ಕೊಲ್ಲಾಪುರ ಜಿಲ್ಲೆಯ ಇಚಲಕರಂಜಿ ಪಟ್ಟಣದ ಕಲ್ಲಪ್ಪಣ್ಣ ಅವಾಡೆ ಇಚಲಕರಂಜಿ ಜನತಾ ಮಲ್ಟಿಸ್ಟೇಟ್ ಬ್ಯಾಂಕಿಗೆ ಸನ್ 2024 2025 ನೇ ಸಾಲಿನಲ್ಲಿ ದಾಖಲೆ 2862 ಕೋಟಿ ರೂಪಾಯಿ ಠೇವು ಸಂಗ್ರಹಿಸಿ ಸದಸ್ಯರಿಗೆ 1846 ಕೋಟಿ ರೂಪಾಯಿ ಸಾಲ ನೀಡಿ ದಾಖಲೆ 4708 ಕೋಟಿ ರೂಪಾಯಿ ವಾರ್ಷಿಕ ವ್ಯವಹಾರ ನಡೆಸಿ 55 ಕೋಟಿ ರೂಪಾಯಿ ನಿವ್ವಳ ಲಾಭ ಪಡೆದು ಕರ್ನಾಟಕ ಮಹಾರಾಷ್ಟ್ರದಲ್ಲಿ 54 ಶಾಖೆಗಳ ಮುಖಾಂತರ ಎರಡು ರಾಜ್ಯಗಳಲ್ಲಿ ಅಧಿಕ ಲಾಭಗಳಿಸುವಲ್ಲಿ ನಂಬರ ಒನ್ ಸ್ಥಾನದಲ್ಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಸ್ವಪ್ನಿಲ್ ಅವಾ ಡೆ ತಿಳಿಸಿದರು.
ಈಜಲಕರಂಜಿ ಪಟ್ಟಣದ ಕಲ್ಲಪ್ಪಣ್ಣ ಅವಾಡೇ ಇಚಲಕರಂಜಿ ಜನತಾ ಬ್ಯಾಂಕಿನ ಮುಖ್ಯ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಈ ಸಂದರ್ಭದಲ್ಲಿ ಉಪಾದ್ಯಕ್ಷ ಸಂಜಯಕುಮಾರ ಅನಿಗೋಳ ಹಾಗೂ ಮುಖ್ಯ ಕಾರ್ಯಕಾರಿ ಅಧಿಕಾರಿ ಸಂಜಯ ಶಿರಗಾವಿ ಮಾತನಾಡಿ ಬ್ಯಾಂಕಿನ ಸಂಸ್ಥಾಪಕ ಕಲ್ಲಪ್ಪಣ್ಣ ಅವಾಡೆ ಹಾಗೂ ಮಾಜಿ ಸಚಿವ ಪ್ರಕಾಶ ಅವಾಡೆ ಯವರ ಮಾರ್ಗದರ್ಶನದಲ್ಲಿ ಅಲ್ಪಾವಧಿಯಲ್ಲಿಯೇ ಕರ್ನಾಟಕ ಮಹಾರಾಷ್ಟ್ರದಲ್ಲಿ ಆರ್ಥಿಕ ಸಮೃದ್ಧಿಯೊಂದಿಗೆ ಶಿಖರ ಮಟ್ಟಕ್ಕೆ ಬೆಳೆದಿದ್ದು ಅತಿ ಶೀಘ್ರದಲ್ಲಿಯೇ ಗೋವಾದಲ್ಲೂ ಬ್ಯಾಂಕಿನ ವಿಸ್ತರಣೆಯಾಗಲಿದೆ ಬ್ಯಾಂಕಿನಿಂದ ಎಟಿಎಂ, ಆರ್ಟಿ ಜಿಎಸ್ ನೆಪ್ಟ್ ಸೇರಿ ಆತ್ಯಾಧುನಿಕ ಸೌಲಭ್ಯದೊಂದಿಗೆ ತ್ವರಿತ ಸೇವೆಗೆ ಲಭ್ಯವಾಗುತ್ತಿರುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸಿಎ ಚಂದ್ರಕಾಂತ್ ಚೌಗುಲೆ,ಮಹೇಶ್ ಸಾತಪುತೆ , ಬಂಡೋಪಂತ ಲಾಡ, ನೆರ್ಲಿಸಾಹೇಬ ಸೇರಿದಂತೆ ಬ್ಯಾಂಕಿನ ಎಲ್ಲಾ ನಿರ್ದೇಶಕ ಮಂಡಳಿ ಸದಸ್ಯರು ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ