ಕಾಳಗಿ : ಸಿದ್ದಾರ್ಥ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ಎನ್ ಎಸ್ ಎಸ್ ಘಟಕ ಉದ್ಘಾಟನೆ ಮತ್ತು ಸಾಮೂಹಿಕ ರಕ್ಷಾ ಬಂಧನವನ್ನು ಅಂಬಿಕಾ ಬ್ರಹ್ಮಕುಮಾರಿ ಆಶ್ರಮ ಕಾಳಗಿ ಅವರ ನೇತೃತ್ವದಲ್ಲಿ ಜರುಗಿತ್ತು.
ಇಂದು ಕಾಳಗಿ ತಾಲೂಕಿನ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನ 2025-26ನೇ ಸಾಲಿನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ಎನ್ ಎಸ್ ಎಸ್ ಘಟಕ ಉದ್ಘಾಟನೆ ಸಮಾರಂಭ ಮತ್ತು ಸಾಮೂಹಿಕ ರಕ್ಷಾ ಬಂಧನವನ್ನು ಅಂಬಿಕಾ ಬ್ರಹ್ಮಕುಮಾರಿ ಆಶ್ರಮ ಕಾಳಗಿ ಅವರ ನೇತೃತ್ವದಲ್ಲಿ ಜರುಗಿತ್ತು.

ಮುಖ್ಯ ಅತಿಥಿಯಾಗಿ ಅಂಬಿಕಾ ಬ್ರಹ್ಮಕುಮಾರಿ ಆಶ್ರಮ ಕಾಳಗಿಯವರು ಮಾತನಾಡಿ ಮಾನವೀಯ ಮೌಲ್ಯಗಳು ಮತ್ತು ಆಂತರಿಕ ಪ್ರಜ್ಞೆ ಬೆಳಸಿಕೊಳ್ಳುವ ಕಡೆಗೆ ತುಂಬಾ ಘಮನ ಹರಿಸಬೇಕು ಎಂದರು, ನಂತರ ಡಾ ಶಂಕರ ಬಿ ಮೂಲಿಮನಿ ಮಾತನಾಡಿ ನನ್ನ ಕಾಲೇಜಿನ ಬುನಾದಿಯ ನನ್ನ ವಿದ್ಯಾರ್ಥಿಗಳು, ಅಜ್ಞಾದ ಕಡೆ ಮೋರೆ ಹೋಗುವುದ್ಕಕಿಂತ, ಜ್ಞಾನದ ಮೋರೆ ಹೋಗಿ ಎಂದು ಕಿವಿ ಮಾತು ಹೇಳಿದರು.
ಇದೆ ವೇಳೆ ರಕ್ಷಾ ಬಂಧನ ಪ್ರಯುಕ್ತ ರಾಖಿ ಕಟ್ಟುವ ಮೂಲಕ ವಿದ್ಯಾರ್ಥಿಗಳಲ್ಲಿ ಸಹೋದರತ್ವ ಸಂಬಂಧ ಘಟ್ಟಿಗೊಳಿಸಲಾಯಿತು ಮತ್ತು ಪ್ರಥಮ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಬಹುಮಾನ ವಿತರಣೆ ಮಾಡಲಾಯಿತು , ಈ ಸಂದರ್ಭದಲ್ಲಿ ವಿಜಯಲಕ್ಷ್ಮಿ ಮುಕುಂದರಾವ ಮಾಳಿಂಗೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷರು ಕೋಡದೂರು, ಅವಿನಾಶ್ ಮಾಳಿಂಗೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ, ಶಾಂತಕುಮಾರ ಪ್ರಾಂಶುಪಾಲರು ಸಿದ್ದಾರ್ಥ ಕಾಲೇಜು ಕಾಳಗಿ, ಡಾ. ಸುನೀತಾ, ಉಪನ್ಯಾಸಕ ವೃಂದ ಲಕ್ಷ್ಮಿಕಾಂತ ಗಂಗಾ, ಸಚಿನ್ ಬಡಿಗೇರ್, ಫರವವೀನ ಶೇಕ್, ವಿದ್ಯಾರ್ಥಿಗಳು, ಸಿದ್ದಣ್ಣ ಶೆಟ್ಟಿ ಅರ್ಥ ಶಾಸ್ತ್ರ ಉಪನ್ಯಾಸಕರು ನಿರೂಪಿಸಿದರು.
ವರದಿ : ಹಣಮಂತ ಕುಡಹಳ್ಳಿ




